ETV Bharat / state

ಅಜ್ಜನ ಅಂತ್ಯಕ್ರಿಯೆಗೂ ತೆರಳದೆ ಸಂತ್ರಸ್ತರಿಗೆ ನೆರವು... ವಿಜಯಪುರ ಡಿಸಿ ಕರ್ತವ್ಯ ನಿಷ್ಠೆಗೆ ಜನರ ಮೆಚ್ಚುಗೆ

author img

By

Published : Aug 13, 2019, 9:08 PM IST

ಅಜ್ಜ ವಿಧಿವಶರಾಗಿರುವ ಸುದ್ದಿ ತಿಳಿದರೂ ಕೂಡ ಅಂತ್ಯ ಸಂಸ್ಕಾರಕ್ಕೂ ಹೋಗದೆ ಪ್ರವಾಹ ಸಂತ್ರಸ್ತರ ನೆರವಿಗೆ ನಿಲ್ಲುವ ಮೂಲಕ ಕರ್ತವ್ಯ ನಿಷ್ಠೆ ಮೆರೆದ ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಇತರರಿಗೆ ಮಾದರಿಯಾಗಿದ್ದಾರೆ.

ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ್

ವಿಜಯಪುರ: ಮನೆಯಲ್ಲಿ ಅಜ್ಜ ತೀರಿಕೊಂಡಿದ್ದರೂ ಕೂಡ ಅಂತಿಮ ದರ್ಶನಕ್ಕೆ ತೆರಳದೇ ಪ್ರವಾಹ ಸಂತ್ರಸ್ತರ ನೆರವಿಗೆ ನಿಲ್ಲುವ ಮೂಲಕ ವಿಜಯಪುರ ಜಿಲ್ಲಾಧಿಕಾರಿ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಕೃಷ್ಣಾ, ಭೀಮಾ ನದಿ ಪ್ರವಾಹ ಹಿನ್ನೆಲೆ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡುವುದು ಸೇರಿದಂತೆ ಇತರ ಪರಿಹಾರ ಕಾರ್ಯ ನಡೆದಿತ್ತು. ಖುದ್ದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರೇ ಒಂದು ವಾರದಿಂದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ವೇಳೆ ಅವರ ಅಜ್ಜ ನಿಧನರಾದರೂ ಕೂಡ ಅಂತ್ಯಕ್ರಿಯೆಗೂ ಕೂಡ ತೆರಳಿಲ್ಲ.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಕರ್ತವ್ಯ ನಿಷ್ಠೆ

ಕಳೆದೊಂದು ವಾರದಿಂದ ಕಚೇರಿಯಲ್ಲಿ ಕೂಡದೇ ಪ್ರವಾಹಪೀಡಿತ ಗ್ರಾಮಗಳಿಗೆ ಸಂಚಾರ ಮಾಡಿದ್ದಾರೆ. ನೆರೆ ಸಂತ್ರಸ್ತರ ಸಂಕಷ್ಟ, ದುಃಖಕ್ಕೆ ಜಿಲ್ಲಾಧಿಕಾರಿ ನೆರವಾಗಿದ್ದಾರೆ. ಶುಕ್ರವಾರ ಡಿಸಿಯವರ ಅಜ್ಜ ಎಂ.ಹೆಚ್. ನಾಯ್ಕರ ನಿಧನರಾಗಿದ್ದರು. ಬಾಲ್ಯದಿಂದ ಸಾಕಿ ಸಲುಹಿದ್ದ ಅಜ್ಜನ ಅಂತ್ಯಕ್ರಿಯೆಗೂ ತೆರಳದೆ ಶೋಕದಲ್ಲೂ ಪ್ರವಾಹ ಹಿನ್ನೆಲೆ ಕರ್ತವ್ಯ ನಿರ್ವಹಿಸಿದ್ದಾರೆ.

ಅಲ್ಲದೆ ವಿಜಯಪುರ ಜಿಲ್ಲೆಯ ಯಾವುದೇ ಅಧಿಕಾರಿಗಳಿಗೂ ರಜೆ ನೀಡದೇ ಸ್ವತಃ ಮುಂದೆ ನಿಂತು ಕೆಲಸ ಮಾಡಿದ ಡಿಸಿ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಷ್ಟೇ ಅಲ್ಲ 2009ರಲ್ಲೂ ಸಾರವಾಡ ಗ್ರಾಮದ ಡೋಣಿ ನದಿ ಪ್ರವಾಹದ ಸಂದರ್ಭದಲ್ಲಿಯೂ ಮಹಾಪೂರದಲ್ಲಿ ಈಜಿ, ಇದ್ದಿಲು ಭಟ್ಟಿ ಕಾರ್ಮಿಕರನ್ನು ಇದೇ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ರಕ್ಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Intro:ವಿಜಯಪುರ Body:ವಿಜಯಪುರ: ಕರ್ತವ್ಯ ನಿಷ್ಠೆಯ ಮೂಲಕ ವಿಜಯಪುರ ಜಿಲ್ಲಾಧಿಕಾರಿ ಮಾದರಿಯಾಗಿದ್ದಾರೆ.
ಅಜ್ನ ನಿಧನರಾದರೂ ಅಂತಿಮ ದರ್ಶನಕ್ಕೂ ತೆರಳದೆ ಪ್ರವಾಹ ಸಂತ್ರಸ್ತರ ನೆರವಿಗೆ ನಿಂತ ಡಿಸಿ
ವೈ.ಎಸ್.ಪಾಟೀಲ್.
ವಿಜಯಪುರ ಜಿಲ್ಲೆಯಲ್ಲಿ ಕೃಷ್ಣಾ, ಭೀಮಾ ನದಿ ಪ್ರವಾಹ ಹಿನ್ನೆಲೆ.
ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲು ಖುದ್ದಾಗಿ ಕಳೆದ ಒಂದು ವಾರದಿಂದ ವಿಜಯಪುರ ಜಿಲ್ಲಾಧಿಕಾರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕಳೆದೊಂದು ವಾರದಿಂದ ಕಛೇರಿಯಲ್ಲಿ ಕೂಡದೇ ಪ್ರವಾಹ ಪೀಡಿತ ಗ್ರಾಮಗಳಿಗೆ ಸಂಚಾರ ಮಾಡಿದ್ದಾರೆ.
ನೆರೆ ಸಂತ್ರಸ್ತರ ಸಂಕಷ್ಟ, ದುಖಃಗಳಿಗೆ ಜಿಲ್ಲಾಧಿಕಾರಿ ಪಾಟೀಲ ನೆರವಾಗಿದ್ದಾರೆ.
ಶುಕ್ರವಾರ ಡಿಸಿ ಅವರ ಅಜ್ಜ ಎಂ. ಎಚ್. ನಾಯ್ಕರ ನಿಧನರಾಗಿದ್ದರು.
ಬಾಲ್ಯದಿಂದ ಸಾಕಿ ಸಲುಹಿದ ಅಜ್ಜನ ಅಂತ್ಯಕ್ರಿಯೆಗೂ ತೆರಳದೆ ಕರ್ತವ್ಯ ನಿರ್ವಹಿಸಿದ ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ್.
ಮಡುಗಟ್ಟಿದ ಶೋಕದಲ್ಲಿಯೂ ಪ್ರವಾಹದ ಹಿನ್ನೆಲೆ ಕರ್ತವ್ಯ ನಿರ್ವಹಿಸಿ ನಿಷ್ಠೆ ಮೆರೆದಿದ್ದಾರೆ.
ವಿಜಯಪುರ ಜಿಲ್ಲೆಯ ಯಾವುದೇ ಅಧಿಕಾರಿಗಳಿಗೂ ರಜೆ ನೀಡದೇ ಸ್ವತಃ ಕೆಲಸ ಮಾಡಿದ ಡಿಸಿ.
ವಿಜಯಪುರ ಜಿಲ್ಲೆಯ ನೆರೆ ಸಂತ್ರಸ್ತರ ಕಣ್ಣೀರು ಒರೆಸಿದ ಜಿಲ್ಲಾಧಿಕಾರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
2009ರ ಪ್ರವಾಹ ಸಂದರ್ಭದಲ್ಲಿ ಸಾರವಾಡ ಗ್ರಾಮದ ಡೋಣಿ ನದಿ ಪ್ರವಾಹ.
ಈ ಸಂದರ್ಭದಲ್ಲಿಯೂ ಡೋಣಿಯನ್ನು ಮಹಾಪೂರದಲ್ಲಿ ಈಜಿ, ಇದ್ದಿಲು ಭಟ್ಟಿ ಕಾರ್ಮಿಕರನ್ನು ರಕ್ಷಿಸಿದ್ದರು ಡಿಸಿ ವೈ. ಎಸ್. ಪಾಟೀಲ ಎಂಬುದನ್ನು ಇಲ್ಲಿ ಸ್ಮರಿಸಬಹುದು.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.