ವಿಜಯಪುರ: ನಗರದ ವಾರ್ಡ್ ನಂಬರ್ 1ರ ಲಕ್ಷ್ಮೀ ದೇವಸ್ಥಾನದ ಬಳಿಯಿರುವ ಪೈಪ್ಲೈನ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.
ಈ ಬಗ್ಗೆ ನೀರು ಸರಬರಾಜು ಮಂಡಳಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಪೈಪ್ಲೈನ್ ಒಡೆದು ನೀರು ಚರಂಡಿಗೆ ಹರಿಯುತ್ತಿರುವ ದೃಶ್ಯ ಸೆರೆಹಿಡಿದು ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.
ಸದ್ಯ, ಸ್ಥಳೀಯರು ಪೈಪ್ಗೆ ಬಟ್ಟೆಕಟ್ಟಿ ತಾತ್ಕಾಲಿಕವಾಗಿ ನೀರು ಪೋಲಾಗುವುದನ್ನು ತಡೆಹಿಡಿದಿದ್ದು, ನೀರು ಸರಬರಾಜು ಮಂಡಳಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.