ETV Bharat / state

ಮಹಿಳಾ ಕಾನ್ಸ್‌ಟೇಬಲ್​​​​​ಗೆ ಕೊರೊನಾ: ವಿಜಯಪುರ ರೈಲ್ವೆ ಪೊಲೀಸ್ ಠಾಣೆ ಸೀಲ್‌ಡೌನ್ - ವಿಜಯಪುರ ಮಹಿಳಾ ರೈಲ್ವೆ ಪೊಲೀಸ್ ಕಾನ್ಸ್‌ಟೇಬಲ್ ಗೆ ಕೊರೊನಾ

ವಿಜಯಪುರ ಮಹಿಳಾ ರೈಲ್ವೆ ಪೊಲೀಸ್ ಕಾನ್ಸ್‌ಟೇಬಲ್​​ಗೆ ಕೊರೊನಾ ದೃಢಪಟ್ಟ ಹಿನ್ನೆಲೆ ವಿಜಯಪುರ ರೈಲ್ವೆ ಪೊಲೀಸ್ ಠಾಣೆಯನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ.

Vijayapura
Vijayapura
author img

By

Published : Jul 3, 2020, 11:35 AM IST

ವಿಜಯಪುರ: ಮಹಾಮಾರಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜಿಲ್ಲಾ ರೈಲ್ವೆ ಪೊಲೀಸ್​​​ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆ ವಿಜಯಪುರ ರೈಲ್ವೆ ಪೊಲೀಸ್ ಠಾಣೆಯನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ.

ಕಳೆದ ಜೂನ್ 24 ರಂದು 21 ಜನ ರೈಲ್ವೆ ಪೊಲೀಸರ ಗಂಟಲು ದ್ರವದ ಮಾದರಿ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ ಮಹಿಳಾ ಕಾನ್ಸ್‌ಟೇಬಲ್ ಒಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ರೈಲ್ವೆ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್​​​​ಗೆ ಕೊರೊನಾ ವೈರಸ್ ತಗುಲಿದ ಹಿನ್ನೆಲೆ ಪಿಎಸ್ಐ ಸೇರಿ 20 ಜನ ಪೊಲೀಸ್ ಸಿಬ್ಬಂದಿಯನ್ನ ಕ್ವಾರಂಟೈನ್ ಮಾಡಲಾಗಿದೆ. ಒಬ್ಬರು ರೈಲ್ವೆ ಪಿಎಸ್ಐ, ಐದು ಮುಖ್ಯ ಕಾನ್ಸ್‌ಟೇಬಲ್, 14 ಕಾನ್ಸ್‌ಟೇಬಲ್​​ಗಳಿಗೆ ಕೊರೊನಾ ಆತಂಕ ಶುರುವಾಗಿದೆ.

ಇನ್ನು ಬಾಗಲಕೋಟೆಯ ಮೂವರು ರೈಲ್ವೆ ಪೊಲೀಸರಿಗೆ ವಿಜಯಪುರ ರೈಲ್ವೆ ಠಾಣೆಯ ಜವಾಬ್ದಾರಿಯನ್ನ ಹೆಚ್ಚುವರಿಯಾಗಿ ವಹಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.