ETV Bharat / state

ವಿಜಯಪುರ: ಸೈಡ್​ಗೆ ಹೋಗೆಂದು ಬುದ್ಧಿವಾದ ಹೇಳಿದ್ದಕ್ಕೆ ವೃದ್ಧನಿಗೆ ಚಾಕು ಇರಿದು ಕೊಲೆ; ಆರೋಪಿ ಪರಾರಿ - ವೃದ್ಧನ ಹತ್ಯೆ

ದ್ವಿಚಕ್ರ ವಾಹನದಲ್ಲಿ ಹೋಗುವಾಗ ಎದುರಿಗೆ ಬಂದ ಆರೋಪಿಗೆ ಸೈಡ್ ಹೋಗುವಂತೆ ಬುದ್ಧಿವಾದ ಹೇಳಿದ್ದಕ್ಕೆ ವೃದ್ಧನನ್ನು ಕೊಲೆಗೈದಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

Alamela Police Station
ಆಲಮೇಲ ಪೊಲೀಸ್ ಠಾಣೆ
author img

By ETV Bharat Karnataka Team

Published : Jan 6, 2024, 9:55 PM IST

ವಿಜಯಪುರ: ದ್ವಿಚಕ್ರ ವಾಹನದಲ್ಲಿ ಹೋಗುವಾಗ ಸೈಡ್ ಹೋಗುವಂತೆ ಬುದ್ಧಿವಾದ ಹೇಳಿದ ಮಾತ್ರಕ್ಕೆ ವೃದ್ಧನ ಹತ್ಯೆ ಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದ ಇಂಡಿ ರಸ್ತೆಯಲ್ಲಿ ನಡೆದಿದೆ. ಅಲಮೇಲ ನಿವಾಸಿ ಕಾಂತಪ್ಪ ವಿಭೂತಿಹಳ್ಳಿ ಎಂಬ ವೃದ್ಧ ಕೊಲೆಗೀಡಾದವರು. ಈ ಪ್ರಕರಣದ ಕುರಿತು ಸ್ಥಳೀಯ ಅಲಮೇಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಮನಹಳ್ಳಿಯ ಹಣ್ಣಿನ ವ್ಯಾಪಾರಿ ಅಜೀತ್​ ಆನಂದ ನಂದರಗಿ ಎಂಬಾತ ವೃದ್ಧನನ್ನು ಹತ್ಯೆಗೈದಿರುವ ಆರೋಪಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

ಬುದ್ಧಿವಾದ ಹೇಳಿದ್ದಕ್ಕೆ ವೃದ್ಧನಿಗೆ ಚಾಕು ಇರಿದು ಪರಾರಿ: ವೃದ್ಧ ಕಾಂತಪ್ಪ ವಿಭೂತಿಹಳ್ಳಿ ತನ್ನ ಮಗನೊಂದಿಗೆ ಬೈಕ್‌ನಲ್ಲಿ ಅಲಮೇಲಗೆ ಪಟ್ಟಣಕ್ಕೆ ಬರುತ್ತಿದ್ದ ವೇಳೆ ಎದುರಿಗೆ ಬೈಕ್ ಮೇಲೆ ಬಂದ ಆರೋಪಿ ಅಜೀತ್​ ನಂದರಗಿಗೆ ಸೈಡ್​ಗೆ ಹೋಗುವಂತೆ ವೃದ್ಧ ಬುದ್ಧಿವಾದ ಹೇಳಿದ್ದಾರೆ. ಇದಕ್ಕೆ ಆರೋಪಿ ಅಜೀತ್​, ಸೈಡ್ ಟ್ರ್ಯಾಕ್ಟರ್ ಇದೆಯೋ ಎಂದು ವೃದ್ಧನನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಯಾಕೆ ಬೈತಿಯಾ ಅಂಥ ವೃದ್ಧ ಕಾಂತಪ್ಪ ಆರೋಪಿಗೆ ಪ್ರಶ್ನಿಸಿದ್ದಾರೆ. ಈ ಕ್ಷುಲ್ಲಕ ಜಗಳದಲ್ಲಿ ಮಾತಿಗೆ ಮಾತಿಗೆ ಬೆಳೆದು ವಿಕೋಪಕ್ಕೆ ತಿರುಗಿದೆ.

ಆರೋಪಿ ಅಜೀತ್​ ಈ ವೇಳೆ ಕಾಂತಪ್ಪನ ಬೈಕ್ ಮೇಲಿದ್ದ ಮಗನಿಗೆ ಕಪಾಳಮೋಕ್ಷ ಮಾಡಿದ್ದಾನೆ. ಬುದ್ಧಿವಾದ ಹೇಳಿದ್ದಕ್ಕೆ ನಮಗೆ ಹೊಡೆತೀಯಾ ಎಂದು ಆರೋಪಿಗೆ ವೃದ್ಧ ಕಾಂತಪ್ಪ ಗದರಿಸಿದ್ದಾನೆ. ಈ ಸಂದರ್ಭದಲ್ಲಿ ಆರೋಪಿ ಅಜೀತ್​ ತನ್ನ ಬೈಕ್ ಬ್ಯಾಗದಲ್ಲಿದ್ದ ಚಾಕು ತಂದು ಕಾಂತಪ್ಪನಿಗೆ ಇರಿದು ಪರಾರಿಯಾಗಿದ್ದಾನೆ.

ಆಸ್ಪತ್ರೆಯಲ್ಲಿ ವೃದ್ಧ ಸಾವು: ಈ ಘಟನೆ ಕುರಿತು ವೃದ್ಧನ ಜತೆಗೆ ಇದ್ದ ಮಗನು ತಮ್ಮ ಸಂಬಂಧಿಕರಿಗೆ ತಕ್ಷಣ ಮಾಹಿತಿ ನೀಡಿದ್ದಾನೆ. ಕೂಡಲೇ ಸಂಬಂಧಿಕರೆಲ್ಲ ಸೇರಿ ತೀವ್ರ ಗಾಯಗೊಂಡಿದ್ದ ವೃದ್ಧ ಕಾಂತಪ್ಪ ಅವರನ್ನು ವಿಜಯಪುರದ ಬಿಎಲ್​ಡಿಇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವೃದ್ಧ ಕಾಂತಪ್ಪ ಮೃತಪಟ್ಟಿದ್ದಾರೆ ಎಂದು ಅಲಮೇಲ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ತಕ್ಷಣ ಎಸ್ಪಿ ಋಷಿಕೇಶ್‌ ಸೋನಾವಣೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ :ಮೈಸೂರು ವೈದ್ಯನ ಅಪಹರಣ ಪ್ರಕರಣ: 10 ವರ್ಷಗಳ ಬಳಿಕ ಆರೋಪಿ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.