ETV Bharat / state

ವಿಜಯಪುರ ಜಿಲ್ಲೆ 10ವರ್ಷಗಳಲ್ಲಿ ಕನಿಷ್ಠ ತಾಪಮಾನ ದಾಖಲು

author img

By

Published : Jan 9, 2023, 5:40 PM IST

ವಿಜಯಪುರ ಜಿಲ್ಲೆಯಲ್ಲಿ ಚಳಿಗಾಲ ತಡವಾಗಿ ಆರಂಭವಾಗಿದ್ದರೂ 10ವರ್ಷಗಳಲ್ಲಿ ಕನಿಷ್ಠ ತಾಪಮಾನ ದಾಖಲು - ಕೃಷಿ ಮಹಾವಿದ್ಯಾಲಯದ ಹವಾಮಾನ ಇಲಾಖೆಯಿಂದ ಹವಾಮಾನ ವರದಿ ಬಿಡುಗಡೆ - ಬಾಗಲಕೋಟೆ ಜಿಲ್ಲೆಯಲ್ಲೂ ಇಂದು ಕನಿಷ್ಠ 6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

Department of Meteorology, College of Agriculture
ಕೃಷಿ ಮಹಾವಿದ್ಯಾಲಯದ ಹವಾಮಾನ ಇಲಾಖೆ

ವಿಜಯಪುರ ಜಿಲ್ಲೆಯಲ್ಲಿ ಚಳಿಗಾಲ ತಡವಾಗಿಯಾಗಿದ್ದರೂ ಸಹ ಕಳೆದ ಒಂದು ದಶಕದ ಕನಿಷ್ಟ ತಾಪಮಾನ ಇಂದು ದಾಖಲಾಗಿದೆ.

ವಿಜಯಪುರ: ಉತ್ತರ ಕರ್ನಾಟಕದ ಯಾವುದೇ ಭಾಗಕ್ಕೆ ಬೇಸಿಗೆಗಾಲದಲ್ಲಿ ಹೋದರೂ ವಿಪರಿತ ಬಿಸಿಲಿನ ಪ್ರಭಾವ ಕಂಡು ಬರುತ್ತದೆ. ಎಷ್ಟರ ಮಟ್ಟಿಗೆ ಇರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಈ ಬಾರಿ ವಿಜಯಪುರ ಜಿಲ್ಲೆಯಲ್ಲಿ ಚಳಿಗಾಲ ತಡವಾಗಿಯಾಗಿದ್ದರೂ ಕಳೆದ ಒಂದು ದಶಕದ ಕನಿಷ್ಠ ತಾಪಮಾನ ಇಂದು ದಾಖಲಾಗಿದೆ. ಸೋಮವಾರ ಕೃಷಿ ಮಹಾವಿದ್ಯಾಲಯದ ಹವಾಮಾನ ಇಲಾಖೆ ಬಿಡುಗಡೆ ಮಾಡಿದ ವರದಿಯಲ್ಲಿ ಕನಿಷ್ಠ 6.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಇದು ಕಳೆದ 10 ವರ್ಷದಲ್ಲಿ ದಾಖಲಾದ ಕನಿಷ್ಠ ತಾಪಮಾನವಾಗಿದೆ. ಇದೇ ನವೆಂಬರ್ 21ರಂದು 7.6 ಡಿಗ್ರಿ ಸೆಲ್ಷಿಯಸ್ ಕನಿಷ್ಠ ತಾಪಮಾನ ಹಾಗೂ ಗರಿಷ್ಠ 28.0 ಡಿಗ್ರಿ ತಾಪಮಾನ ದಾಖಲಾಗಿತ್ತು. ಆದರೆ, ಇದನ್ನು ಮೀರಿಸುವಷ್ಟು ಚಳಿ ಜನವರಿ 9 ರಂದು 6.5 ಡಿಗ್ರಿ ಸೆಲಿಯಸ್ ತಾಪಮಾನ ದಾಖಲಾಗಿದೆ.

ಈ ರೀತಿ ಏಕಾಏಕಿ ತಾಪಮಾನ ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗೆ ಬರಲು ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಉತ್ತರ ಭಾರತದಲ್ಲಿ ಹೆಚ್ಚು ದಟ್ಟವಾದ ಮಂಜು ಸುರಿಯುತ್ತಿ ರುವುದು ಕಾರಣವಾಗಿದೆ. ವಿಜಯಪುರ ಜಿಲ್ಲೆಯಲ್ಲಿ 10 ವರ್ಷಗಳ ನಂತರ 6.5 ಸೆಲ್ಸಿಯಸ್​ನಷ್ಟು ಕನಿಷ್ಠ ತಾಪಮಾನ ದಾಖಲಾಗಿದ್ದರೆ, ಪಕ್ಕದ ಬಾಗಲಕೋಟೆ ಜಿಲ್ಲೆಯಲ್ಲಿ ಇಂದು ಕನಿಷ್ಠ 6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಕೃಷಿ ಮಹಾವಿದ್ಯಾಲಯದ ಹವಾಮಾನ ಇಲಾಖೆಯ ವರದಿ ತಿಳಿಸಿದೆ.

ಇದನ್ನೂ ಓದಿ :ಕನಿಷ್ಠ ಮಟ್ಟಕ್ಕಿಳಿದ ತಾಪಮಾನ.. ಮುಂದಿನ ಐದು ದಿನ ದೆಹಲಿ ಸೇರಿ ಹಲವೆಡೆ ದಟ್ಟ ಮಂಜು

ಮಳೆ ಪ್ರಮಾಣ ಹೆಚ್ಚಳ ಇದಕ್ಕೆ ಕಾರಣ: ಕಳೆದ ಮೂರು ವರ್ಷ ವಿಜಯಪುರ ಜಿಲ್ಲೆಯಲ್ಲಿ ಮಳೆ ಪ್ರಮಾಣ ಹೆಚ್ಚಾಗಿರುವ ಕಾರಣ ತೇವಾಂಶ ಹೆಚ್ಚಳದಿಂದ ಚಳಿ ಪ್ರಮಾಣ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. 2020ರಲ್ಲಿ 58 ಮಳೆ ದಿನಗಳಲ್ಲಿ 862.2 ಮೀ. ಲಿ ಮೀಟರ್, 2021ರ 52 ಮಳೆ ದಿನಗಳಲ್ಲಿ 632.8 ಮೀ.ಮೀಟರ್ ಹಾಗೂ 2021ರ 56 ಮಳೆ ದಿನಗಳಲ್ಲಿ 793.2ಮೀ ಮೀಟರ್ ಮಳೆ ಸುರಿದಿದೆ. ಹೀಗಾಗಿ ಈ ಬಾರಿ ಚಳಿ ಪ್ರಮಾಣ ಜಾಸ್ತಿ ಆಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಒಟ್ಟು ಜಿಲ್ಲೆಯ ಸರಾಸರಿ ಮಳೆ ಪ್ರಮಾಣ ಇರುವುದು 594 ಮೀ.ಮೀಟರ್. ಕಳೆದ ಮೂರು ವರ್ಷದಲ್ಲಿ ಕನಿಷ್ಠ 150 - 200ಮೀ.ಮೀಟರ್ ಮಳೆ ಹೆಚ್ಚಾಗಿದೆ. ಈ ಕಾರಣದಿಂದ ಕಳೆದ 10ವರ್ಷದಲ್ಲಿ ಚಳಿ ಕನಿಷ್ಠ ತಾಪಮಾನ 6.5ಮೀ. ಮೀಟರ್ ಆಗಲು ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಾರ್ಷಿಕ ಬೆಳೆಗೆ ತೊಂದರೆ ಇಲ್ಲ: ಈ ರೀತಿ ಕನಿಷ್ಠ ಚಳಿ ತಪಮಾನ‌ ದಾಖಲಾಗಿರುವ ಕಾರಣ ವಾರ್ಷಿಕ ಬೆಳೆಗಳಿಗೆ ಯಾವುದೇ ತೊಂದರೆ ಇಲ್ಲ, ಆದರೆ ತೋಟಗಾರಿಕೆ ಬೆಳೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಹೆಚ್ಚು ಬೆಳೆಯುವ ದ್ರಾಕ್ಷಿ ಬೆಳೆಗೆ ರೋಗ ತಗಲುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ದ್ರಾಕ್ಷಿ ಬೆಳೆಗಾರರು ಕೊಂಚ ಅಗತ್ಯ ಎಚ್ಚರಿಕೆ ವಹಿಸಬೇಕಾಗಿದೆ.

ಮುಂದೆ ನಾರ್ಮಲ್ : ಕನಿಷ್ಠ ತಾಪಮಾನ 6.5 ಡಿಗ್ರಿ ಸೆಲ್ಸಿಯಸ್​ ಕ್ಕಿಂತ ಕಡಿಮೆ ದಾಖಲಾಗುವದಿಲ್ಲ, ಇನ್ನೂ ಒಂದು ವಾರ ಕಾಲ ತಾಪಮಾನದಲ್ಲಿ ಏರುಪೇರು ಹಾಗಬಹುದೇ ಹೊರತು ಇದಕ್ಕಿಂತ ಕನಿಷ್ಠ ತಾಪಮಾನ ಮತ್ತಷ್ಟು ಇಳಿಯುವುದಿಲ್ಲ ಎಂದು ಹವಾಮಾನ ತಜ್ಞರು ಧೃಢಪಡಿಸಿದ್ದಾರೆ.

ಇದನ್ನೂ ಓದಿ :ಚಳಿಗೆ ನಲುಗಿದ ಉತ್ತರ ಭಾರತ: ದೆಹಲಿಯಲ್ಲಿ 3 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನ, ಕಾಶ್ಮೀರದಲ್ಲಿ ಮೈನಸ್​ಗೆ ಕುಸಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.