ETV Bharat / state

ಮಂಟಪದಲ್ಲಿ ಪುನೀತ್ ರಾಜಕುಮಾರ್​ ಭಾವಚಿತ್ರ ಅಳವಡಿಸಿಕೊಂಡು ಮದುವೆಯಾದ ಜೋಡಿ - ವಿಜಯಪುರದಲ್ಲಿ ವಿಭಿನ್ನರೀತಿಯಲ್ಲಿ ವಿವಾಹವಾದ ಪುನೀತ್​ ಅಭಿಮಾನಿ

ಪುನೀತ್​ರಾಜ್​ಕುಮಾರ್​ ಅವರನ್ನು ತನ್ನ ಮದುವೆಗೆ ಆಹ್ವಾನಿಸಬೇಕು ಎಂದು ಆಸೆ ಇಟ್ಟುಕೊಂಡಿದ್ದ ಅಭಿಮಾನಿಯೊಬ್ಬ ಅಪ್ಪು ಅಗಲಿಕೆಯಿಂದಾಗಿ ಅವರ ಭಾವಚಿತ್ರದ ಮುಂದೆ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.

Vijayapura: Married fan in front of portrait of Puneet Raj Kumar
ಪುನೀತ ಭಾವಚಿತ್ರ ಅಳವಡಿಸಿಕೊಂಡು ಮದುವೆಯಾದ ಅಭಿಮಾನಿ
author img

By

Published : May 10, 2022, 5:12 PM IST

ವಿಜಯಪುರ: ಪವರ್ ಸ್ಟಾರ್ ಪುನೀತ್​ರಾಜಕುಮಾರ್ ಅಗಲಿ ಏಳು ತಿಂಗಳುಗಳೇ ಕಳೆದರೂ ಅವರ ನೆನಪು ಮಾತ್ರ ಇಂದಿಗೂ ಜನಮಾನಸ ಹಾಗೂ ಅಭಿಮಾನಿಗಳಲ್ಲಿ ಹಚ್ಚಹಸಿರಾಗಿದೆ. ಅಪ್ಪು ಅಭಿಮಾನಿ ಬಸವರಾಜ್​ ಮದುವೆಗೆ ಪುನೀತ್​ ರಾಜಕುಮಾರ್​ ಅವರನ್ನು ಆಹ್ವಾನಿಸಬೇಕು ಎಂದು ಆಸೆ ಹೊಂದಿದ್ದರು. ಆದರೆ, 'ರಾಜಕುಮಾರ್' ಇಹಲೋಕತ್ಯಜಿಸಿದ್ದರಿಂದ ಅಭಿಮಾನಿಯ ಆಸೆ ಈಡೇರಲಿಲ್ಲ. ಹೀಗಾಗಿ ಪುನೀತ್​ ಭಾವಚಿತ್ರದ ಎದುರು ಮದುವೆ ಆಗುವ ಮೂಲಕ ಅಭಿಮಾನ ಮೆರೆದಿದ್ದಾರೆ.

ಬಸವರಾಜ ಮತ್ತು ಶೋಭಾ ಮದುವೆ ವೇದಿಕೆಯ ಎರಡೂ ಬದಿಯಲ್ಲಿ ಪುನೀತ್​ ಅವರ ಭಾವಚಿತ್ರ ಅಳವಡಿಸಲಾಗಿತ್ತು. ವಧು - ವರನಿಗೆ ಶುಭಾಶಯ ಕೋರಲು ಬರುವವರು ಪುನೀತ್ ಭಾವಚಿತ್ರ ನೋಡಿ ಅವರನ್ನು ನೆನೆಯುವ ದೃಶ್ಯ ಕಂಡು ಬಂತು. ಇದರ ಜತೆ ಹಲವು ಸ್ನೇಹಿತರು ನವಜೋಡಿಗೆ ನೆನಪಿನ ಕಾಣಿಕೆಯಾಗಿ ಪುನೀತ್ ರಾಜಕುಮಾರ ಅವರ ಭಾವಚಿತ್ರ ನೀಡಿ, ಹರಸಿದರು.

ಪುನೀತ ಭಾವಚಿತ್ರ ಅಳವಡಿಸಿಕೊಂಡು ಮದುವೆಯಾದ ಅಭಿಮಾನಿ

ಇದೇ ವೇಳೆ ಮಾತನಾಡಿದ ವರ ಬಸವರಾಜ್ ಪತ್ತಾರ, ತನ್ನ ಮದುವೆಗೆ ಪುನೀತ್​ ಸರ್​ ಅವರನ್ನು ಕರೆಯಿಸಬೇಕು ಎನ್ನುವ ಕನಸು ಕಂಡಿದ್ದೆ. ಆದರೆ ಅವರ ನಿಧನದಿಂದ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಅವರ ಸಮಾಧಿ ಬಳಿ ಮದುವೆ ಪತ್ರ ಇಟ್ಟು ಪೂಜೆ ಮಾಡಿ ನಂತರ ಸ್ನೇಹಿತರಿಗೆ, ಕುಟುಂಬದವರಿಗೆ ಮದುವೆ ಆಮಂತ್ರಣ ಹಂಚಿ ಬಂದಿದ್ದೆ. ಈಗ ಅವರ ಭಾವಚಿತ್ರದ ಸಮ್ಮುಖದಲ್ಲಿ ಮಾಂಗಲ್ಯಧಾರಣೆ ಮಾಡಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: ಪೊಲೀಸ್​ ಸಿಬ್ಬಂದಿಗೆ ಚಿಕ್ಕಮಗಳೂರು ಎಸ್​ಪಿ 'ಫಿಟ್‌ನೆಸ್‌ ಟಾಸ್ಕ್'​.. ದೇಹ ಹುರಿಗಟ್ಟಿದರೆ 'ರಿವಾರ್ಡ್​ ಆಫರ್​'!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.