ವಿಜಯಪುರ: ಸರ್ಕಾರ ವಿಧಿಸಿರುವ ಸೆಸ್ ಕಡಿತಕ್ಕೆ ಆಗ್ರಹಿಸಿ ಎಪಿಎಂಸಿ ಮಾರುಕಟ್ಟೆ ವರ್ತಕರು ಅಂಗಡಿಗಳಿಗೆ ಬೀಗ ಹಾಕಿದ್ದಾರೆ. ರಾಜ್ಯ ಸರ್ಕಾರದ ಎಪಿಎಂಸಿ ಕಾಯ್ದೆ ತಿದ್ದುಪಡಿ ಕ್ರಮಕ್ಕೆ ಮಾರುಕಟ್ಟೆ ವರ್ತಕರು ಆಕ್ರೋಶಗೊಂಡಿದ್ದು, ಸೆಸ್ ಕಡಿತಗೊಳಿಸುವಂತೆ ಆಗ್ರಹಿಸಿ ಕಳೆದ ಹಲವು ದಿನಗಳಿಂದ ವಹಿವಾಟು ನಿಲ್ಲಿಸಿ ಮುಷ್ಕರ ಆರಂಭಿಸಿದ್ದಾರೆ.
ಕೊರೊನಾ ಭೀತಿಯಿಂದ ವ್ಯಾಪಾರ-ವಹಿವಾಟು ನೆಲಕಚ್ಚಿದೆ. ನಷ್ಟದಲ್ಲಿರುವ ವರ್ತಕರಿಗೆ ಸರ್ಕಾರ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ವರ್ತಕರು ಆರೋಪಿಸಿದ್ದಾರೆ.
250ಕ್ಕೂ ಅಧಿಕ ಮಳಿಗೆಗಳು ಇರುವ ನಗರದ ಎಪಿಎಂಸಿ ಮಾರುಕಟ್ಟೆಯು ರೈತರು ಹಾಗೂ ಮಾರಾಟಗಾರರು ಬಾರದೆ ಬಿಕೋ ಎನ್ನುತ್ತಿದೆ.