ETV Bharat / state

UPSC Results-2021... 2ನೇ ಬಾರಿಯೂ ಉತ್ತಮ ರ‍್ಯಾಂಕ್; ಗೊಮ್ಮಟನಗರಿ ಗೌರವ ಹೆಚ್ಚಿಸಿದ ಸವಿತಾ! - ವಿಜಯಪುರದ ಸವಿತಾಗೆ ಯುಪಿಎಸ್​ಸಿಯಲ್ಲಿ 479ನೇ ಸ್ಥಾನ

ಇತ್ತೀಚಿಗೆ ಎಸ್​ಎಸ್​​ಎಲ್​​​ಸಿ ಪರೀಕ್ಷೆಯಲ್ಲಿ ಆರು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳಿಸಿ ಜಿಲ್ಲೆಯ ಕೀರ್ತಿ ‌ಹೆಚ್ಚಿಸಿದ್ದರು. ಈಗ ಯುಪಿಎಸ್​​ಸಿ ಪರೀಕ್ಷೆಯಲ್ಲಿ ಮತ್ತೊಮ್ಮೆ ಟಾಪ್ ಸ್ಥಾನ ಬಂದಿರುವುದು ಹೆಮ್ಮೆ ತಂದಿದೆ.

ಎರಡನೇ ಬಾರಿಯೂ ಯುಪಿಎಸ್​ಸಿನಲ್ಲಿ ಉತ್ತಮ ರ್ಯಾಂಕ್ ಪಡೆದ ಸವಿತಾ

author img

By

Published : May 30, 2022, 7:59 PM IST

Updated : May 30, 2022, 8:45 PM IST

ವಿಜಯಪುರ: ಭಾರತೀಯ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಯಲ್ಲಿ ವಿಜಯಪುರದ ಬಿಎಸ್​​ಎನ್​​ಎಲ್ ನಿವೃತ್ತ ನೌಕರನ ಮಗಳು ಸತತ ಎರಡನೇ ಬಾರಿಗೆ ಉತ್ತಮ ರ‍್ಯಾಂಕ್​ ಗಳಿಸಿ ತೇರ್ಗಡೆ ಹೊಂದಿದ್ದು, ಗುಮ್ಮಟನಗರಿಗೆ ಮತ್ತೊಂದು ಗರಿ ಮೂಡಿದೆ.

ಇತ್ತೀಚಿಗೆ ಎಸ್​ಎಸ್​​ಎಲ್​​​ಸಿ ಪರೀಕ್ಷೆಯಲ್ಲಿ ಆರು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳಿಸಿ ಜಿಲ್ಲೆಯ ಕೀರ್ತಿ ‌ಹೆಚ್ಚಿಸಿದ್ದರು. ಈಗ ಯುಪಿಎಸ್​​ಸಿ ಪರೀಕ್ಷೆಯಲ್ಲಿ ಮತ್ತೊಮ್ಮೆ ಟಾಪ್ ಸ್ಥಾನ ಬಂದಿರುವುದು ಹೆಮ್ಮೆ ತಂದಿದೆ.

ವಿಜಯಪುರದ ಸಂಸ್ಕೃತಿ ಲೇಔಟ್ ನಿವಾಸಿ ಬಿಎಸ್​​ಎನ್​​ಎಲ್ ನಿವೃತ್ತ ನೌಕರ ಸಿದ್ದಪ್ಪ ಗೋಟ್ಯಾಳ ಎರಡನೇ ಪುತ್ರಿ ಸವಿತಾ ಗೋಟ್ಯಾಳ ಯುಪಿಎಸ್​ಸಿ ಪರೀಕ್ಷೆಯಲ್ಲಿ 479 ನೇ ಸ್ಥಾನ ಗಳಿಸಿದ್ದಾರೆ. ಸದ್ಯ ದೆಹಲಿಯಲ್ಲಿ ವಾಸಿಸುತ್ತಿರುವ ಸವಿತಾ, ಕಳೆದ ವರ್ಷ 2020 ರಲ್ಲಿ 626 ಸ್ಥಾನ ಪಡೆದಿದ್ದರು. ಇಷ್ಟಕ್ಕೆ ತೃಪ್ತಿಯಾಗದೇ 2021ರಲ್ಲಿ ಮತ್ತೊಮ್ಮೆ ಯುಪಿಎಸ್​​ಸಿ ಪರೀಕ್ಷೆಗೆ ಕುಳಿತು ಉತ್ತಮ ಅಂಕ ಪಡೆದಿದ್ದಾರೆ.

UPSC Results-2021... 2ನೇ ಬಾರಿಯೂ ಉತ್ತಮ ರ‍್ಯಾಂಕ್; ಗೊಮ್ಮಟನಗರಿ ಗೌರವ ಹೆಚ್ಚಿಸಿದ ಸವಿತಾ!

ಇವರ ಹಿರಿಯ ಸಹೋದರಿ ಸಹ 2016ನೇ ಬ್ಯಾಚ್​​ನಲ್ಲಿ ಉತ್ತಮ ರ‍್ಯಾಂಕ್ ಗಳಿಸಿ ಐಪಿಎಸ್ ಅಧಿಕಾರಿಯಾಗಿ ಪಂಜಾಬ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕಿರಿಯ ಸಹೋದರ ಸಹ ಯುಪಿಎಸ್​​ಸಿ ಕೋಚಿಂಗ್ ಪಡೆಯುತ್ತಿದ್ದಾನೆ. ಮೂವರೂ ಇಂಜಿನೀಯರ್​ ಪದವೀಧರರು. ಸದ್ಯ ಸವಿತಾ ಗೋಟ್ಯಾಳ ದೆಹಲಿಯಲ್ಲಿರುವ ಕಾರಣ ಅವರ ಅನುಪಸ್ಥಿತಿಯಲ್ಲಿ ಪೋಷಕರು ಸಂತಸ ಹಂಚಿಕೊಂಡಿದ್ದಾರೆ.

ಸವಿತಾ
ಸವಿತಾ

ಇದನ್ನೂ ಓದಿ: UPSC Results-2021: ಮೈಸೂರಿನ ದೃಷ್ಟಿ ವಿಶೇಷ ಚೇತನೆಯ ಸಾಧನೆಗೆ ಸಲಾಂ

Last Updated : May 30, 2022, 8:45 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.