ETV Bharat / state

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಂ ತುಷ್ಟಿಕರಣ: ಅಮಿತ್​ ಶಾ ಎಚ್ಚರಿಕೆ

ಲಿಂಗಾಯತರ ಮೀಸಲಾತಿ ರದ್ದುಗೊಳಿಸಲು ಬಿಜೆಪಿ ಬಿಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಹೇಳಿದರು.

ಕೇಂದ್ರ ಗೃಹ ಸಚಿವ ಅಮಿತ್​ ಶಾ
ಕೇಂದ್ರ ಗೃಹ ಸಚಿವ ಅಮಿತ್​ ಶಾ
author img

By

Published : Apr 25, 2023, 9:56 PM IST

ಕೇಂದ್ರ ಗೃಹ ಸಚಿವ ಅಮಿತ್​ ಶಾ

ವಿಜಯಪುರ : ಮುಸ್ಲಿಂರಿಗೆ ನೀಡಲಾಗಿದ್ದ ಮೀಸಲಾತಿಯನ್ನು ರದ್ದುಗೊಳಿಸಿ ಒಕ್ಕಲಿಗ, ಲಿಂಗಾಯತ, ದಲಿತ ಬಾಂಧವರಿಗೆ ಡಬಲ್ ಇಂಜಿನ್ ಬಿಜೆಪಿ ಸರ್ಕಾರ ನೀಡಿದೆ. ಆದರೆ ರಿವರ್ಸ್ ಗೇರ್ ಹೊಂದಿರುವ ಕಾಂಗ್ರೆಸ್ ಲಿಂಗಾಯತ, ದಲಿತ ಬಾಂಧವರ ಮೀಸಲಾತಿ ರದ್ದುಗೊಳಿಸಿ ಪುನ: ಮುಸ್ಲಿಂರಿಗೆ ನೀಡುವುದಾಗಿ ಹೇಳುತ್ತಿದೆ. ಆದರೆ ಯಾವ ಕಾರಣಕ್ಕೂ ಬಿಜೆಪಿ ಇದನ್ನು ಸಹಿಸುವುದಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದೇ ಇಲ್ಲ. ಲಿಂಗಾಯತರ ಮೀಸಲಾತಿ ರದ್ದುಗೊಳಿಸಲು ಬಿಜೆಪಿ ಬಿಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಹೇಳಿದರು.

ದೇವರಹಿಪ್ಪರಗಿಯಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಬೃಹತ್ ಸಮಾವೇಶದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಧರ್ಮ ಆಧಾರಿತವಾಗಿ ಮೀಸಲಾತಿ ಏಕೆ ಎಂದು ನಗರ ಶಾಸಕ ಯತ್ನಾಳ್ ಪದೇ ಪದೆ ಕೇಳುತ್ತಲೇ ಇದ್ದರು. ವೋಟ್ ಬ್ಯಾಂಕ್ ಆಧರಿಸಿ ಕಾಂಗ್ರೆಸ್ ಮುಸ್ಲಿಂ ಮೀಸಲಾತಿ ಕೊಟ್ಟಿತ್ತು. ಭಾರತೀಯ ಜನತಾ ಪಕ್ಷ ಮುಸ್ಲಿಂ ಮೀಸಲಾತಿ ರದ್ದುಗೊಳಿಸಿ ಲಿಂಗಾಯತ, ಒಕ್ಕಲಿಗ, ತಳವಾರ-ಪರಿವಾರ, ದಲಿತ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿದೆ. ಇದು ಮಾಡಿದ್ದು ಒಳ್ಳೆಯದೇ? ಕೆಟ್ಟದ್ದೇ? ಎಂದು ಪ್ರಶ್ನಿಸಿದರು.

ಆದರೆ ಕಾಂಗ್ರೆಸ್ ಅಧ್ಯಕ್ಷರು ಲಿಂಗಾಯತ, ಒಕ್ಕಲಿಗ ಸಮುದಾಯಗಳಿಗೆ ಮೀಸಲಾತಿ ರದ್ದುಗೊಳಿಸಿ ಮುಸ್ಲಿಂರಿಗೆ ಮೀಸಲಾತಿ ಕಲ್ಪಿಸಲು ಮುಂದಾಗಿದ್ದಾರೆ. ಕಾಂಗ್ರೆಸ್​ ಸರ್ಕಾರ ಬರುವುದೇ ಇಲ್ಲ, ಮೀಸಲಾತಿ ರದ್ದಾಗುವುದೇ ಇಲ್ಲ, ಚಿಂತೆ ಮಾಡಬೇಡಿ ಎಂದು ಅಮಿತ್​ ಶಾ ಅಭಯ ನೀಡಿದರು. ದಲಿತರ, ಆದಿವಾಸಿಗಳ, ಲಿಂಗಾಯತರಿಗೆ ನೀಡುವ ಮೀಸಲಾತಿ ಎಂದೂ ಕೊನೆಗೊಳಿಸುವುದಿಲ್ಲ. ಹಿಂಸೆಯ ತಾಂಡವವಾಡುತ್ತಿದ್ದ ಪಿಎಫ್‌ಐ ಸಂಘಟನೆಯನ್ನು ನಮ್ಮ ಸರ್ಕಾರ ಬ್ಯಾನ್ ಮಾಡಿದೆ. ಇದು ಒಳ್ಳೆಯದಲ್ಲವೇ? ಎಂದು ಶಾ ಪ್ರಶ್ನಿಸಿದರು.

ಪಿಎಫ್‌ಐ ಅನ್ನು ವೋಟ್ ಬ್ಯಾಂಕ್‌ಗಾಗಿ ಪ್ರೋತ್ಸಾಹಿಸುವ ಕೆಲಸ: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಿಎಫ್‌ಐ ಕಾರ್ಯಕರ್ತರನ್ನು ಜೈಲಿನಿಂದ ಬಿಡುಗಡೆ ಮಾಡಿತ್ತು. ಆದರೆ ಬಿಜೆಪಿ ಅವರನ್ನು ಹುಡುಕಿ ಹುಡುಕಿ ಜೈಲಿಗಟ್ಟುತ್ತಿದೆ. ರಿವರ್ಸ್ ಗೇರ್ ಕಾಂಗ್ರೆಸ್ ಪಿಎಫ್‌ಐ ನಿಷೇಧವನ್ನು ಹಿಂದಕ್ಕೆ ಪಡೆಯುವ ಮಾತು ಹೇಳಲಿದೆ. ದೇಶಕ್ಕೆ ದೊಡ್ಡಮಟ್ಟದ ಅಪಾಯದ ಎಚ್ಚರಿಕೆ ಗಂಟೆಯಾಗಿರುವ ಪಿಎಫ್‌ಐ ಅನ್ನು ವೋಟ್ ಬ್ಯಾಂಕ್‌ಗಾಗಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಭಿವೃದ್ಧಿಯ ಪರ್ವ ಮುಂದುವರೆಯುತ್ತಲೇ ಇದೆ: ನವ ಕರ್ನಾಟಕದ ಕನಸು ನನಸಾಗುವುದು ಮೋದಿ ಅವರಿಂದ ಮಾತ್ರ ಸಾಧ್ಯ. ಡಬಲ್ ಇಂಜಿನ್ ಸರ್ಕಾರ ಇದ್ದರೆ ಕಾಂಗ್ರೆಸ್‌ನದ್ದು ರಿವರ್ಸ್ ಗೇರ್‌ನಲ್ಲಿಯೇ ಗಾಡಿ ಓಡಿಸುತ್ತಾರೆ. ವಿಕಾಸದ ಮಂತ್ರ ಜಪಿಸುವ ಪಕ್ಷ ಬಿಜೆಪಿ ಮಾತ್ರ ಎಂದರು. ಮುಳವಾಡ ಏತ ನೀರಾವರಿ, ವಿಮಾನ ನಿಲ್ದಾಣ, ಕಬ್ಬು ಬೆಳೆಗಾರರಿಗೆ, ದ್ರಾಕ್ಷಿ ಬೆಳೆಗಾರರ ಹಾಗೂ ಲಿಂಬೆ ಬೆಳೆಗಾರರ ಶ್ರೇಯೋಭಿವೃದ್ಧಿಗಾಗಿ ಮಂಡಳಿ ಸ್ಥಾಪನೆ, ತೊರವಿಯಲ್ಲಿ ಮೆಗಾ ಕೋಲ್ಡ್ ಸ್ಟೋರೆಜ್ ಹೀಗೆ ಅಭಿವೃದ್ಧಿಯ ಪರ್ವ ಮುಂದುವರೆಯುತ್ತಲೇ ಇದೆ ಎಂದರು.

ಟಿಕೆಟ್ ಕಾಯ್ದಿರಿಸಿ : ರಾಮಮಂದಿರ ದರ್ಶನಕ್ಕೆ ಸಿದ್ಧರಾಗಿರಿ ಎಂದ ಅವರು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಅದನ್ನು ಭಾರತದ ಅವಿಭಾಜ್ಯ ಅಂಗವಾಗಿಸಿದ್ದು ತಪ್ಪೇ? ಎಂದು ಅಮಿತ್ ಶಾ ಪ್ರಶ್ನಿಸಿದರು. ಈಗಾಗಲೇ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಗೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷ ರಾಮಮಂದಿರ ನಿರ್ಮಾಣಕ್ಕೆ ಅಡ್ಡಿ ಪಡಿಸಿತ್ತು. ಈ ವಿಷಯವಾಗಿ ದಿಕ್ಕು ತಪ್ಪಿಸುತ್ತಲೇ ಇತ್ತು. ಪ್ರಧಾನಿ ಮೋದಿ ಅವರ ಸರ್ಕಾರ ಈಗಾಗಲೇ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಸಹ ನೆರವೇರಿಸಿದೆ. ವಿಜಯಪುರ ನಿವಾಸಿಗಳು ಅಯೋಧ್ಯೆಗೆ ಬರಲು ಟಿಕೆಟ್​ ಕಾಯ್ದಿರಿಸಿಕೊಳ್ಳಿ, ಅಯೋಧ್ಯೆಗೆ ಬಂದು ಭವ್ಯ ರಾಮಮಂದಿರ ಕಣ್ತುಂಬಿಕೊಳ್ಳಲು ಸಿದ್ಧರಾಗಿ ಎಂದು ವಿಜಯಪುರ ಜನತೆಗೆ ಆಹ್ವಾನ ನೀಡಿದರು.

ಪಾಕ್ ಎದೆ ಬಡಿದುಕೊಂಡು ಅಳುತ್ತಿದೆ ನೋಡಿ ರಾಹುಲ್ ಬಾಬಾ: ಪಾಕ್ ಕಿರುಕುಳವನ್ನು ದಮನ ಮಾಡಲು ಡಾ ಮನಮೋಹನ್ ಸಿಂಗ್ ಧೈರ್ಯ ತೋರಲಿಲ್ಲ. ಆದರೆ ನರೇಂದ್ರ ಮೋದಿ ಅವರು ದಿಟ್ಟತನದಿಂದ ಉಗ್ರವಾದಿಗಳಿಗೆ ತಕ್ಕ ಪಾಠ ಕಲಿಸಿದ್ದಾರೆ. ಕಾಶ್ಮೀರದಲ್ಲಿ ದಾಳಿ ನಡೆದ 10 ದಿನಗಳಲ್ಲಿಯೇ ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ನಡೆಸಿ ಪಾಕ್ ಮನೆಗೆ ನುಗ್ಗಿ ಉಗ್ರವಾದಿಗಳಿಗೆ ದಿಟ್ಟ ಉತ್ತರ ಕೊಟ್ಟಿದ್ದೋ ಸರಿಯೋ ಇಲ್ಲವೋ? ಆದರೆ ಇದಕ್ಕೆ ದಾಖಲೆ ಇದೆಯೇ ಎಂದು ರಾಹುಲ್ ಬಾಬಾ ಕೇಳುತ್ತಾರೆ. ಪಾಕ್ ಎದೆ ಬಡಿದುಕೊಂಡು ಅಳುತ್ತಿದೆ. ಇದು ಒಂದು ದಾಖಲೆ ಅಲ್ಲವೇ? ರಾಹುಲ್ ಬಾಬಾ ಎಂದು ಅಮಿತ್​ ಶಾ ಲೇವಡಿ ಮಾಡಿದರು.

ಲಿಂಗಾಯತರಿಗೆ ಅವಮಾನ ಮಾಡಿದ್ದು ಮೊದಲಲ್ಲ : ಲಿಂಗಾಯತರನ್ನು ಕಾಂಗ್ರೆಸ್ ಅವಮಾನ ಮಾಡಿರುವ ವಿಷಯವನ್ನು ಯತ್ನಾಳ್​ ಪ್ರಸ್ತಾಪಿಸಿದರು. ಆದರೆ ಲಿಂಗಾಯತರಿಗೆ ಕಾಂಗ್ರೆಸ್ ಅವಮಾನ ಮಾಡುತ್ತಿರುವುದು ಹೊಸತಲ್ಲ, ವಿರೇಂದ್ರ ಪಾಟೀಲ, ಯಡಿಯೂರಪ್ಪ, ನಿಜಲಿಂಗಪ್ಪ ಅವರನ್ನು ಕಾಂಗ್ರೆಸ್ ಅವಮಾನ ಮಾಡಿದೆ. ಲಿಂಗಾಯತರನ್ನು ಕಾಂಗ್ರೆಸ್ ಅವಮಾನ ಮಾಡುತ್ತಲೇ ಇದೆ. ನಮ್ಮ ನಾಯಕ ಅಲ್ಲಿ ಹೋಗಿದ್ದಾರೆ. ಆದರೆ ಹುಬ್ಬಳ್ಳಿಯಲ್ಲಿ ಅವರು 25 ಸಾವಿರ ಅಂತರದಿಂದ ಸೋಲು ಕಾಣುವುದಂತೂ ಸತ್ಯ ಎಂದು ಪರೋಕ್ಷವಾಗಿ ಶೆಟ್ಟರ್ ಸೋಲು ಖಚಿತ ಎಂದು ಭವಿಷ್ಯ ನುಡಿದರು. ಜೆಡಿಎಸ್‌ಗೆ ಮತ ನೀಡಿದರೆ ಕಾಂಗ್ರೆಸ್‌ಗೆ ಮತ, ಕಾಂಗ್ರೆಸ್‌ಗೆ ಮತ ನೀಡುವುದು ಪಿಎಫ್‌ಐಗೆ ಪರೋಕ್ಷ ಬೆಂಬಲ ನೀಡಿದಂತೆ ಎಂದರು.

ಇದನ್ನೂ ಓದಿ : ರಾಜ್ಯ ಬಿಜೆಪಿ ಸರ್ಕಾರ ಒಂದೂವರೆ ಲಕ್ಷ ಕೋಟಿ ಲೂಟಿ ಮಾಡಿದೆ: ಪ್ರಿಯಾಂಕಾ ಗಾಂಧಿ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.