ವಿಜಯಪುರ : ಕಟ್ಟಿಗೆ ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ಹಾಗೂ ಕ್ರೂಸರ್ ಮದ್ಯೆ ಮುಖಾಮುಖಿ ಡಿಕ್ಕಿಯಾಗಿ ಕ್ರೂಸರ್ನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಬಬಲಾದಿ ಗ್ರಾಮದ ಬಳಿ ನಡೆದಿದೆ. ಕ್ರೂಸರ್ ನಲ್ಲಿದ್ದ ರೇವಣಸಿದ್ದ ಜಾತಗೊಂಡ (14) ಅಮಸಿದ್ದ ಬಂಡೆ (27) ಸ್ಥಳದಲ್ಲಿ ಸಾವನ್ಬಪ್ಪಿದ್ದಾರೆ. ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ರಭಸಕ್ಕೆ ಕ್ರೂಸರ್ ಮರಕ್ಕೆ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ : ಕೆಲಸ ಕೊಟ್ಟ ಮಾಲೀಕನ ಖಾತೆಯಲ್ಲಿದ್ದ ಹಣ ಮಂಗಮಾಯ; ಕೈಚಳಕದ ಹಿಂದಿದೆ ಸಹೋದರಿಯರ ಪ್ರೇಮ್ ಕಹಾನಿ
ಈ ಭೀಕರ ರಸ್ತೆ ಅಪಘಾತದಲ್ಲಿ ಹಲವರಿಗೆ ತೀವ್ರ ಗಾಯಗಳಾಗಿದ್ದು, ಗಾಯಾಳುಗಳನ್ನು ಇಂಡಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೃತರು ಹಾಗೂ ಗಾಯಾಳು ಚಡಚಣ ತಾಲೂಕಿನ ಲಮಾನಹಟ್ಟಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ. ಕಲಬುರಗಿ ಜಿಲ್ಲೆ ಅಫಜಲಪೂರ ತಾಲೂಕಿನ ಮಣೂರು ಯಲ್ಲಮ್ಮ ದೇವರ ದರ್ಶನ ಮಾಡಿಕೊಂಡು ವಾಪಸ್ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಇನ್ನು ಈ ಘಟನೆ ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಮಾಹಿತಿ ತಿಳಿಸಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
2 ಬೈಕ್ಗಳಿಗೆ ಡಿಕ್ಕಿ ಹೊಡೆದ ಕಾರು : ಎರಡು ದ್ವಿಚಕ್ರ ವಾಹನ ಹಾಗೂ ಕಾರೊಂದರ ಮಧ್ಯೆ ಅಪಘಾತ ಸಂಭವಿಸಿ ಮೂರು ಮಂದಿ ಸಾವನ್ನಪ್ಪಿರುವ ಘಟನೆ ಕಳೆದ ಮೂರು ದಿನಗಳಿಂದೆ ಮೇ 15 ರಂದು ಗದಗದಲ್ಲಿ ನಡೆದಿತ್ತು. ತಾಲೂಕಿನ ಅಡವಿಸೋಮಾಪೂರ ಬಳಿಯ ಮುಂಡರಗಿ ರಸ್ತೆಯ ಮಲ್ಲಿಕಾರ್ಜುನ ಮಠದ ಬಳಿ ಈ ದುರ್ಘಟನೆ ಸಂಭವಿಸಿತ್ತು. ಸಿಂಗಟರಾಯನಕೇರಿ ತಾಂಡಾದ ಶಿವಪ್ಪ ನಾಯಕ್ (50), ಛಬ್ಬಿ ತಾಂಡಾದ ಶಿವಾನಂದ ಲಮಾಣಿ (33), ಹಾಗೂ ಡೋಣಿ ತಾಂಡಾದ ಕೃಷ್ಣಪ್ಪ ಚೌಹಾಣ (31) ಸಾವನ್ನಪ್ಪಿದ್ದರು. ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದರು.
ಇದನ್ನೂ ಓದಿ : ಉದ್ಯಮಿ ಮೇಲೆ ಹಲ್ಲೆ: ಮಹಿಳೆ ಸೇರಿ ಇಬ್ಬರು ಆರೋಪಿಗಳ ವಿರುದ್ಧ ದೂರು, ತನಿಖೆ
ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ: ಇನ್ನೊಂದೆಡೆ, ಎರಡು ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬಸ್ ಚಾಲಕ ಸೇರಿದಂತೆ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಶಿವಮೊಗ್ಗ ತಾಲೂಕು ಚೋರಡಿ ಸೇತುವೆ ಬಳಿ ಗುರುವಾರ (ಮೇ 11-2023) ಸಂಜೆ ನಡೆದಿತ್ತು. ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕಾಳಪ್ಪ ಬಸ್ ಹಾಗೂ ಶಿವಮೊಗ್ಗದಿಂದ ಶಿಕಾರಿಪುರಕ್ಕೆ ತೆರಳುತ್ತಿದ್ದ ಶ್ರೀನಿವಾಸ ಬಸ್ಗಳು ಮುಖಾಮುಖಿ ಡಿಕ್ಕಿಯಾಗಿವೆ ಎಂದು ತಿಳಿದು ಬಂದಿತ್ತು. ಹಾಗು ಎರಡು ಬಸ್ನಲ್ಲಿದ್ದ ಪ್ರಾಯಾಣಿಕರಿಗೆ ಗಾಯಾಗಳಾಗಿ ಆಸ್ಪತ್ರೆ ದಾಖಲಿಸಲಾಗಿತ್ತು.
ಇದನ್ನೂ ಓದಿ : ಕೆಜಿ ಹಳ್ಳಿ ಡಿಜೆ ಹಳ್ಳಿ ಗಲಭೆ ಕೇಸ್.. ಆರೋಪ ಪಟ್ಟಿ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್