ವಿಜಯಪುರ: ತಾಲೂಕಿನ ಹಡಗಲಿ ಗ್ರಾಮದ ಕವಲಗಿ ಸಮೀಪ ಬೊಲೆರೊ ವಾಹನ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರಿಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಪ್ರದೀಪ ಭೀಮು ರಾಠೋಡ(17) ಹಾಗೂ ಅನೀಲ ಚಿನ್ನು ರಾಠೋಡ (17) ಎಂದು ಗುರುತಿಸಲಾಗಿದೆ.
ಬೈಕ್ ಸವಾರರು ವಿಜಯಪುರದಿಂದ ದೇವರಹಿಪ್ಪರಗಿ ಮಾರ್ಗವಾಗಿ ಕವಲಗಿಯಿಂದ ಹಿಟ್ನಳ್ಳಿ ತಾಂಡಾದ ಶಾಲೆಗೆ ಹೋಗಿ ಬರುತ್ತಿದ್ದರು. ಈ ವೇಳೆ, ಕವಲಗಿ ಬಳಿ ಬೊಲೆರೊ ವಾಹನ ಎದುರಿನಿಂದ ಬಂದು ಬೈಕ್ಗೆ ಡಿಕ್ಕಿ ಹೊಡೆದಿದೆ ಎನ್ನಲಾಗ್ತಿದೆ. ಇನ್ನು ಚಾಲಕ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಶಿವಮೊಗ್ಗ: ಪೊಲೀಸ್ ಕಾನ್ಸ್ಟೇಬಲ್ಗೆ ಚಾಕು ಇರಿತ - ಆರೋಪಿ ಪರಾರಿ!