ETV Bharat / state

ವಿಜಯಪುರ: ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗೋ ಮಕ್ಕಳಿಗೆ ಟಿವಿ ಮೂಲಕ ಪಾಠ - ಮಕ್ಕಳಿಗೆ ಟಿವಿ ಮೂಲಕ ಪಾಠ

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಗ್ತಸ್ಯಾ ಕೋರ್​ ವಿಜ್ಞಾನ ಚಟುವಟಿಕಾ ಕೇಂದ್ರ, ಯಾವ ಪ್ರದೇಶದಲ್ಲಿ ಮಕ್ಕಳು ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗಿದ್ದಾರೋ ಆ ಪ್ರದೇಶದ ಮಕ್ಕಳಿದ್ದಲ್ಲಿಗೆ ತೆರಳಿ ಅವರನ್ನು ಒಂದು ಸ್ಥಳಕ್ಕೆ ಕರಿಸಿಕೊಂಡು ಶಿಕ್ಷಣ ನೀಡುತ್ತಿದ್ದಾರೆ. ಶಿವಮೊಗ್ಗ ಸೇರಿದಂತೆ 5 ಜಿಲ್ಲೆಗಳಲ್ಲಿ ಈ ರೀತಿಯ ಪಾಠ ಹೇಳುವ ಪ್ರಯತ್ನ ನಡೆದಿದೆ.

TV lessons for children deprived of online education
ವಿಜಯಪುರ: ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗೋ ಮಕ್ಕಳಿಗೆ ಟಿವಿ ಮೂಲಕ ಪಾಠ
author img

By

Published : Aug 11, 2020, 4:59 PM IST

ವಿಜಯಪುರ: ಕೊರೊನಾ ಭೀತಿಯಿಂದ ಇಡೀ ಶಿಕ್ಷಣ ವ್ಯವಸ್ಥೆ ನಲುಗಿ ಹೋಗಿದೆ. ಹಲವು ಶಿಕ್ಷಣ ಸಂಸ್ಥೆಗಳು ಮಕ್ಕಳು ಕಲಿಕೆಯಲ್ಲಿ ಹಿಂದೆ ಬೀಳಬಾರದೆಂದು ಆನ್‌ಲೈನ್ ಶಿಕ್ಷಣ ನೀಡುತ್ತಿವೆ.

ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಆನ್‌ಲೈನ್ ಶಿಕ್ಷಣಕ್ಕೆ ಬೇಕಾದ ಮೂಲಸೌಕರ್ಯ, ಮೊಬೈಲ್ ಕೊರತೆಯಿಂದ ಕ್ಲಾಸ್‌ನಲ್ಲಿ ಪಾಲ್ಗೊಳ್ಳದ ಮಕ್ಕಳು ಶಿಕ್ಷಣದಲ್ಲಿ ಆಸಕ್ತಿ ಕಳೆದುಕೊಳ್ಳಬಾರದು ಎಂಬ ದೃಷ್ಟಿಯಿಂದ ವಿಭಿನ್ನ ಮಾರ್ಗದಲ್ಲಿ ಖುದ್ದಾಗಿ ಗ್ರಾಮಕ್ಕೆ ಹೋಗಿ ಶಿಕ್ಷಣ ನೀಡುತ್ತಿದ್ದಾರೆ. ಅಷ್ಟಕ್ಕೂ ಆನ್‌ಲೈನ್ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಹೇಗೆ ಪಾಠ ಮಾಡ್ತಿದ್ದಾರೆ ಅಂತೀರಾ?

ವಿಜಯಪುರ: ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗೋ ಮಕ್ಕಳಿಗೆ ಟಿವಿ ಮೂಲಕ ಪಾಠ

ಗುಮ್ಮಟ ನಗರಿ ವಿಜಯಪುರ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ, ಕೊರೊನಾ ಭೀತಿಯಿಂದ ಎಲ್ಲಾ ಶಾಲೆಗಳಿಗೆ ಬೀಗ ಹಾಕಲಾಗಿದೆ‌. ಇತ್ತ ಹಲವು ಶಿಕ್ಷಣ ಸಂಸ್ಥೆಗಳು ಶಾಲಾ ಕಾಲೇಜುಗಳ ಮೂಲಕ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಹಾಗೂ ವೆಬಿನಾರ್​ ಮೂಲಕ ಪಠ್ಯದ ಚಟುವಟಿಕೆ ನಡೆಸುತ್ತಿವೆ‌. ಆದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನೆಟ್ವರ್ಕ್ ಸಮಸ್ಯೆ, ಮೊಬೈಲ್‌ಗಳ ಕೊರತೆ ಮಳೆಗಾಲ ಸಮಯದಿಂದ ವಿದ್ಯುತ್ ಕಡಿತದಿಂದ ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗುವಂತಾಗಿದೆ.

ಅಲ್ಲದೆ 'ಮನೆಯಲ್ಲಿ ಟಿವಿ ಇದ್ದವರಿಗೆ ಆನ್‌ಲೈನ್ ಕ್ಲಾಸ್ ಮಾಡಾಕತ್ಯಾರ್ರಿ. ಆದ್ರ ನಮ್ಮ ಮನಿಯೊಳಗ ಮೊಬೈಲ್ ಇಲ್ಲರಿ ಸರ್' ಅನ್ನೋದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅಳಲು. ಇದನ್ನರಿತ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಗ್ತಸ್ಯಾ ಕೋರ್​ ವಿಜ್ಞಾನ ಚಟುವಟಿಕಾ ಕೇಂದ್ರ, ಯಾವ ಪ್ರದೇಶದಲ್ಲಿ ಮಕ್ಕಳು ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗಿದ್ದಾರೋ ಆ ಪ್ರದೇಶದ ಮಕ್ಕಳಿದ್ದಲ್ಲಿಗೇ ತೆರಳಿ ಅವರನ್ನು ಒಂದು ಸ್ಥಳಕ್ಕೆ ಕರೆಸಿಕೊಂಡು ಶಿಕ್ಷಣ ನೀಡುತ್ತಿದ್ದಾರೆ.

ಶಿವಮೊಗ್ಗ ಸೇರಿದಂತೆ 5 ಜಿಲ್ಲೆಗಳಲ್ಲಿ ಈ ರೀತಿಯ ಪಾಠ ಹೇಳುವ ಪ್ರಯತ್ನ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ಗ್ರಾಮಗಳ ಸರ್ವೇ ಮಾಡಿದ ಬಳಿಕ ವಿಜಯಪುರ ಜಿಲ್ಲೆಯ 5 ಕ್ಕೂ ಅಧಿಕ ಗ್ರಾಮಗಳನ್ನ ಆಯ್ಕೆ ಮಾಡಿಕೊಂಡು. ಶಿಕ್ಷಣದಿಂದ ಮಕ್ಕಳು ದೂರ ಉಳಿದರೆ ಕಲಿಕೆಯಲ್ಲಿ ಆಸಕ್ತಿ ಕಡಿಮೆಯಾಗಬಹುದು ಎಂಬ ಕಾರಣಕ್ಕೆ ಪ್ರತಿದಿನ ಹಗಲಿನಲ್ಲಿ ಸುತ್ತಮುತ್ತಲಿನ ಗ್ರಾಮಗಳಿಗೆ ಪ್ರತಿದಿನ ಒಂದು ಗಂಟೆ ಕಾಲ ಟಿವಿ ಮೂಲಕ ವಿಜ್ಞಾನ, ಗಣಿತ, ಇಂಗ್ಲಿಷ್ ವಿಷಯಗಳ ತರಗತಿ ನಡೆಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಟಿವಿ ಮೂಲಕ ತರಗತಿ ನಡೆಸಲು ಪಂಚಾಯಿತಿ ಅಧಿಕಾರಿಗಳು ಇವರಿಗೆ ಕೈಜೋಡಿಸಿದ್ದಾರೆ. ಅಲ್ಲದೆ ಮಕ್ಕಳಿಗೆ ಕ್ಲಾಸ್ ಮುಗಿದ ಬಳಿಕ ಅಗ್ತಸ್ಯಾ ಸಂಸ್ಥೆಯ ಸಿಬ್ಬಂದಿ ಮಕ್ಕಳ ಕಲಿಕೆ ಪ್ರಗತಿ ಗಮನಿಸಿ ಅವರಿಗೆ ಹೋಮ್‌ ವರ್ಕ್ ಕೂಡ ನಿಡುತ್ತಿದ್ದಾರೆ.

ಇತ್ತ, ಮಕ್ಕಳು ಕೂಡ ಊರಲ್ಲಿ ಟಿವಿ ತೋರಿಸುತ್ತಾರೆ ಅಂತಾ ಆಸಕ್ತಿಯಿಂದ ಕ್ಲಾಸ್‌ಗಳಲ್ಲಿ ಭಾಗಿಯಾಗುತ್ತಿದ್ದಾರೆ. ಒಂದು ತರಗತಿಯಲ್ಲಿ 20 ವಿದ್ಯಾರ್ಥಿಗಳಿಗೆ ಟಿವಿ ಮೂಲಕ ಪಾಠ ಮಾಡಲಾಗ್ತಿದೆ. ಅಗಸ್ತ್ಯ ಕೋರ್​ ವಿಜ್ಞಾನ ಚಟುವಟಿಕಾ ಕೇಂದ್ರದಲ್ಲಿ ಪಾಠ ಮಾಡಿ ಅದನ್ನು ರೆಕಾರ್ಡ್ ಮಾಡಿಕೊಂಡು ಬಂದು ತೋರಿಸುತ್ತಿರುವುದು ಮಕ್ಕಳಿಗೆ ಹಾಗೂ ಪಾಲಕರಿಗೆ ಖುಷಿ ತಂದಿದೆ.

ಒಟ್ಟಿನಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ ಕೊರೊನಾ ಭೀತಿಯಿಂದ‌ ಕಲಿಕೆಯ ಆಸಕ್ತಿ ಕಡಿಮೆ ಆಗಬಾರದು ಎಂದು ಗ್ರಾಮೀಣ ಭಾಗಕ್ಕೆ ಹೋಗಿ ಟಿವಿ ಮೂಲಕ ಪಾಠ ಮಾಡ್ತಿರೋದಕ್ಕೆ ಮಕ್ಕಳು ಕೂಡ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.