ETV Bharat / state

ಕಾರು- ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ವಿಜಯಪುರದಲ್ಲಿ ಮೂವರು ಸಾವು - ETV Bharath Karnataka

ಕಾರು, ಬೈಕ್ ನಡುವೆ ಮುಖಾಮುಖಿ ಅಪಘಾತ - ಸ್ಥಳದಲ್ಲೇ ವಿಜಯಪುರ ಮೂಲದ ಮೂವರು ಯುವಕರ ಸಾವು - ಕಾರು ಚಾಲಕನ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿರುವ ಆರೋಪ

Three death on collision between car and bike
ಕಾರು- ಬೈಕ್ ನಡುವೆ ಮುಖಾಮುಖಿ ಡಿಕ್ಕಿ
author img

By

Published : Dec 28, 2022, 6:49 AM IST

Updated : Dec 28, 2022, 6:55 AM IST

ವಿಜಯಪುರ: ಕಾರು ಹಾಗೂ ಬೈಕ್ ಮಧ್ಯೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರ ತಾಲೂಕಿನ‌ ಜುಮನಾಳ ಗ್ರಾಮದ ಹೆದ್ದಾರಿ ಕ್ರಾಸ್ ಬಳಿ ಮಂಗಳವಾರ ರಾತ್ರಿ ಸಂಭವಿಸಿದೆ. ಮೃತರನ್ನು 20-25ವರ್ಷದೊಳಗಿನ ಅಕ್ಷಯ್​, ಶುಭಂ ಹಾಗೂ ಬಾಗೇಶ ಎಂದು ಗುರುತಿಸಲಾಗಿದೆ.

ಕಾರು ಅತಿ ವೇಗದಿಂದ ಬರುತ್ತಿದ್ದು, ಚಾಲಕನ ನಿಯಂತ್ರಣದ ತಪ್ಪಿದೆ. ಅಲ್ಲದೇ ಚಾಲಕ ನಿರ್ಲಕ್ಷ್ಯ ತೋರಿದ್ದರಿಂದ ಎದುರಿಗೆ ಬರುತ್ತಿದ್ದ ಬೈಕ್​ಗೆ ಮುಖಾಮುಖಿ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ. ಮೃತ ಮೂವರು ಯುವಕರು ವಿಜಯಪುರ ಮೂಲದವರು ಎಂದು ಗುರುತಿಸಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿರುವ ವಿಜಯಪುರ ಗ್ರಾಮೀಣ ಠಾಣೆಯ ಪೊಲೀಸರು ಮೃತ ದೇಹಗಳನ್ನು ಶವಾಗಾರಕ್ಕೆ ರವಾನಿಸಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ: ರಸ್ತೆ ಬದಿ ನಿಂತಿದ್ದಾಗ ಕಾರು ಢಿಕ್ಕಿ: ಉಳ್ಳಾಲದಲ್ಲಿ ಬಾಲಕ ಸಾವು

Last Updated : Dec 28, 2022, 6:55 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.