ವಿಜಯಪುರ: ಜಿಲ್ಲೆಯಲ್ಲಿಂದು ಮತ್ತೆ ಮೂರು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 232ಕ್ಕೆ ಏರಿದೆ.
ಮೂವರು ಸೋಂಕಿತರಲ್ಲಿ ಒಬ್ಬಳು 8 ವರ್ಷದ ಬಾಲಕಿ, ಇನ್ನೊಬ್ಬಳು ಮಹಿಳೆ ಹಾಗೂ ಒಬ್ಬ ಪುರುಷನಿಗೂ ಕೂಡ ಸೋಂಕು ದೃಢವಾಗಿದೆ. ಬಾಲಕಿ ಬೇರೆ ರೋಗದಿಂದಲೂ ಬಳಲುತ್ತಿದ್ದಾಳೆ ಎಂದು ತಿಳಿದು ಬಂದಿದೆ. ಸದ್ಯ ಇವರಿಗೆ ಸೋಂಕು ಹೇಗೆ ತಗುಲಿದೆ ಎನ್ನುವ ಬಗ್ಗೆ ಜಿಲ್ಲಾಡಳಿತ ಮಾಹಿತಿ ಕಲೆಹಾಕುತ್ತಿದೆ.
ಈವರೆಗೂ ಕೊರೊನಾ ಸೋಂಕಿಗೆ ತುತ್ತಾಗಿದ್ದ 232 ಮಂದಿಯಲ್ಲಿ 164 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನೂ 62 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.