ETV Bharat / state

ಕೊರೊನಾ ಎಮರ್ಜೆನ್ಸಿ: ವಿಜಯಪುರ ಡಿಸಿ-ಎಸ್ಪಿಯಿಂದ ವಾಹನಗಳ ಪರಿಶೀಲನೆ

ಕೊರೊನಾ ಎಮರ್ಜೆನ್ಸಿ ಹಿನ್ನೆಲೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹಾಗೂ ಎಸ್ಪಿ ಅನುಪಮ್ ಅಗರವಾಲ್ ಧೂಳಖೇಡ ಚೆಕ್ ಪೋಸ್ಟ್​ಗೆ​ ಭೇಟಿ ನೀಡಿ ವಾಹನಗಳನ್ನು ಪರಿಶೀಲನೆ ನಡೆಸಿದರು.

vijayapura
ವಾಹನಗಳ ಪರಿಶೀಲನೆ
author img

By

Published : Mar 23, 2020, 5:07 PM IST

ವಿಜಯಪುರ: ಕೊರೊನಾ ಎಮರ್ಜೆನ್ಸಿ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹಾಗೂ ಎಸ್ಪಿ ಅನುಪಮ್ ಅಗರವಾಲ್ ಚಡಚಣ ತಾಲೂಕಿನ ಧೂಳಖೇಡ ಗ್ರಾಮದ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಭೇಟಿ ನೀಡಿ ವಾಹನಗಳನ್ನು ಪರಿಶೀಲನೆ ನಡೆಸಿದರು.

ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಧೂಳಖೇಡ ಗ್ರಾಮದ ಮೂಲಕ ವಾಹನಗಳು ಸಾಗುತ್ತಿದ್ದು, ಮುಂಜಾಗ್ರತಾ ಕ್ರಮಮವಾಗಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹಾಗೂ ಎಸ್ಪಿ ಅನುಪಮ್ ಅಗರವಾಲ್ ಧೂಳಖೇಡ ಚೆಕ್ ಪೋಸ್ಟ್​ಗೆ​ ಭೇಟಿ ನೀಡಿದ್ದು, ಸರಕು ಸಾಗಣೆ ಬಿಟ್ಟು ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸುವ ಎಲ್ಲಾ ವಾಹನಗಳನ್ನು ತಡೆದು ಪರಿಶೀಲನೆ ನಡಸಿ ವಾಪಸ್ ಕಳಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ಇದುವರೆಗೂ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಕೇಸ್ ಕಂಡು ಬರದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿ ವಾಹನಗಳನ್ನು ಮರಳಿ ಕಳಿಸುವ ಕೆಲಸ ಮಾಡುತ್ತಿದ್ದಾರೆ.

ವಾಹನಗಳನ್ನು ಪರಿಶೀಲನೆ ನಡೆಸುತ್ತಿರುವ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹಾಗೂ ಎಸ್ಪಿ ಅನುಪಮ್ ಅಗರವಾಲ್

ಇನ್ನು ವಿಜಯಪುರ ಗಡಿಯಲ್ಲಿ 23 ಚೆಕ್ ಪೋಸ್ಟ್ ಕಾರ್ಯನಿರ್ವಹಿಸುತ್ತಿವೆ. ಅನಿವಾರ್ಯ ಇರುವ ವಾಹನಗಳಿಗೆ ಮಾತ್ರ ಜಿಲ್ಲಾಡಳಿತ ಪರಿಶೀಲನೆ ನಡೆಸಿ ಜಿಲ್ಲೆಯೊಳಗೆ ಬರಲು ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಇದಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್​ ಸಿಇಒ ಗೋವಿಂದ ರೆಡ್ಡಿ ಸಾಥ್ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.