ETV Bharat / state

ಚೀನಾ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವಂತೆ ಮಾಜಿ ಸೈನಿಕರಿಂದ ಸರ್ಕಾರಕ್ಕೆ ಮನವಿ - former soldiers

ಚೀನಾ ಸೈನಿಕರು ಕಬ್ಬಿಣದ ಸಲಾಕೆಯಿಂದ ಹೊಡೆದು ಭಾರತೀಯ ಯೋಧರನ್ನು ಹತ್ಯೆ ಮಾಡಿದ್ದಾರೆ. ಯೋಧರ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಿರುವ ಚೀನಾ ವಿರುದ್ಧ ಕೇಂದ್ರ ಸರ್ಕಾರ ಪ್ರತೀಕಾರ ತೀರಿಸಿಕೊಂಡಾಗ ಮಾತ್ರ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ಮಾಜಿ ಸೈನಿಕರ ಕಲ್ಯಾಣ ಸಂಘಟನೆ ಕಾರ್ಯಕರ್ತರು ಒತ್ತಾಯಿಸಿದರು.

The former soldiers appeals to government to retaliate against China
ಚೀನಾ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳುವಂತೆ ಮಾಜಿ ಸೈನಿಕರಿಂದ ಸರ್ಕಾರಕ್ಕೆ ಮನವಿ
author img

By

Published : Jun 23, 2020, 4:41 PM IST

ವಿಜಯಪುರ: 20 ಯೋಧರ ಹತ್ಯೆಗೈದ ಚೀನಾ ದೇಶದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವಂತೆ ಜಿಲ್ಲಾ ಮಾಜಿ ಸೈನಿಕರ ಕಲ್ಯಾಣ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು‌.

ಚೀನಾ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವಂತೆ ಮಾಜಿ ಸೈನಿಕರಿಂದ ಸರ್ಕಾರಕ್ಕೆ ಮನವಿ
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಚೀನಾ ದೇಶದ ವಿರುದ್ಧ ಘೋಷಣೆ ಕೂಗಿ ಮಾಜಿ ಸೈನಿಕರು ಆಕ್ರೋಶ ಹೊರ ಹಾಕಿದರು‌. ಗಾಲ್ವಾನ್ ಕಣಿವೆಯಲ್ಲಿ ಶಸ್ತ್ರಾಸ್ತ್ರಗಳ ಬಳಕೆ ಮಾಡಬಾರದು ಎಂದು ಒಪ್ಪಂದವಿದ್ದರೂ ಚೀನಾ ಸೈನಿಕರು ಕಬ್ಬಿಣದ ಸಲಾಕೆಯಿಂದ ಹೊಡೆದು ಭಾರತೀಯ ಯೋಧರನ್ನು ಹತ್ಯೆ ಮಾಡಿದ್ದಾರೆ. ಯೋಧರ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಿರುವ ಚೀನಾ ವಿರುದ್ಧ ಕೇಂದ್ರ ಸರ್ಕಾರ ಪ್ರತೀಕಾರ ತೀರಿಸಿಕೊಂಡಾಗ ಮಾತ್ರ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ಒತ್ತಾಯಿಸಿದರು. ಚೀನಾ ವಸ್ತುಗಳ ಬಳಕೆಯನ್ನು ಸರ್ಕಾರ ನಿಷೇಧಿಸಬೇಕು. ಯಾವುದೇ ಯುದ್ಧ ಸನ್ನಿವೇಶ ಎದುರಾದರೂ ಮಾಜಿ ಸೈನಿಕರು ಮರಳಿ ಸೈನ್ಯಕ್ಕೆ ಸೇರಲು ಸನ್ನದ್ಧರಿದ್ದಾರೆ ಎಂದರು. ಇದೇ ವೇಳೆ ವೀರ ಮರಣ‌ ಹೊಂದಿದ ಯೋಧರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಮೌನಾಚರಣೆ ಮಾಡಿ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ‌ ಮನವಿ ಸಲ್ಲಿಸಿದರು.‌‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.