ETV Bharat / state

ಮಂಗಳೂರು: ಲೋಕಾಯುಕ್ತ ಹೆಸರಲ್ಲಿ ಪುರಸಭೆ ಕಂದಾಯ ಅಧಿಕಾರಿಗೆ ಹಣಕ್ಕೆ ಬೇಡಿಕೆ, ಆರೋಪಿ ಬಂಧನ - CHEATING CASE

ಲೋಕಾಯುಕ್ತ ಎಂದು ಸುಳ್ಳು ಹೇಳಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಯನ್ನು ಮಂಗಳೂರಿನ ಪೊಲೀಸರು ಬಂಧಿಸಿದ್ದಾರೆ.

ಲೋಕಾಯುಕ್ತ ಹೆಸರಲ್ಲಿ ಪುರಸಭೆ ಕಂದಾಯ ಅಧಿಕಾರಿಗೆ ಹಣಕ್ಕೆ ಬೇಡಿಕೆ
ಆರೋಪಿ (ETV Bharat)
author img

By ETV Bharat Karnataka Team

Published : Dec 23, 2024, 5:01 PM IST

ಮಂಗಳೂರು: ತಾನು ಲೋಕಾಯುಕ್ತ ಎಂದು ಸುಳ್ಳು ಹೇಳಿ ಸೋಮೇಶ್ವರ ಪುರಸಭೆಯ ಕಂದಾಯ ಅಧಿಕಾರಿಗೆ ವಂಚಿಸಲು ಹೋದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ನಲ್ಲಗುಟ್ಲಪಲ್ಲಿ ಗ್ರಾಮದ ಧನಂಜಯ್​ ರೆಡ್ಡಿ ತೋಟ ಬಂಧಿತ ಆರೋಪಿ.

2024ರ ಏಪ್ರಿಲ್ 6 ರಂದು ಸೋಮೇಶ್ವರ ಪುರಸಭೆ ರೆವಿನ್ಯೂ ಆಫೀಸರ್ ಪುರುಷೋತ್ತಮ ಅವರ ಮೊಬೈಲ್‌ಗೆ ಅಪರಿಚಿತನಿಂದ ವಾಟ್ಸ್ಆ್ಯಪ್ ಕರೆ ಬಂದಿತ್ತು. 'ತಾನು ಲೋಕಾಯುಕ್ತದಿಂದ ಮಾತನಾಡುತ್ತಿದ್ದೇನೆ‌. ತಮ್ಮ ಮೇಲೆ ಆರೋಪ ಬಂದಿದೆ. ನಮ್ಮ ಟೆಕ್ನಿಕಲ್ ಆಫೀಸರ್ ನಿಮ್ಮ ಆಫೀಸಿಗೆ ಬರುವ ಮೊದಲು ಅದನ್ನು ಸರಿ ಮಾಡುವುದಾದರೆ ಮಾಡುವ' ಎಂದು, 'ಹಣ ನೀಡುವಂತೆ' ಫೋನ್​ನಲ್ಲಿ ಬೇಡಿಕೆ ಇಟ್ಟಿದ್ದನು. 'ಇಲ್ಲವಾದಲ್ಲಿ ತೊಂದರೆ ಮಾಡುವುದಾಗಿ' ಬೆದರಿಕೆ ಹಾಕಿದ್ದನು.

ಆರೋಪಿ ಕರೆ ಮಾಡಿರುವ ಮೊಬೈಲ್ ಸಂಖ್ಯೆಯನ್ನು ಟ್ರೂಕಾಲರ್‌ನಲ್ಲಿ ಪರೀಶೀಲಿಸಿದಾಗ ಡಿ. ಪ್ರಭಾಕರ ಲೋಕಾಯುಕ್ತ ಪಿಐ ಎಂದು ಬಂದಿದೆ. ಈ ಬಗ್ಗೆ ಪುರುಷೋತ್ತಮ ಅವರು ಮಂಗಳೂರಿನಲ್ಲಿರುವ ಕರ್ನಾಟಕ ಲೋಕಾಯುಕ್ತ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಈ ಬಗ್ಗೆ ವಿಚಾರಿಸಿದ್ದರು. ಆಗ ಅಂತಹ ಹೆಸರಿನ ಯಾವುದೇ ಅಧಿಕಾರಿ/ಸಿಬ್ಬಂದಿ ಇರುವುದಿಲ್ಲವಾಗಿ ತಿಳಿದು ಬಂದಿದೆ.

ಅಲ್ಲದೆ ಪುರುಷೋತ್ತಮ ಅವರ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಕಿ ಲಿಲ್ಲಿ ನಾಯರ್ ಹಾಗೂ ಹಿರಿಯ ಆರೋಗ್ಯ ನಿರೀಕ್ಷಕ ಕೃಷ್ಣ ಆರ್. ಅವರಿಗೂ ಇದೇ ರೀತಿ ಬೆದರಿಕೆ ಕರೆ ಬಂದಿತ್ತು. ಆದ್ದರಿಂದ ಕರೆ ಮಾಡಿರುವ ಅಪರಿಚಿತ ಹಣ ಮಾಡುವ ಉದ್ದೇಶದಿಂದ ಕರ್ನಾಟಕ ಲೋಕಾಯುಕ್ತ ಎಂದು ನಟಿಸಿದ್ದಾನೆ ಎಂದು ದೂರು ದಾಖಲಿಸಲಾಗಿತ್ತು‌. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಇದೇ ರೀತಿಯ ಕೃತ್ಯ ಎಸಗಿದ ಬಗ್ಗೆ ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಪೊಲೀಸ್ ಠಾಣೆ ಹಾಗೂ ಹೈದರಾಬಾದ್‌ನ ಶಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಒಂದು ತಿಂಗಳು ಡಿಜಿಟಲ್ ಅರೆಸ್ಟ್: ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿಗೆ 11.83 ಕೋಟಿ ರೂ. ವಂಚನೆ

ಇದನ್ನೂ ಓದಿ: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಪ್ರಕರಣ: 1.50 ಕೋಟಿ ವಂಚನೆ, ಆರೋಪಿಗಳು ಅರೆಸ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.