ETV Bharat / state

ಸಿಂದಗಿ ಉಪ ಚುನಾವಣೆ : ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ - ಸಿಂದಗಿ ಉಪ ಚುನಾವಣೆ

ನಾಳೆ ಸಿಎಂ ಬಸವರಾಜ್ ಬೊಮ್ಮಾಯಿ 12 ಗ್ರಾಮಗಳಿಗೆ ಭೇಟಿ ನೀಡಿ ಮತಯಾಚಿಸಲಿದ್ದಾರೆ. ಮಧ್ಯಾಹ್ನದ ಬಳಿಕ ಪಟ್ಟಣದಲ್ಲಿ ಮತಯಾಚನೆ ಮಾಡಲಿದ್ದಾರೆ. ನಾಳೆ ಮತ್ತು ನಾಡಿದ್ದು ಕೆ ಎಸ್ ಈಶ್ವರಪ್ಪ ಮತಯಾಚನೆ ಮಾಡಲಿದ್ದಾರೆ. ಸಿಂದಗಿ ಪಟ್ಟಣದಲ್ಲಿರುವ ರಸ್ತೆಗಳು ಹಾಳಾಗಿರೋದ್ರಿಂದ ವಿಶೇಷ ಪ್ಯಾಕೇಜ್ ಮೂಲಕ ಅವುಗಳ ನಿರ್ಮಾಣ ಮಾಡಲಾಗುವುದು..

ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ
ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ
author img

By

Published : Oct 23, 2021, 4:08 PM IST

ವಿಜಯಪುರ : ಜನರ ನಾಡಿ ಮೀಡಿತ ನಮಗೆ ಅರ್ಥವಾಗಿದೆ. ರಮೇಶ ಭೂಸನೂರ ಸುಮಾರು 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿಶ್ವಾಸ ವ್ಯಕ್ತಪಡಿಸಿದರು.

ಸಿಂದಗಿ ಬೈ ಎಲೆಕ್ಷನ್‌.. ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ..

ಸಿಂದಗಿಯಲ್ಲಿ ಮಾತನಾಡಿದ ಅವರು, ಮೋದಿ ಆಡಳಿತ, ಬೊಮ್ಮಾಯಿ ಆಡಳಿತ ನಮಗೆ ಮತವಾಗಿ ವರವಾಗಲಿದೆ. ಸೂರ್ಯ-ಚಂದ್ರರು ಇರುವುದು ಎಷ್ಟು ಸತ್ಯವೋ ರಮೇಶ ಭೂಸನೂರ ಗೆದ್ದೇ ಗೆಲ್ಲುವುದು ಅಷ್ಟೇ ಸತ್ಯ, ಅಭಿವೃದ್ಧಿಗಾಗಿ ಭೂಸನೂರ ಗೆಲುವು ಸಾಧಿಸುವುದು ಶತಃಸಿದ್ಧ ಎಂದರು.

ಕಳೆದ ಸಲ ಅನುಕಂಪದಿಂದಾಗಿ ಎಂಸಿ ಮನಗೂಳಿ ಗೆಲುವು ಸಾಧಿಸಿದರು. ಕ್ಷೇತ್ರದಲ್ಲಿ ಇವತ್ತು ರಮೇಶ ಭೂಸನೂರ ಪರವಾಗಿ ಅನುಕಂಪವಿದೆ. ರಮೇಶ ಭೂಸನೂರ ಅವರನ್ನು ಶತಾಯ ಗತಾಯ ಗೆಲ್ಲಿಸಬೇಕು ಎಂದು ಜನರು ಬಯಸಿದ್ದಾರೆ ಎಂದರು.

ಬಿಜೆಪಿ ಹಣ ಹಂಚಿಕೆ ಆರೋಪ : ನಮಗೆ ಹಣ ಹಂಚಿ ರೂಢಿ ಇಲ್ಲ, ನಮ್ಮ ಪಕ್ಷ ಅಷ್ಟೊಂದು ಕೆಳ ಮಟ್ಟಕ್ಕೆ ಇಳಿದಿಲ್ಲ. ಕಾಂಗ್ರೆಸ್ ಪಕ್ಷದವರೇ ಮೂಟೆ ಮೂಟೆ ಹಣ ತಂದು ಹಂಚಿ ಚುನಾವಣೆ ಗೆಲ್ಲಬೇಕೆಂದು ಪ್ಲ್ಯಾನ್ ಮಾಡಿರಬೇಕು ಎಂದರು.

ನಾಳೆ ಸಿಎಂ ಬಸವರಾಜ್ ಬೊಮ್ಮಾಯಿ 12 ಗ್ರಾಮಗಳಿಗೆ ಭೇಟಿ ನೀಡಿ ಮತಯಾಚಿಸಲಿದ್ದಾರೆ. ಮಧ್ಯಾಹ್ನದ ಬಳಿಕ ಪಟ್ಟಣದಲ್ಲಿ ಮತಯಾಚನೆ ಮಾಡಲಿದ್ದಾರೆ. ನಾಳೆ ಮತ್ತು ನಾಡಿದ್ದು ಕೆ ಎಸ್ ಈಶ್ವರಪ್ಪ ಮತಯಾಚನೆ ಮಾಡಲಿದ್ದಾರೆ. ಸಿಂದಗಿ ಪಟ್ಟಣದಲ್ಲಿರುವ ರಸ್ತೆಗಳು ಹಾಳಾಗಿರೋದ್ರಿಂದ ವಿಶೇಷ ಪ್ಯಾಕೇಜ್ ಮೂಲಕ ಅವುಗಳ ನಿರ್ಮಾಣ ಮಾಡಲಾಗುವುದು ಎಂದರು.

ಸಂಬಂಧಪಟ್ಟ ಸಚಿವರ ಜೊತೆಗೆ ಮಾತುಕತೆ ಮಾಡಲಾಗಿದೆ. ಹೊಸ ರಸ್ತೆಗಳ ನಿರ್ಮಾಣ ಮಾಡಲು ಸಂಕಲ್ಪ ಮಾಡಲಾಗಿದೆ. ಆಲಮೇಲ ಭಾಗದ ಅಭಿವೃದ್ಧಿಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೊಸ ತಾಲೂಕು ಆಲಮೇಲ ಘೊಷಣೆ ಮಾಡಲಾಗಿದ್ದು, ವಿಶೇಷ ಅನುದಾನ ಪಡೆದುಕೊಂಡು ಅದನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.

ಪ್ರಣಾಳಿಕೆ ಬಿಡುಗಡೆ : ವಿಜಯಪುರ ಜಿಲ್ಲೆಯ ಸಿಂದಗಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸಿಂದಗಿ ಕ್ಷೇತ್ರದ ಮಟ್ಟಿಗೆ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ರಸ್ತೆ, ವಿದ್ಯುತ್, ನೀರು, ಇತರೇ ಸೌಲಭ್ಯ ಸೇರಿ 35 ಅಂಶಗಳುಳ್ಳ ಪ್ರಣಾಳಿಕೆಯನ್ನು ಬಿಜೆಪಿಯ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಡುಗಡೆ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.