ವಿಜಯಪುರ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ಸನ್ನಡತೆ ಆಧಾರದ ಮೇಲೆ 10 ಮಂದಿ ಜೈಲು ಹಕ್ಕಿಗಳ ಬಿಡುಗಡೆಗೆ ನಿರ್ಧರಿಸಲಾಗಿದೆ. ನಗರದ ಕೇಂದ್ರ ಕಾರಾಗೃಹದಿಂದ ನಾಳೆ 10 ಕೈದಿಗಳು ಬಿಡುಗಡೆಯಾಗಲಿದ್ದಾರೆ.
ವಿವಿಧ ತಪ್ಪುಗಳಿಂದ ಶಿಕ್ಷೆಗೆ ಒಳಗಾಗಿ ಹಲವು ವರ್ಷಗಳಿಂದ ಜೈಲಿನಲ್ಲಿದ್ದರೂ ತಮ್ಮ ಸನ್ನಡತೆಯಿಂದ ಉತ್ತಮ ಜೀವನ ರೂಪಿಸಿಕೊಳ್ಳುವ ಭರವಸೆ ಮೂಡಿಸಿರುವ ಕೈದಿಗಳಲ್ಲಿ ಮೂವರು ಸಹೋದರರು ಹಾಗೂ ಅವರ ತಂದೆ ಸೇರಿ ಒಂದೇ ಕುಟುಂಬದ ನಾಲ್ವರು ಇದ್ದಾರೆ. ಬಸಪ್ಪ ಮಲಕಾರಿ ಜಟಗೊಂಡ, ಗೌಡಪ್ಪ ಜಟಗೊಂಡ, ಬೆಳೆನ್ನಿ ಜಟಗೊಂಡ ಹಾಗೂ ಇವರ ತಂದೆ ಮಲಕಾರಿ ಜಟಗೊಂಡ ಬಿಡುಗಡೆಯಾಗುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಕ್ಕಲಕಿ ಕ್ರಾಸ್ ನಿವಾಸಿಯಾಗಿರುವ ಇವರು, ಗ್ರಾಮಸ್ಥರೊಬ್ಬರ ತೋಟದಲ್ಲಿ ಹೂವು ಕಿತ್ತಿದ್ದಾರೆ ಎಂಬ ಕಾರಣಕ್ಕೆ ಎರಡು ಕುಟುಂಬಗಳ ಮಧ್ಯೆ ಜಗಳವಾಗಿತ್ತು. ತಂದೆ ಹಾಗೂ ಅವರ ಮೂವರು ಮಕ್ಕಳು ಹೂವಿನ ತೋಟದ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಸಂಬಂಧ ನಾಲ್ವರಿಗೂ 2 ವರ್ಷದ ಶಿಕ್ಷೆಯಾಗಿತ್ತು. ಈಗ ಇವರನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗುತ್ತಿದೆ. ಇವರ ಜೊತೆಗೆ ಸಿದ್ದಪ್ಪ ಮಾದರ, ಅಪ್ಪು ಹಿರೇಮಠ, ಮಾಯಪ್ಪ ವಾಡೇದ, ಉಮಾ ಚವ್ಹಾಣ ಹಾಗೂ ಮುತ್ತವ್ಚ ನಾಗವ್ವಗೋಳ ಸೇರಿ 10 ಮಂದಿ ಕೈದಿಗಳು ನಾಳೆ ಜೈಲಿನಿಂದ ಬಿಡುಗಡೆ ಆಗುತ್ತಿದ್ದಾರೆ.
ಇದನ್ನೂ ಓದಿ: ಉದ್ದೇಶಪೂರ್ವಕವಾಗಿಯೇ ನೆಹರು ಭಾವಚಿತ್ರ ಕೈಬಿಟ್ಟಿದ್ದೇವೆ : ಎನ್. ರವಿಕುಮಾರ್