ETV Bharat / state

ಮುದ್ದೇಬಿಹಾಳ: ವ್ಯವಹಾರದ ಸಮಯ ಕಡಿತಗೊಳಿಸಿದ ದಿನಸಿ ಅಂಗಡಿ ವ್ಯಾಪಾರಸ್ಥರು

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮುದ್ದೇಬಿಹಾಳದ ತಾಳಿಕೋಟೆ ಪಟ್ಟಣದಲ್ಲಿ ವ್ಯಾಪಾರಸ್ಥರು ವ್ಯಾಪಾರದ ಸಮಯವನ್ನ ಸ್ವಯಂ ಪ್ರೇರಿತವಾಗಿ ಕಡಿತಗೊಳಿಸಿದ್ದಾರೆ.

Talikote
Talikote
author img

By

Published : Jul 18, 2020, 2:01 PM IST

ಮುದ್ದೇಬಿಹಾಳ: ತಾಳಿಕೋಟೆ ಪಟ್ಟಣದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು,ಈ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ವ್ಯಾಪಾರದ ಸಮಯ ಕಡಿತಗೊಳಿಸಲು ನಿರ್ಧರಿಸಿದ್ದಾರೆ.

ಪಟ್ಟಣದ ಬಜಾರ ಬಸವೇಶ್ವರ ದೇವಸ್ಥಾನದಲ್ಲಿ ಸಭೆ ನಡೆಸಿದ ವ್ಯಾಪಾರಸ್ಥರು ಈ ತಿರ್ಮಾನ ಕೈಗೊಂಡಿದ್ದಾರೆ. ಜುಲೈ 20ರಿಂದ ಆಗಸ್ಟ್ 05 ರವರೆಗೆ ಬೆಳಗ್ಗೆ 08 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೆ ಮಾತ್ರ ದಿನಸಿ ಅಂಗಡಿಗಳನ್ನು ತರೆಯುವ ನಿರ್ಧಾರ ಕೈಗೊಂಡಿದ್ದಾರೆ.

ಸಭೆಯಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಗೇಶ ವಿರಕ್ತಮಠ, ಮುಖಂಡರಾದ ವಿರೂಪಾಕ್ಷಯ್ಯ ಹಿರೇಮಠ (ಹಂಪಿ), ಕಿರಾಣಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ರವಿ ತಾಳಪಲ್ಲೆ, ಉಪಾಧ್ಯಕ್ಷ ಕಾಶಿನಾಥ ಸಜ್ಜನ ಒಳಗೊಂಡು ಕಿರಾಣಿ ವ್ಯಾಪಾರಸ್ಥರು ಭಾಗವಹಿಸಿದ್ದರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.