ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಟಗೇರಿ ರೈಲು ಹೋರಾಟ ಸಮಿತಿಯಿಂದ ವಿಜಯಪುರ ರೈಲು ನಿಲ್ದಾಣದಲ್ಲಿ ಸಾಂಕೇತಿಕ ಧರಣಿ ನಡೆಸಲಾಯಿತು.
ಯಶವಂತಪುರ ವಿಜಯಪುರ ರೈಲು ವೇಳೆಯನ್ನು ಮಧ್ಯಾಹ್ನ ಒಂದು ಗಂಟೆಗೆ ಬದಲಾಗಿ ಸಂಜೆ 7ಗಂಟೆಗೆ ಮಾಡಬೇಕು. ಗದಗ ಮುಂಬೈ ರೈಲಿಗೆ ಬೋಗಿಗಳನ್ನು ಹೆಚ್ಚಿಸಬೇಕು. ವಿಜಯಪುರ ಗದಗ ಚೆನ್ನೈಗೆ ಹೊಸದಾಗಿ ಗಾಡಿಯನ್ನು ಆರಂಭಿಸಬೇಕು. ಪ್ರವಾಸಿ ತಾಣವಾಗಿರುವ ವಿಜಯಪುರ ರೈಲು ನಿಲ್ಲಾಣದಲ್ಲಿ ಪ್ಲಾಟ್‌ಫಾರಂಗಳ ಸಂಖ್ಯೆ ಹೆಚ್ಚಿಸಬೇಕು. ರೈಲು ನಿಲ್ದಾಣದಲ್ಲಿ ಬ್ಯಾಟರಿ ಕಾರ ಕಲ್ಪಿಸಬೇಕು. ಮಹಿಳೆಯರಿಗೆ ವಿಶ್ರಾಂತಿ ಗೃಹ ನಿರ್ಮಾಣವೂ ಸೇರಿ ಹಲವಾರು ಬೇಡಿಕೆಗಳಿಗೆ ಆಗ್ರಹಿಸಿ ಬೆಟಗೇರಿ ರೈಲು ಹೋರಾಟ ಸಮಿತಿಯ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಇಲಾಖೆ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತು ರೈಲು ನಿಲ್ದಾಣದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಬೆಟಗೇರಿ ರೈಲು ಹೋರಾಟ ಸಮಿತಿ ಗಣೇಶ ಸಿಂಗ್‌ಬ್ಯಾಳಿ ಆಗ್ರಹಿಸಿದರು.