ವಿಜಯಪುರ: ಲಾಕ್ ಡೌನ್ ನಿಂದ ಮುಂದೂಡಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಇಂದು ನಡೆಯಿತು. ಜಿಲ್ಲೆಯಲ್ಲಿ 23,562 ವಿದ್ಯಾರ್ಥಿಗಳಲ್ಲಿ 22,086 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರೆ, 1476 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.
ಸಾಮಾಜಿಕ ಅಂತರ ಮರೆತ ವಿದ್ಯಾರ್ಥಿಗಳು: ಕೊರೊನಾ ಭೀತಿಯಿಂದ ಪರೀಕ್ಷೆಗೆ ಹಾಜರಾಗಬೇಕಿದ್ದ ವಿದ್ಯಾರ್ಥಿ ಪರೀಕ್ಷಾ ಕೇಂದ್ರ ಎರಡು ಗಂಟೆ ಮೊದಲೇ ಆಗಮಿಸಿದ್ದರು. ಪರೀಕ್ಷಾ ಕೇಂದ್ರದ ಗೇಟ್ ನಲ್ಲಿ ಯಾವುದೇ ಅಂತರವಿಲ್ಲದೇ ಕ್ಯೂನಲ್ಲಿ ನಿಂತುಕೊಂಡು ಥರ್ಮಲ್ ಸ್ಕ್ರೀನಿಂಗ್ ಗೆ ವಿದ್ಯಾರ್ಥಿಗಳು ಒಳಗಾದರು. ನಂತರ ಸ್ಯಾನಿಟೈಜರ್ ಮಾಡಿದ ಮೇಲೆ ಪರೀಕ್ಷಾ ಕೇಂದ್ರಕ್ಕೆ ಬಿಡಲಾಯಿತು. ಯಾವ ಹಾಲ್ ನಲ್ಲಿ ನಂಬರ್ ಬಂದಿದೆ ಎಂದು ನೋಡಲು ವಿದ್ಯಾರ್ಥಿಗಳು ಮುಗಿಬಿದ್ದಿದ್ದ ದೃಶ್ಯಗಳು ಕಂಡುಬಂದವು.
ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಪೋಷಕರಿಗೆ ಪ್ರವೇಶ ನಿರಾಕರಿಸಲಾಗಿತ್ತಾದರೂ. ಮೂರು ತಿಂಗಳ ಲಾಕ್ ಡೌನ್ ಅವಧಿ ಮುಗಿದ ಬಳಿಕ ಸ್ನೇಹಿತರು ಸಿಕ್ಕಿದ್ದಾರೆಂದು ಸಾಮಾಜಿಕ ಅಂತರ ಮರೆತು ವಿದ್ಯಾರ್ಥಿಗಳು ಒಟ್ಟೊಟ್ಟಾಗಿಯೇ ಅತ್ತಿಂದಿತ್ತ ಓಡಾಡಿದರು.