ವಿಜಯಪುರ: ಸಮರ್ಥ ಪ್ರತಿಪಕ್ಷವಾಗಿ ಕಾರ್ಯ ನಿರ್ವವಹಿಸಲಾಗದೆ ಕಾಂಗ್ರೆಸ್ ಪಕ್ಷ ಜನಪರ ಯೋಜನಗಳ ವಿರುದ್ಧ ಮುಗ್ದ ರೈತರನ್ನ ಎತ್ತಿಕಟ್ಟುವುದನ್ನ ಬಿಡಬೇಕು ಎಂದು ರಾಜಸಭಾ ಸದಸ್ಯ ಹಾಗೂ ರಾಜ್ಯ ರೈತರ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವ್ರು, ಕೇಂದ್ರ ಸರ್ಕಾರ ರೈತರ ಆದಾಯ ದ್ವಿಗುಣ ಮಾಡಲು 3 ಮಸೂದೆ ಹಾಗೂ ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡೆ ಕಾನೂನು ಜಾರಿ ಮಾಡಿದೆ. ಅವುಗಳ ವಿರುದ್ಧದ ಕಾಂಗ್ರೆಸ್ ಹಾಗೂ ರೈತ ಮುಖಂಡರು ಪ್ರತಿಭಟನೆ ನಡೆಸುವುದು ಸರಿಯಿಲ್ಲ. ಕಾನೂನಿನಲ್ಲಿ ತಪ್ಪಿದ್ದರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಧಿವೇಶನಗಳಲ್ಲಿ ಚರ್ಚೆ ಮಾಡಿ ತಪ್ಪು ಕಂಡು ಹಿಡಿಬೇಕು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಇನ್ನು ಎಪಿಎಂಸಿ ಹಾಗೂ ಭೂ ಸುಧಾರಣೆ ಕಾಯ್ದೆಗಳು ರೈತರನ್ನ ತುಳಿಯುವ ಕೆಲಸ ಮಾಡ್ತಿವೆ ಎಂದು ಬಿಂಬಿಸಲಾಗುತ್ತಿದೆ. ಮುಂದೆ ಎಪಿಎಂಸಿ ಇರುತ್ತದೆ. ಬೇಗ ರೈತರಿಗೆ ಹೆಚ್ಚಿನ ಆದಾಯವಾಗಲಿ ಎನ್ನುವ ಉದ್ದೇಶದಿಂದ ಕಾಯ್ದೆ ಶಾಸನ ಸಭೆಗಳಲ್ಲಿ ಚರ್ಚೆ ಮಾಡಿ ಜಾರಿ ಮಾಡಿದೆ. ಇನ್ನೂ ಭೂ ಸುಧಾರಣೆ ಕಾಯ್ದೆ ಪ್ರಕಾರ ನೀರಾವರಿ ಜಮೀನು ಕೃಷಿ ಉದ್ದೇಶಕ್ಕೆ ಮಾತ್ರ ಬಳಸಬೇಕು ಹಾಗೂ ಕೃಷಿ ಚಟುವಟಿಕೆ ಉಪಯೋಗವಲ್ಲದ ಜಮೀನು ಕೈಗಾರಿಕೆ ಉಪಯೋಗ ಮಾಡಬೇಕು ಎಂದು ಕಾನೂನು ಇದೆ. 5 ಜನರಿರುವ ಕುಟುಂಬಕ್ಕೆ 54 ಎಕರೆ ಭೂಮಿ ಖರೀದಿ ಹಾಗೂ 10 ಜನರಿರುವ ಕಟುಂಬಕ್ಕೆ 108 ಎಕರೆ ಭೂಮಿ ಖರೀದಿ ಮಾತ್ರ ಕಾಯ್ದೆಯಲ್ಲಿ ಅವಾಕಾಶವಿದೆ ಎಂದು ರೈತ ಮೋರ್ಚಾ ರಾಜ್ಯಾಧ್ಯಕ್ಷ ಕಡಾಡಿ ಸ್ಪಷ್ಟವಾಗಿ ಹೇಳಿದ್ರು.
ಅಲ್ಲದೆ ಅಧಿವೇಶನ ಸಮಯದಲ್ಲಿ 22 ಬೆಳೆಗಳಿಗೆ ಪ್ರಧಾನಿ ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ. ಉತ್ತರ ಕರ್ನಾಟಕ ಗೋವಿನ ಜೋಳ ಬೆಳೆ ಹಾನಿಯಾದ ರೈತರಿಗೆ 5 ಸಾವಿರ ಪರಿಹಾರ ಘೋಷಣೆಯಾಗಿದೆ. ಹಾಗೆ ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆಯ ಬೋರ್ಡ್ ನಿರ್ಮಾಣಕ್ಕೂ ಸರ್ಕಾರದ ಜೊತೆ ಚರ್ಚೆ ಮಾಡತ್ತೇವೆ ಎಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ರೈತ ಮೋರ್ಚಾ ಅಧಕ್ಷ ಈರಣ್ಣ ಕಡಾಡಿ ಹೇಳಿದ್ದಾರೆ.