ವಿಜಯಪುರ : ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಕರ್ನಾಟಕ ಮೂಲದ ಇಬ್ಬರು ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಖಚಿತಪಡಿಸಿರುವುದಾಗಿ ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕೊಲಂಬೊ ಸರಣಿ ಬಾಂಬ್ ಬ್ಲಾಸ್ಟ್ ಒಂದು ಹೇಯ ಕೃತ್ಯ. 200 ಕ್ಕೂ ಹೆಚ್ಚು ಜನ ಮೃತ ಪಟ್ಟಿದ್ದು ದುರಂತ, ಇಂಥ ಕೃತ್ಯಗಳು ಯಾವುದೇ ದೇಶದಲ್ಲಿ ಆಗಬಾರದು ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸಿರುವುದು ನೀಚ ಕೃತ್ಯ ಎಂದರು.
ವಿದೇಶಾಂಗ ಇಲಾಖೆಯ ಅಧಿಕಾರಿಗಳು ಡಿಜಿಪಿ ಜೊತೆಗೆ ಸಂಪರ್ಕದಲ್ಲಿವೆ. ನಮ್ಮ ಪೊಲೀಸರು ಸಹ ಶ್ರೀಲಂಕಾದ ಭಾರತೀಯ ರಾಯಭಾರ ಕಚೇರಿ ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.
ಹನುಂತರಾಯಪ್ಪ, ಎಂ ರಂಗಪ್ಪ ಎಂಬಿಬ್ಬರ ಬಗ್ಗೆ ಮೃತಪಟ್ಟ ಮಾಹಿತಿ ಬಂದಿದೆ. ಲಕ್ಷಿ ನಾರಾಯಣ ಚಂದ್ರಶೇಖರ್, ರಮೇಶ ಬಗ್ಗೆಯೂ ಸಹ ಸುದ್ದಿ ಇದೆ ಆದರೆ ನಿಖರವಾದ ಮಾಹಿತಿ ಇಲ್ಲ. ಇನ್ನುಳಿದವರ ಬಗ್ಗೆ ಮಾಹಿತಿ ತರಿಸಿಕೊಳ್ಳುತ್ತಿದ್ದೇವೆ , ನಿಖರವಾದ ಸುದ್ದಿ ಬಂದ ಮೇಲಷ್ಟೆ ಮಾತಾನಾಡಿದೆ ಒಳಿತು, ಕಾರಣ ಇದೊಂದು ಸೂಕ್ಷ್ಮ ವಿಚಾರವಾಗಿದೆ ಎಂದರು.
ಬೆಂಗಳೂರಿನ ದಾಸರಹಳ್ಳಿಯ 7 ಜನರ ಮಾಹಿತಿಯೂ ಬರುತ್ತಿದೆ, ವಿದೇಶಾಂಗ ಇಲಾಖೆಯಿಂದ ಅಧಿಕೃತವಾಗಿ ಮಾಹಿತಿ ಬಂದ ಬಳಿಕವಷ್ಟೇ ನಿರ್ದಿಷ್ಟವಾಗಿ ಹೇಳಬಹುದು ಎಂದರು.