ETV Bharat / state

ವಿಜಯಪುರ: ವಿಶೇಷಚೇತನರ ಮದುವೆಗೆ ಕೂಡಿ ಬಂದ ಕಂಕಣ - ವಿಜಯಪುರದಲ್ಲಿ ಮದುವೆಯಾದ ವಿಶೇಷಚೇತನರು

ವಿಜಯಪುರದಲ್ಲೊಂದು ವಿಶೇಷ ಮದುವೆ ನಡೆದಿದ್ದು, ವಿಶೇಷಚೇತನರಿಬ್ಬರು ಮದುವೆಯಾಗಿದ್ದಾರೆ. ವಿಜಯಪುರದ ಜ್ಞಾನ ಯೋಗಾಶ್ರಮದ ಕಲ್ಯಾಣ ಮಂಟಪದಲ್ಲಿ ಈ ವಿಶೇಷ ಮದುವೆ ನಡೆಯಿತು.

Specialsed persons married at Vijayapura
ವಿಶೇಷ ಚೇತನರ ಮದುವೆಗೆ ಕೂಡಿ ಬಂದ ಕಂಕಣ
author img

By

Published : Feb 22, 2022, 6:33 PM IST

Updated : Feb 22, 2022, 7:17 PM IST

ವಿಜಯಪುರ: ಜಿಲ್ಲೆಯಲ್ಲಿ ವಿಶೇಷಚೇತನರಿಬ್ಬರು ಮದುವೆಯಾಗಿದ್ದು,‌ ವಧುವಿಗೆ ಎರಡೂ ಕಿವಿ ಕೇಳುವುದಿಲ್ಲ. ವರನಿಗೆ ಒಂದು ಕಿವಿ ಕೇಳುತ್ತೆ, ಆದರೆ, ಅಲ್ಪ ಸ್ವಲ್ಪ ಮಾತನಾಡುತ್ತಾರೆ. ಇವರ ಮದುವೆಗೆ ಪೋಷಕರು, ಸಂಬಂಧಿಕರು, ಸ್ನೇಹಿತರು ಸಾಕ್ಷಿಯಾದರು.

ವಿಜಯಪುರದ ಜ್ಞಾನ ಯೋಗಾಶ್ರಮದ ಕಲ್ಯಾಣ ಮಂಟಪದಲ್ಲಿ ಈ ವಿಶೇಷ ಮದುವೆ ನಡೆದಿದ್ದು, ಇದು ಎಲ್ಲರಲ್ಲಿಯೂ ಸಂತಸ ಮೂಡಿಸಿತ್ತು.‌ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಖುದ್ದಾಗಿ ಬಂದು ಇಡೀ ಮದುವೆ ಕಾರ್ಯಕ್ರಮ ಮುಗಿಯುವವರೆಗೆ ಸ್ಥಳದಲ್ಲಿಯೇ ಇದ್ದು, ಶುಭ ಹಾರೈಸಿದರು.

ಬಿಎ ಪದವೀಧರೆ ಸ್ವಪ್ನಾ ವಿಜಯಪುರದವರಾಗಿದ್ದು, ಸುಜಾತಾ ಮತ್ತು ಶಿವಾನಂದ ರೇಶ್ಮಿ ದಂಪತಿಯ ಮೂವರು ಮಕ್ಕಳಲ್ಲಿ ಕೊನೆಯವರು. ಐಟಿಐ ಓದಿರುವ ವಿನಾಯಕ ಹುಬ್ಬಳ್ಳಿಯ ಪ್ರಭಾವತಿ ಚಂದ್ರಶೇಖರ ಶಿವಪ್ಪಯ್ಯನಮಠ ಅವರ ಮೂವರು ಮಕ್ಕಳಲ್ಲಿ ಕೊನೆಯವರಾಗಿದ್ದಾರೆ.‌

ವಿಶೇಷಚೇತನರ ಮದುವೆಗೆ ಕೂಡಿ ಬಂದ ಕಂಕಣ

ಸ್ವಪ್ನಾ ಕಿವುಡ ಮತ್ತು ಮೂಗ ಯುವತಿಯಾಗಿದ್ದು. ಎರಡೂ ಕಿವಿ ಕೇಳುವುದಿಲ್ಲ. ಅಲ್ಪಸ್ವಲ್ಪ ತೊದಲು ಮಾತನಾಡುತ್ತಾರೆ. ವಿನಾಯಕ ಅವರಿಗೆ ಒಂದು ಕಿವಿ ಮಾತ್ರ ಕೇಳಿಸುತ್ತದೆ. ಆದರೆ ಮಾತನಾಡುತ್ತಾರೆ. ಈ ಇಬ್ಬರ ಪೋಷಕರಿಗೂ ತಮ್ಮ ಮಕ್ಕಳ ಮದುವೆಯ ಬಗ್ಗೆಯೇ ಚಿಂತೆಯಾಗಿತ್ತು. ಕಳೆದ ತಿಂಗಳು ಇಬ್ಬರ ಕುಟುಂಬಸ್ಥರು, ಸ್ವಪ್ನಾ ಮತ್ತು ವಿನಾಯಕ ಅವರ ಒಪ್ಪಿಗೆಯ ಮೇರೆಗೆ ಮದುವೆ ನಿಶ್ಚಯ ಮಾಡಿದ್ದಾರೆ. ಇದೀಗ ಇಬ್ಬರು ಶುಭ ಮುಹೂರ್ತದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ವಿನಾಯಕ ಅವರು, ತಮಗೆ ಇಷ್ಟವಾದ ಹೆಂಡತಿ ಸಿಕ್ಕಿದ್ದಾಳೆ. ನನಗೆ ಒಂದು ಕಿವಿ ಕೇಳಿಸುವುದಿಲ್ಲ. ಸ್ವಪ್ನಾಳಿಗೆ ಎರಡೂ ಕಿವಿ ಕೇಳುವುದಿಲ್ಲ. ಅಲ್ಪಸ್ವಲ್ಪ ಮಾತು ಬರುತ್ತದೆ. ಸ್ವಪ್ನಾಳ ಕನಸನ್ನು ನನಸು ಮಾಡುತ್ತೇನೆ. ಉತ್ತಮ ಪತಿಯಾಗಿ ಸಂಸಾರ ನಡೆಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನುಗ್ಗಿ ಬಂದ ಹಸುಗಳನ್ನು ಎದುರಿಸಿದ ಪಕ್ಷಿ.. ಅದರ ಧೈರ್ಯವೇ ನನಗೆ ಪ್ರೇರಣೆ ಎಂದ ಆನಂದ್​ ಮಹೀಂದ್ರಾ

ಸ್ವಪ್ನಾ ಕೂಡ ತಮ್ಮ ಮದುವೆಯಿಂದ ಖುಷಿಯಾಗಿದ್ದು, ನನಗೆ ಒಳ್ಳೆಯ ಗಂಡ ಸಿಕ್ಕಿದ್ದಾನೆ. ಇಬ್ಬರೂ ಇಷ್ಟಪಟ್ಟು ಮದುವೆ ಯಾಗುತ್ತಿದ್ದೇವೆ. ಪರಸ್ಪರ ಕಷ್ಟಸುಖಗಳಲ್ಲಿ ಒಂದಾಗಿ ಬಾಳುತ್ತೇವೆ. ನಮ್ಮಿಬ್ಬರ ತಂದೆ - ತಾಯಿ ಕನಸುಗಳನ್ನು ನನಸು ಮಾಡುತ್ತೇವೆ. ನಮ್ಮಂತೆ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಮಾದರಿಯಾಗಿ ದಾಂಪತ್ಯ ಜೀವನ ಸಾಗಿಸುತ್ತೇವೆ ಎಂದು ಹರ್ಷ ವ್ಯಕ್ತಪಡಿಸಿದರು.

ಈ ಮದುವೆಗೆ ಬಂದಿದ್ದ ಆಮಂತ್ರಿತರೆಲ್ಲ ವಿವಾಹ ಆಗುತ್ತಿರುವ ನವ ಜೋಡಿ ಹಾಗೂ ಎರಡೂ ಕುಟುಂಬಗಳ ನಿರ್ಧಾರದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಎಲ್ಲ ಮದುವೆ ಸಮಾರಂಭಗಳಂತೆ ಈ ಮದುವೆಯಲ್ಲಿಯೂ ಸಾಂಪ್ರದಾಯಿಕವಾಗಿ ಎಲ್ಲ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಎಲ್ಲರೂ ಸ್ವಪ್ನಾ ಮತ್ತು ವಿನಾಯಕ ಜೋಡಿಯನ್ನು ಹರಸಿ ಶುಭ ಕೋರಿದ್ದಷ್ಟೇ ಅಲ್ಲದೇ, ಇಂಥ ವಿಶೇಷ ಮದುವೆಯಲ್ಲಿ ಭಾಗಿಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.

Last Updated : Feb 22, 2022, 7:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.