ETV Bharat / state

ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಕೆ:  ಸಿಹಿ ಹಂಚಿ ಸಂಭ್ರಮಿಸಿದ ಗುಮ್ಮಟ ನಗರಿ ಜನತೆ - ರಾಮ ಮಂದಿರ ಭೂಮಿ ಪೂಜೆ

ಅಯೋಧ್ಯಾದಲ್ಲಿ ರಾಮ ಮಂದಿರ ಭೂಮಿ ಪೂಜೆ ಹಿನ್ನೆಲೆ ವಿಜಯಪುರದ ರಾಮ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಹಿಂದೂ ಕಾರ್ಯಕರ್ತರು, ಸಿಹಿ ಹಂಚಿ ಸಂಭ್ರಮಿಸಿದರು.

Special Pooja in Vijayapur Ram Mandhir
ವಿಜಯಪುರ ರಾಮ ಮಂದಿರರದಲ್ಲಿ ವಿಶೇಷ ಪೂಜೆ
author img

By

Published : Aug 5, 2020, 12:14 PM IST

ವಿಜಯಪುರ : ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆ ಹಿನ್ನೆಲೆ ನಗರದಲ್ಲೂ ಸಂಭ್ರಮ ಮನೆ ಮಾಡಿದ್ದು, ‌ಹಿಂದೂ ಪರ ಸಂಘಟನೆ ಕಾರ್ಯಕರ್ತರು ನಗರದ ರಾಮ ಮಂದಿರಕ್ಕೆ ಬಂದು ಪೂಜೆ‌ ಸಲ್ಲಿಸಿದರು.

ಕೊರೊನಾ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಂಡು ದೇವಾಲಯದ ಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಬೆಳಗಿನಿಂದಲೂ ದೇವಸ್ಥಾನದಲ್ಲಿ ಭಕ್ತರು ರಾಮ ಜಪ ಮಾಡುತ್ತಿದ್ದಾರೆ. ರಾಮ ಮಂದಿರದ ಮುಂಭಾಗದಲ್ಲಿ ಹಿಂದೂ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.

ವಿಜಯಪುರ ರಾಮ ಮಂದಿರದಲ್ಲಿ ವಿಶೇಷ ಪೂಜೆ

ದೇವಸ್ಥಾನದ ಪರಿಸರದಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್​ ಕೈಗೊಳ್ಳಲಾಗಿದೆ. ಭಕ್ತರು ದೇವಾಲಯಕ್ಕೆ ಬರುವಾಗ ಮಾಸ್ಕ್​ ಧರಿಸಿ, ಸ್ಯಾನಿಟೈಸರ್ ಬಳಸಿ ಬರುವಂತೆ ಆಡಳಿತ ಸಮಿತಿ ಸೂಚನೆ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.