ವಿಜಯಪುರ: ಜಿಲ್ಲೆಯಲ್ಲಿ ನೈಸರ್ಗಿಕ ಬಣ್ಣ ಉಪಯೋಗಿಸಿ ಹೋಳಿ ಹಬ್ಬ ಆಚರಣೆ ಮಾಡುವಂತೆ ವಿ.ಎಸ್.ದೇಶಪಾಂಡೆ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆಯ ವಿಶೇಷಚೇತನ ಮಕ್ಕಳು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಹೋಳಿ ಹಬ್ಬಕ್ಕೆ ಕೆಮಿಕಲ್ ಬಣ್ಣ ಬಳಸುವುದರಿಂದ ಅನೇಕ ಚರ್ಮ ರೋಗಗಳು ಉಂಟಾಗುತ್ತವೆ. ಅಲ್ಲದೇ ಇದರಿಂದ ಪ್ರಾಣಿ ಸಂಕುಲಕ್ಕೂ ಪರಿಣಾಮವನ್ನುಂಟು ಮಾಡುತ್ತದೆ. ಇನ್ನು, ಹೋಳಿ ಹಬ್ಬಕ್ಕೆ ಕಾಮನ ದಹನ ಮಾಡುವುದು ಸಂಪ್ರದಾಯ. ಆದರೆ, ಕಾಮನ ದಹನಕ್ಕೆ ಮಾಡುವಾಗ ಟಯರ್‌ಗಳು ಹಾಗೂ ಪ್ಲಾಸ್ಟಿಕ್ ಬಳಸುವ ಕಾರಣ ಅದು ವಾಯುಮಾಲಿನ್ಯಕ್ಕೆ ಕಾರಣವಾಗುತ್ತದೆ.
ಹೀಗಾಗಿ ಸಾಂಪ್ರದಾಯಿಕವಾಗಿ ಹೋಳಿ ಹಬ್ಬಕ್ಕೆ ಅವಕಾಶ ನೀಡುವಂತೆ ವಿ.ಎಸ್.ದೇಶಪಾಂಡೆ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆಯ ವಿಶೇಷಚೇತನ ಮಕ್ಕಳು, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ್ರು.