ವಿಜಯಪುರ: ಭೀಮಾ ತೀರದ ನಟೋರಿಯಸ್ ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ ಗುಂಡಿನ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿಯ ಕನ್ನಾಳ ಕ್ರಾಸ್ ಬಳಿ ದಾಳಿ ನಡೆದ ಸ್ಥಳಕ್ಕೆ ಎಸ್ಪಿ ಅನುಪಮ್ ಅಗರವಾಲ್ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಹಿರಿಯ ಅಧಿಕಾರಿಗಳ ತಂಡ ಸಹ ಎಸ್ಪಿ ಜೊತೆಗೆ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಇದ್ದ ವಾಹನಗಳು, ಸಮೀಪದಲ್ಲಿಯೇ ಬಿದ್ದ ಬೈಕ್ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಪರಿಶೀಲನೆ ನಡೆಸಿದರು.
ಮಧ್ಯಾಹ್ನದ ವೇಳೆ ಉತ್ತರ ವಲಯ ಐಜಿಪಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಭೈರಗೊಂಡ ಕಾರು ಚಾಲಕ ಲಕ್ಷ್ಮಣ ಹಾಗೂ ಆತನ ಸಹಚರ ಬಾಬುರಾಯ ಸಾವನ್ನಪ್ಪಿದ್ದಾರೆ. ಮಹಾದೇವ ಸಾಹುಕಾರ ಭೈರಗೊಂಡಗೆ ಮೂರು ಗುಂಡು ತಗುಲಿದ್ದು, ಅವರು ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.