ETV Bharat / state

ವಿಜಯಪುರ: ಕೊರೊನಾ ಸೋಂಕಿತ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ..?

ಚಾಲುಕ್ಯ ನಗರದ ಏಳು ಸದಸ್ಯರು ಇರುವ ಕುಟುಂಬದ ಹಿರಿಯ ಪುತ್ರನಿಗೆ ಕೊರೊನಾ ಲಕ್ಷ್ನಣಗಳು ಕಂಡು ಬಂದಿದೆ. ಈ ಕಾರಣದಿಂದ ಮನೆಯ ಮೊದಲು ಅಂತಸ್ತಿನ ಕೋಣೆಯಲ್ಲಿ ಪ್ರತ್ಯೇಕವಾಗಿ ಹೋಂ ಕ್ವಾರಂಟೈನ್ ಆಗಿದ್ದಾರೆ. ಆದರೆ, ಈ ವಿಷಯ ಗೊತ್ತಾಗುತ್ತಿದ್ದಂತೆ ಬಡಾವಣೆ ಜನರು ಇವರ ಮನೆಯತ್ತ ನೋಡುವ ದೃಷ್ಟಿ ಕೋನವೇ ಬದಲಾಗಿದೆ ಎಂದು ಆರೋಪಿಸಲಾಗಿದೆ.

Social exclusion
ವಿಜಯಪುರ: ಕೊರೊನಾ ಸೋಂಕಿತ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ..?
author img

By

Published : Aug 1, 2020, 12:22 PM IST

ವಿಜಯಪುರ: ಕೊರೊನಾ ಸೋಂಕಿತನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ ರೀತಿ ನೆರೆ ಹೊರೆಯವರು ನಡೆದು ಕೊಳ್ಳುತ್ತಿರುವ ಪ್ರಸಂಗ ಸೊಲ್ಲಾಪುರ ರಸ್ತೆಯ ಚಾಲುಕ್ಯ ನಗರದಲ್ಲಿ ನಡೆದಿದೆ.

ವಿಜಯಪುರ: ಕೊರೊನಾ ಸೋಂಕಿತ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ..?

ಚಾಲುಕ್ಯ ನಗರದ ಮನೆಯ ಸದಸ್ಯರು ಮಾನಸಿಕವಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ. ಏಳು ಸದಸ್ಯರು ಇರುವ ಈ ಕುಟುಂಬದ ಹಿರಿಯ ಪುತ್ರನಿಗೆ ಕೊರೊನಾ ಲಕ್ಷಣಗಳು ಕಂಡು ಬಂದ ಕಾರಣ ಮನೆಯ ಮೊದಲು ಅಂತಸ್ತಿನ ಕೋಣೆಯಲ್ಲಿ ಪ್ರತ್ಯೇಕವಾಗಿ ಹೋಂ ಕ್ವಾರಂಟೈನ್ ಆಗಿದ್ದಾರೆ. ಆದರೆ, ಈ ವಿಷಯ ಗೊತ್ತಾಗುತ್ತಿದ್ದಂತೆ ಬಡಾವಣೆ ಜನರು ಇವರ ಮನೆಯತ್ತ ನೋಡುವ ದೃಷ್ಟಿ ಕೋನವೇ ಬದಲಾಗಿದೆ. ಇವರ ಮನೆಗೆ ಬರುವ ಹಾಲು ಹಾಕುವವರು, ಮನೆಗೆಲಸದವರು, ಪೇಪರ್ ಹಾಕುವವರಿಗೆ ಬಡಾವಣೆಯ ಅಕ್ಕ ಪಕ್ಕದ ಜನತೆ ಅವರ ಮನೆ ಕಡೆ ಸುಳಿಯದಂತೆ ತಾಕೀತು ಮಾಡಿದ್ದಾರೆ ಎಂದು ಸೋಂಕಿತ ಕುಟುಂಬಸ್ಥರು ಆರೋಪಿಸಿದ್ದಾರೆ.

ಸಚಿವರು, ಡಿಸಿಗೆ ಟ್ವೀಟ್​ ಮಾಡಿ ದೂರು

ಆಕಸ್ಮಿಕವಾಗಿ ಅವರ ಮನೆಗೆ ಹೋದರೆ ನಮ್ಮ ಮನೆಗೆ ಬರಬೇಡ ಎಂದು ಸಲಹೆ ನೀಡಿದ್ದಾರಂತೆ. ಹೀಗಾಗಿ ಸೋಂಕಿತನ ಕುಟುಂಬದವರು ಬಡಾವಣೆಯಲ್ಲಿಯೇ ಸಾಮಾಜಿಕ ಬಹಿಷ್ಕಾರ ಹಾಕಿಕೊಂಡಿರುವಂತೆ ಜೀವನ ನಡೆಸುತ್ತಿದ್ದಾರೆ. ಈ ಘಟನೆಯಿಂದ ತೀವ್ರವಾಗಿ ನೊಂದಿರುವ ಕುಟುಂಬದ ಸದಸ್ಯರು ಪ್ರಧಾನಿ ಕಾರ್ಯಾಲಯ, ಮುಖ್ಯಮಂತ್ರಿ, ಆರೋಗ್ಯ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗೆ ಟ್ವೀಟ್ ಮೂಲಕ ದೂರು ನೀಡಿದ್ದಾರೆ. ತಮಗೆ ಬಡಾವಣೆಯಲ್ಲಿ ಮಾನಸಿಕ ಹಿಂಸೆಯಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಆರೋಗ್ಯ ಇಲಾಖೆಯಿಂದ ಔಷಧ ಪೂರೈಕೆ

ಸೋಂಕಿತನಿಗೆ ಮನೆಯ ಮೊದಲ ಮಹಡಿಯಲ್ಲಿ ಐಸೋಲೇಷನ್​ ಮಾಡಿರುವ ಕುಟುಂಬಸ್ಥರಿಗೆ ಆಸ್ಪತ್ರೆಯ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ಮಾತ್ರೆ ಸೇರಿದಂತೆ ಇತರ ಔಷಧ ನೀಡುತ್ತಿದ್ದಾರೆ. ಕುಟುಂಬದ ಇತರ 6 ಜನರು ಕೆಳ ಮಹಡಿಯಲ್ಲಿ ವಾಸವಾಗಿದ್ದಾರೆ. ಮನೆ ಸುತ್ತಮುತ್ತಲಿನ ಜನರ ವರ್ತನೆಗೆ ಕುಟುಂಬಸ್ಥರು ಕಂಗಾಲಾಗಿದ್ದಾರೆ. ವಿಜಯಪುರ ನಗರದ ಚಾಲುಕ್ಯ ನಗರ ವಿದ್ಯಾವಂತರು ಹೆಚ್ಚು ಇರುವ ಬಡಾವಣೆಯಾಗಿದ್ದರೂ ಸೋಂಕಿತನ ಕುಟುಂಬಸ್ಥರ ಜೊತೆ ಅವಿದ್ಯಾವಂತರಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಕೊರೊನಾ ಪಾಸಿಟಿವ್ ಪ್ರಕರಣಗಳು ಜಿಲ್ಲೆಯಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಇಷ್ಟೆಲ್ಲ ಗೊತ್ತಿದ್ದರೂ ಬಡಾವಣೆ ಜನ ನಮ್ಮ ನೋಡುವ ದೃಷ್ಟಿಯಿಂದ ಸಾಕಷ್ಟು ಮನನೊಂದಿದ್ದೇನೆ ಎಂದು ಕುಟುಂಬದ ಸದಸ್ಯರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಈ ವಿಷಯವನ್ನು ಜಿಲ್ಲಾಧಿಕಾರಿ ಸೇರಿ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರಿಗೆ ಹಾಗೂ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಟ್ವೀಟ್ ಮಾಡಿದ್ದು, ಕನಿಷ್ಠ ಸರ್ಕಾರವಾದರೂ ತಮ್ಮ ನೋವಿಗೆ ಸ್ಪಂದಿಸುತ್ತಾರೆ ಎನ್ನುವ ಆಶಾಭಾವನೆಯಲ್ಲಿದ್ದೇವೆ ಎಂದು ಕುಟುಂಬದ ಸದಸ್ಯರು ಹೇಳಿಕೊಂಡಿದ್ದಾರೆ.

ಕೊರೊನಾ ಸೋಂಕಿತರ ಕುಟುಂಬಕ್ಕೆ ಅಗತ್ಯ ಸೇವೆ ನಿರಾಕರಣೆ ಸರಿಯಲ್ಲ: ಇನ್ನು ಕೊರೊನಾ ಸೋಂಕಿತನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ಕೊರೊನಾ ಸೋಂಕಿತರ ಕುಟುಂಬಕ್ಕೆ ಅಗತ್ಯ ಸೇವೆ ನಿರಾಕರಣೆ ಸರಿಯಲ್ಲ ಎಂದರು. ಈ ಕುರಿತು ನಮಗೆ ಆ ಕುಟುಂಬದಿಂದ ದೂರು ಬಂದಿದೆ. ಮಹಾನಗರ ಪಾಲಿಕೆ ಆಯುಕ್ತರಿಗೆ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ ಎಂದು ಡಿಸಿ ಸ್ಪಷ್ಟನೆ ನೀಡಿದ್ದಾರೆ.

ಈ ಪ್ರಕರಣದಲ್ಲಿ ತಪ್ಪಿತಸ್ಥರು ಕಂಡು ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ. ರಾಜ್ಯಾದ್ಯಂತ ಬಹಳಷ್ಟು ಜನ ಹೋಂ ಐಸೋಲೇಷನ್​ನಲ್ಲಿದ್ದಾರೆ. ಅವರು ಸರ್ಕಾರದ ನಿಯಮಾವಳಿಯಂತೆಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಡಾವಣೆ ಜನ ಸಹ ತೊಂದರೆ ಮಾಡದೆ ಸಹಕರಿಸಬೇಕು. ಇಲ್ಲದಿದ್ದರೆ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ. ಆ ಪ್ರದೇಶದಲ್ಲಿ ಅರಿವು ಮೂಡಿಸುತ್ತೇವೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.