ETV Bharat / state

ರಾಮನಗರವನ್ನು ಮೀರಿಸುತ್ತಿದೆ ಗುಮ್ಮಟನಗರಿಯಲ್ಲಿನ ರೇಷ್ಮೆ ನೂಲು ಉತ್ಪಾದನಾ ಘಟಕ - ಈಟಿವಿ ಭಾರತ​ ಕನ್ನಡ

ವಿಜಯಪುರ ತಾಲೂಕಿನ ಕುಮಟಗಿ ಗ್ರಾಮದಲ್ಲಿ ನಾಲ್ವರು ಸ್ನೇಹಿತರು ಸೇರಿಕೊಂಡು ಸ್ವಯಂ ಚಾಲಿತ ರೇಷ್ಮೆ ನೂಲು ಬಿಚ್ಚಣಿಕೆ ಘಟಕ ಆರಂಭಿಸಿದ್ದು, ಇದರಿಂದಾಗಿ ವಿಜಯಪುರ, ಕಲಬುರ್ಗಿ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ರೇಷ್ಮೆ ಬೆಳೆಯುವ ರೈತರಿಗೆ ಅನುಕೂಲವಾಗಿದೆ.

silk-yarn-unit-in-kumatagi-vijaypur
ರಾಮನಗರವನ್ನು ಮೀರಿಸುತ್ತಿದೆ ಗುಮ್ಮಟನಗರಿಯಲ್ಲಿನ ರೇಷ್ಮೆ ನೂಲು ಉತ್ಪಾದನಾ ಘಟಕ
author img

By

Published : Nov 12, 2022, 5:02 PM IST

ವಿಜಯಪುರ: ಗುಮ್ಮಟನಗರಿ ದ್ರಾಕ್ಷಿ ಮತ್ತು ನಿಂಬೆ ಬೆಳೆಗೆ ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿದೆ. ಆದರೆ, ಇದೀಗ ರೇಷ್ಮೆ ನೂಲು ಉತ್ಪಾದನೆಯಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿದೆ. ನಾಲ್ವರು ಸ್ನೇಹಿತರು ಸೇರಿಕೊಂಡು ವಿಜಯಪುರ ತಾಲೂಕಿನ ಕುಮಟಗಿ ಗ್ರಾಮದಲ್ಲಿ ಸ್ವಯಂ ಚಾಲಿತ ರೇಷ್ಮೆ ನೂಲು ಬಿಚ್ಚಣಿಕೆ ಘಟಕ ಆರಂಭಿಸಿದ್ದು, ಇದರಿಂದಾಗಿ ವಿಜಯಪುರ, ಕಲಬುರ್ಗಿ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ರೇಷ್ಮೆ ಬೆಳೆಯುವ ರೈತರಿಗೆ ಅನುಕೂಲವಾಗಿದೆ.

ನಾಲ್ವರು ಸ್ನೇಹಿತರು ಸೇರಿ ಘಟಕ ಸ್ಥಾಪನೆ, 35 ಜನರಿಗೆ ಕೆಲಸ: ಈ ಘಟಕದಲ್ಲಿ ನಿತ್ಯ 700 ಕೆಜಿಗೂ ಅಧಿಕ ರೇಷ್ಮೆಯನ್ನೂ ನೂಲು ಮಾಡಿ ಮಾರಾಟ ಮಾಡಲಾಗುತ್ತಿದೆ. ಉದ್ಯಮಿಗಳಾದ ಪಿ.ಕೆ ಚಿಂಚಲಿ, ಸಿದ್ದಯ್ಯ ಮಠ, ಮಲ್ಲಿಕಾರ್ಜುನ ಬಿಜ್ಜರಗಿ ಹಾಗೂ ಸುರೇಶ ಪರಗೊಂಡ ಎಂಬವರು ಸೇರಿ ರೇಷ್ಮೆ ಇಲಾಖೆಯ ಸಬ್ಸಿಡಿ ಸದುಪಯೋಗ ಪಡಿಸಿಕೊಂಡು ನಾಲ್ಕು ಎಕರೆಯಲ್ಲಿ ಸ್ವಯಂ ಚಾಲಿತ ರೇಷ್ಮೆ ನೂಲು ಬಿಚ್ಚಣಿಕೆ ಘಟಕವನ್ನು ಆರಂಭಿಸಿದ್ದಾರೆ. ಅಲ್ಲದೇ ಇಲ್ಲಿನ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ.

ರಾಮನಗರವನ್ನು ಮೀರಿಸುತ್ತಿದೆ ಗುಮ್ಮಟನಗರಿಯಲ್ಲಿನ ರೇಷ್ಮೆ ನೂಲು ಉತ್ಪಾದನಾ ಘಟಕ

ಹಿಂದೆ ಜಿಲ್ಲೆ ಸೇರಿದಂತೆ ಪರರಾಜ್ಯದಲ್ಲಿ ಬೆಳೆಯುವ ರೇಷ್ಮೆಯನ್ನು ದಲ್ಲಾಳಿಗಳ ಮೂಲಕ ರಾಮನಗರಕ್ಕೆ ಕಳುಹಿಸಲಾಗುತ್ತಿತ್ತು. ದಲ್ಲಾಳಿ ಹಾಗೂ ಸಾಗಾತ ವೆಚ್ಚದಿಂದ ಲಾಭ ಕಡಿಮೆಯಾಗುತ್ತಿತ್ತು. ಇದರಿಂದಾಗಿ ರೈತರು ರೇಷ್ಮೆ ಕೃಷಿ ಕೈ ಬಿಟ್ಟಿದ್ದರು. ಈಗ ಈ ಘಟಕ ಆರಂಭಗೊಂಡ ಮೇಲೆ ಮತ್ತೆ ಈ ಭಾಗದಲ್ಲಿ ರೇಷ್ಮೆ ಬೆಳೆಯಲು ರೈತರು ಮುಂದಾಗಿದ್ದಾರೆ.

700 ಕೆ.ಜಿಗಿಂತ ಹೆಚ್ಚು ರೇಷ್ಮೆಗಳಿಂದ ದಾರ ಉತ್ಪತ್ತಿ: ಇನ್ನು ರಾಮನಗರದಲ್ಲಿನ ಬೆಲೆಯಂತೆ ಪ್ರತಿ ಕೆಜಿ ರೇಷ್ಮೆಗೆ 700 ರೂವನ್ನು ರೈತರಿಗೆ ನೀಡಲಾತ್ತಿದ್ದು, ಇದರಿಂದ ರೈತರು ಸಂತೋಷಗೊಂಡಿದ್ದಾರೆ. ನಿತ್ಯ 700-750 ಕೆಜಿ ರೇಷ್ಮೆ ಘಟಕಕ್ಕೆ ಬರುತ್ತಿದೆ. ಸದ್ಯ ರೇಷ್ಮೆ ಘಟನಕದಿಂದಾಗಿ ರೈತರಿಗೆ ಮೂರು ಪಟ್ಟು ಲಾಭ ಹೆಚ್ಚಾಗಿದ್ದು, ಇದು ಸಹಜವಾಗಿ ರೇಷ್ಮೆ ಬೆಳೆಗಾರರಲ್ಲಿ ಮಂದಹಾಸವನ್ನು ಮೂಡಿದೆ.

ರೇಷ್ಮೆ ತಯಾರಿಕೆ ಹೇಗೆ ?: ಈ ಘಟಕದಲ್ಲಿ ಸ್ವಯಂಚಾಲಿತ ರೇಷ್ಮೆ ನೂಲು ತಯಾರಿಸುವ ಯಂತ್ರವನ್ನು ಅಳವಡಿಸಲಾಗಿದೆ. ರೈತರ ಜಮೀನಿನಿಂದ ಬರುವ ರೇಷ್ಮೆ ಗೂಡುಗಳನ್ನು ಮೊದಲು ವಿಂಗಡಿಸಿ ಸ್ವಚ್ಚಗೊಳಿಸಲಾಗುತ್ತದೆ. ನಂತರ ಒಣಗಿಸಿ ಎಆರ್​ಎಂ ಯಂತ್ರದ ಮೂಲಕ ರಿಲೀಂಗ್ ಮಾಡಿದ ಮೇಲೆ ಬರುವ ಸಿಲ್ಕ್ (ನೂಲು)ನ್ನು 5 ಕೆಜಿ ರೇಷ್ಮೆ ನೂಲಿನಂತೆ ಪ್ಯಾಕಿಂಗ್ ಮಾಡಲಾಗುತ್ತದೆ. ಬಳಿಕ ಮಾರಾಟ ಮಾಡಲಾಗುತ್ತದೆ.

ಸ್ವಯಂ ಚಾಲಿತ ರೇಷ್ಮೆ ನೂಲು ಬಿಚ್ಚಣಿಕೆ ಘಟಕ ಇರುವ ಕಾರಣ ಹೆಚ್ಚು ಕೆಲಸಗಾರರ ಅವಶ್ಯಕತೆಯೂ ಇಲ್ಲವಾಗಿದೆ. ನಿತ್ಯ 700 ಕೆಜಿಗಿಂತ ಹೆಚ್ಚು ರೇಷ್ಮೆಯನ್ನು ನೂಲು ಮಾಡಲಾಗುತ್ತಿದ್ದು, 35 ರಿಂದ 40 ಜನ ಮಾತ್ರ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನೂಲು ತಯಾರಿಸುವ ಕೆಲಸ ನಡೆಯುತ್ತದೆ. ಇದು ಕೆಲಸಗಾರರಿಗೂ ಅನುಕೂಲವಾಗಿದೆ.

ರೇಷ್ಮೆ ಬೆಳೆಗಾರರಿಗೆ ಅನುಕೂಲ : ಗ್ರಾಮೀಣ ಪ್ರದೇಶವಾದ ಕಾರಣ ಕುಮಟಗಿ ಜನರು ಮೊದಲು ಉದ್ಯೋಗ ಅರಸಿ ವಿಜಯಪುರ, ಇಲ್ಲವೇ ದೂರದ ಮಹಾರಾಷ್ಟ್ರಕ್ಕೆ ಹೋಗಬೇಕಾಗಿತ್ತು. ಇಲ್ಲವೇ ಗ್ರಾಮದ ಸಿರಿವಂತರ ಹೊಲದಲ್ಲಿ ದುಡಿಯಬೇಕಾಗಿತ್ತು. ಈಗ ತಮ್ಮ ಗ್ರಾಮದಲ್ಲಿಯೇ ಸ್ವಯಂಚಾಲಿತ ರೇಷ್ಮೆ ನೂಲು ಬಿಚ್ಚಣಿಕೆ ಘಟಕ ಸ್ಥಾಪನೆಯಾಗಿರುವುದು ಅವರಿಗೂ ಅನುಕೂಲವಾಗಿದೆ.

ವಿಜಯಪುರ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಕಲ್ಯಾಣ ಕರ್ನಾಟಕ ಜಿಲ್ಲೆ, ಮಹಾರಾಷ್ಟ್ರ ರಾಜ್ಯದಲ್ಲಿ ಇತ್ತೀಚಿಗೆ ಹೆಚ್ಚು ರೇಷ್ಮೆ ಬೆಳೆಯನ್ನು ಬೆಳೆಯಲಾಗುತ್ತಿದ್ದು, ರೈತರಿಗೆ ಅನುಕೂಲವಾಗಿದೆ.

ಇದನ್ನೂ ಓದಿ :ಕೆಳದಿ ಅರಸರು ನಿರ್ಮಿಸಿದ ಸುಂದರ ಚಂಪಕ ಸರಸುಗೆ ಬೇಕಿದೆ ಇನ್ನಷ್ಟು ಕಾಯಕಲ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.