ETV Bharat / state

'ಬಿಜೆಪಿ ತೋರಿಸಲು ಏನೂ ಮಾಡಿಲ್ಲ.. ಅದಕ್ಕೆಂದೇ ತಾಜ್‌ಮಹಲ್‌, ಸಬರಮತಿ ಆಶ್ರಮ ತೋರಿಸಿದ್ದಾರೆ..'

ಟ್ರಂಪ್ ಭಾರತ ಪ್ರವಾಸ ಮತ್ತು ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಕುರಿತಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಅಮೆರಿಕದೊಂದಿಗೆ ಯಾವುದೇ ರೀತಿಯ ಹಾಲೋತ್ಪನ್ನಗಳ ಒಪ್ಪಂದ ಮಾಡಬಾರದು ಎಂದು ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.

siddaramaiah-reaction-on-namaste-trump
ಮಾಜಿ ಸಿಎಂ ಸಿದ್ದರಾಮಯ್ಯ
author img

By

Published : Feb 25, 2020, 12:40 PM IST

ವಿಜಯಪುರ: ದೇಶದ ರೈತರಿಗೆ ತೊಂದರೆಯಾಗುವ ಯಾವುದೇ ಒಪ್ಪಂದವನ್ನು ಕೂಡ ಅಮೆರಿಕಾದೊಂದಿಗೆ ಮಾಡಬಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

'ನಮಸ್ತೆ ಟ್ರಂಪ್' ಕುರಿತು ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಹಾಲೋತ್ಪನ್ನ ಒಪ್ಪಂದದಿಂದ ನಮ್ಮ ರೈತರಿಗೆ ತೊಂದರೆಯಾಗುತ್ತೆ. ಈ ಒಪ್ಪಂದ ಯಾವುದೇ ಕಾರಣಕ್ಕುೂ ಮೋದಿ ಮಾಡಬಾರದು ಎಂದರು. ದೆಹಲಿಯಲ್ಲಿ ನಿನ್ನೆ ನಡೆದ ಹಿಂಸಾಚಾರ, ಸಾವು ಪ್ರಕರಣ ಪ್ರಸ್ತಾಪಿಸಿದ ಅವರು, ಅಲ್ಲಿನ ಆಡಳಿತ ಇದರ ಬಗ್ಗೆ ಕ್ರಮಕೈಗೊಳ್ಳಬೇಕು. ದೆಹಲಿ ಪೊಲೀಸರು ಅಮಿತ್ ಶಾ ಕೈಯಲ್ಲಿದ್ದಾರೆ. ಟ್ರಂಪ್ ಬಂದರೇನಂತೆ ಅಮಿತ್ ಶಾ ಏನು ಮಾಡುತ್ತಿದ್ದಾರೆ ಎಂದ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಟ್ರಂಪ್ ಭಾರತ ಪ್ರವಾಸ ಕುರಿತಂತೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ..

ಇದೇ ವೇಳೆ ಮಹದಾಯಿ ವಿಚಾರವಾಗಿ ಮಾತನಾಡಿದ ಅವರು, ಮಹಾದಾಯಿ ನೋಟಿಫೀಕೇಶನ್ ಆಗಬೇಕು. ಕೇಂದ್ರದ ಮೇಲೆ ಯಡಿಯೂರಪ್ಪ ಹಾಗೂ ರಾಜ್ಯದ ಸಂಸದರು ಒತ್ತಡ ತರಬೇಕು ಎಂದರು. ಕೆಪಿಸಿಸಿ ಅಧ್ಯಕ್ಷ ಅಧ್ಯಕ್ಷ ಸ್ಥಾನಕ್ಕೆ ಸದ್ಯದಲ್ಲೇ ನೇಮಕವಾಗಲಿದೆ. ಉತ್ತರ ಕರ್ನಾಟಕಕ್ಕೆ ನೀಡಬೇಕೋ ಅಥವಾ ಪ್ರಾದೇಶಿಕತೆ, ಜಾತಿ, ಅರ್ಹತೆ ಆಧರಿಸಿ ನೀಡಬೇಕೋ ಅಂತಾ ನಿರ್ಧಾರ ಮಾಡಬೇಕು ಎಂದರು.

ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂಬ ಬಿಜೆಪಿ ರಾಜಾಧ್ಯಕ್ಷ ನಳೀನ್‌ಕುಮಾರ ಕಟೀಲ್ ಹೇಳಿಕೆಗೆ ನಸುನಗುತ್ತಲೇ, ಕಟಿಲ್ ಅವರಿಗೆ ರಾಜಕೀಯ ಜ್ಞಾನವಿಲ್ಲ. ಅವರನ್ನು ಹೇಗೆ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೋ ಗೊತ್ತಿಲ್ಲ ಎಂದರು. ಬಿಜೆಪಿ ಶಾಸಕರಲ್ಲಿ ಅಸಮಾಧಾನ ಇರುವುದು ನಿಜ. ಆದರೆ, ಯಾರೂ ನನ್ನ ಜೊತೆ ಮಾತನಾಡಿಲ್ಲ. 32 ಬಿಜೆಪಿ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎನ್ನುವ ಸಿಎಂ ಇಬ್ರಾಹಿಂ ಅವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿ, ಆ ವಿಚಾರ ನಮ್ಮಲ್ಲಿ ಚರ್ಚೆ ಆಗಿಲ್ಲ, ಅದನ್ನ ಅವರಿಗೇ ಕೇಳಿ ಎಂದರು ಸಿದ್ದರಾಮಯ್ಯ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.