ETV Bharat / state

'ಈ ಸರ್ಕಾರ ಏನೂ ಮಾಡಲ್ಲ, ನಮ್ಮ ಸರ್ಕಾರ ಬಂದಾಗ ಹೇಳಯ್ಯಾ': ಮೇಟಿ ಮೇಲೆ ಸಿದ್ದರಾಮಯ್ಯ ಗರಂ - Siddaramaiah on H Y Meti

ಸಿದ್ಧರಾಮಯ್ಯ ಅವರು ನಿನ್ನೆ ಆಲಮಟ್ಟಿಯಲ್ಲಿ ವಾಸ್ತವ್ಯ ಹೂಡಿದ್ದರು. ಇಂದು ಬಾದಾಮಿಗೆ ಹೊರಡುವ ವೇಳೆ ಅವರನ್ನು ನೋಡಲು ಕಾರ್ಯಕರ್ತರು ಮುಗಿಬಿದ್ದರು.

Siddaramaiah
ಸಿದ್ದರಾಮಯ್ಯ
author img

By

Published : Jul 15, 2022, 2:20 PM IST

ವಿಜಯಪುರ: ರಸ್ತೆ ವಿಚಾರವಾಗಿ ಮನವಿ ಸಲ್ಲಿಸಲು ಗ್ರಾಮಸ್ಥರೊಂದಿಗೆ ಮಾಜಿ ಸಚಿವ ಹೆಚ್.ವೈ.ಮೇಟಿ ಆಗಮಿಸಿದ್ದಾಗ ಅವರ ಮೇಲೆ ಸಿದ್ದರಾಮಯ್ಯ ಗರಂ ಆದರು. ಈ ಸರ್ಕಾರ ಏನೂ ಮಾಡಲ್ಲ, ನಮ್ಮ ಸರ್ಕಾರ ಬಂದಾಗ ಹೇಳಯ್ಯ ಎಂದು ಗದರಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ನಿನ್ನೆ ಆಲಮಟ್ಟಿಯಲ್ಲಿ ವಾಸ್ತವ್ಯ ಹೂಡಿದ್ದರು. ವಿಜಯಪುರದ ಕೆಲ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ಇಂದು ಸ್ವಕ್ಷೇತ್ರ ಬಾದಾಮಿಯಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ರಸ್ತೆ ಮಾರ್ಗವಾಗಿ ಆಲಮಟ್ಟಿಯಿಂದ ತೆರಳಿದರು.

ಇದನ್ನೂ ಓದಿ: 'ನಮಗೆ ರೊಕ್ಕ ಬ್ಯಾಡ್ರಿ, ನ್ಯಾಯ ಬೇಕು': ಸಿದ್ದರಾಮಯ್ಯರ ವಾಹನದತ್ತ ಪರಿಹಾರದ ಹಣ ಎಸೆದು ಮಹಿಳೆಯ ಆಕ್ರೋಶ

ಬಾದಾಮಿಗೆ ತೆರಳಲು ಕಾರು ಹತ್ತುವಾಗ ಮಾಧ್ಯಮದವರ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಉತ್ತರಿಸಲಿಲ್ಲ. ಪ್ರತಿಪಕ್ಷ ನಾಯಕನನ್ನು ನೋಡಲು ಹಾಗೂ ಸೆಲ್ಫಿ ತೆಗೆದುಕೊಳ್ಳಲು ಕಾರ್ಯಕರ್ತರು ಮುಗಿಬಿದ್ದರು. ಸಿದ್ದರಾಮಯ್ಯ ಪರ ಘೋಷಣೆಗಳು ಜೋರಾಗಿದ್ದವು. ಹೂವಿನ ಹಾರ ಹಾಕಲು ಮುಂದಾದಾಗ ಅದರಲ್ಲಿ ಹುಳು ಇರುತ್ತೆ ಹಾಕಬೇಡಿ ಎಂದು ನಿರಾಕರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.