ETV Bharat / state

ಭೈರಗೊಂಡ ಸಾಹುಕಾರ ಮೇಲೆ‌ ಗುಂಡಿನ ದಾಳಿ ಪ್ರಕರಣ: ತನಿಖೆ ವೇಳೆ ಹೊರಬಿತ್ತು ಸ್ಫೋಟಕ ಮಾಹಿತಿ! - ಮಹಾದೇವ ಸಾಹುಕಾರ ಭೈರಗೊಂಡ

ಭೀಮಾ ತೀರದ ನಟೋರಿಯಸ್​ ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ‌ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ರೋಚಕ ಮಾಹಿತಿಗಳು ತನಿಖೆ ವೇಳೆ ಹೊರಬಂದಿವೆ ಎನ್ನಲಾಗ್ತಿದೆ. ಮಹಾದೇವ ಸಾಹುಕಾರ ಭೈರಗೊಂಡ ಹತ್ಯೆ ನಡೆಸಿ ರಾತ್ರೋರಾತ್ರಿ ಭೀಮಾತೀರದಲ್ಲಿ ತಮ್ಮ ಹವಾ ಸೃಷ್ಟಿಸಬೇಕು ಎನ್ನುವ ಖಯಾಲಿಗೆ ಬಿದ್ದು ಯುವಕರು ಭೈರಗೊಂಡ ಹತ್ಯೆಗೆ ಸ್ಕೆಚ್​​​ ಹಾಕಿದ್ದರು ಎನ್ನಲಾಗ್ತಿದೆ.

shootout case of vijayapura: some information came out during the investigation?
ಭೈರಗೊಂಡ ಸಾಹುಕಾರ ಮೇಲಿನ‌ ಗುಂಡಿನ ದಾಳಿ ಪ್ರಕರಣ: ತನಿಖೆ ವೇಳೆ ಹೊರಬಿತ್ತು ಸ್ಫೋಟಕ ಮಾಹಿತಿ!
author img

By

Published : Nov 6, 2020, 10:28 AM IST

Updated : Nov 6, 2020, 10:41 AM IST

ವಿಜಯಪುರ: ಭೀಮಾತೀರದ ರಕ್ತಸಿಕ್ತ ಇತಿಹಾಸದ ಭಾಗವಾಗಲು 20-23 ವಯಸ್ಸಿನ ಯುವಕರು ಹವಣಿಸುತ್ತಿದ್ದಾರೆ ಎನ್ನುವ ಶಾಕಿಂಗ್ ಮಾಹಿತಿ ಪೊಲೀಸ್ ತನಿಖೆಯಿಂದ ಹೊರಬಿದ್ದಿದೆ.

ಹೌದು, ಹಣ ಹಾಗೂ ಹೆಸರು ಗಳಿಸಲು, ಅಪರಾಧ ಕೃತ್ಯದಲ್ಲಿ ತೊಡಗಿಕೊಳ್ಳಲು ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ಇವರಿಗೆಲ್ಲ ಸ್ಫೂರ್ತಿ ಎನ್ನುವ ಮಾಹಿತಿ ಸಹ ಲಭ್ಯವಾಗಿದೆ. ಮಹಾದೇವ ಸಾಹುಕಾರ ಭೈರಗೊಂಡ ಹತ್ಯೆ ನಡೆಸಿ ರಾತ್ರೋರಾತ್ರಿ ಭೀಮಾತೀರದಲ್ಲಿ ತಮ್ಮ ಹವಾ ಸೃಷ್ಟಿಸಬೇಕೆನ್ನುವ ಖಯಾಲಿಗೆ ಬಿದ್ದು ಯುವಕರು ಭೈರಗೊಂಡ ಹತ್ಯೆಗೆ ಸ್ಕೆಚ್​​​ ಹಾಕಿರುವುದು ತನಿಖೆಯಿಂದ ತಿಳಿದುಬಂದಿದೆ.

ತನಿಖೆಯ ಮಾಹಿತಿ ನೀಡಿದ ರಾಘವೇಂದ್ರ ಸುಹಾಸ್​​

ತನಿಖೆ ವೇಳೆ ಬಯಲಾದ ವಿಚಾರ:

ಮೊನ್ನೆ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ನಡೆದ ಶೂಟೌಟ್ ಇದರ ಮೊದಲ ಭಾಗವಾಗಿತ್ತು. ಇನ್ನೂ ಸರಿಯಾಗಿ ಬಂದೂಕು ಹಿಡಿಯಲು ಬಾರದ ಯುವಕರು ಈ ಪ್ರಕರಣದಲ್ಲಿ ಭಾಗಿಯಾಗಿದ್ದರು. ಅಲ್ಲದೇ, ಡಿಎಂಸಿ ಎಂಬ ತಂಡವನ್ನು ಕಟ್ಟಿಕೊಂಡಿದ್ದರು. ಇವರಿಗೆ ಮಡಿವಾಳಯ್ಯ ಹಿರೇಮಠ ಎಂಬಾತ ಲೀಡರ್ ಎನ್ನಲಾಗ್ತಿದೆ. ಧರ್ಮರಾಜ್ ಚಡಚಣ ಎನ್​​ಕೌಂಟರ್​ಗೆ ಪ್ರತೀಕಾರವಾಗಿ ಮಹಾದೇವ ಸಾಹುಕಾರ ಭೈರಗೊಂಡನನ್ನು ಮುಗಿಸಿ ಭೀಮಾತೀರದಲ್ಲಿ ತಾವು ಮೆರೆಯಬಹುದು ಎಂದು ಮಡಿವಾಳಯ್ಯ ಇವರ ತಲೆಗೆ ತುಂಬಿರುವ ಮಾಹಿತಿ ಪೊಲೀಸ್ ತನಿಖೆ ವೇಳೆ ಬಯಲಾಗಿದೆ ಎಂದು ಹೇಳಲಾಗ್ತಿದೆ.

ಕೃತ್ಯ ಎಸಗಲು ಸಿದ್ಧತೆ:

ಕೃತ್ಯ ಎಸಗುವ ಮೊದಲ ಒಂದು ವಾರವಷ್ಟೇ ಕೆಲ ಯುವಕರಿಗೆ ಬಂದೂಕು ತರಬೇತಿ ನೀಡಲಾಗಿತ್ತು. ಪುಣೆ, ವಿಜಯಪುರ, ಉಮರಾಣಿ ಸೇರಿದಂತೆ ವಿವಿಧ ಕಡೆಯಲ್ಲಿ ವಾಸವಿದ್ದ, ಕಾಲೇಜು ಬಿಟ್ಟಿದ್ದ ಯುವಕರನ್ನು ಹುರಿದುಂಬಿಸಿ ಈ ಕೃತ್ಯಕ್ಕೆ ಬಳಸಿಕೊಳ್ಳಲಾಗಿತ್ತು. ಮಹಾದೇವ ಸಾಹುಕಾರ ಭೈರಗೊಂಡ ಹತ್ಯೆಗೆ ಜನವರಿಯಿಂದಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಆತನ ಚಲನವಲನ ಗಮನಿಸಿದ್ದ ಯುವಕರು 17 ಕಡೆಗಳಲ್ಲಿ ತಂಡ ತಂಡವಾಗಿ ಮಹಾದೇವ ಸಾಹುಕಾರ ಹತ್ಯೆಗೆ ಸಮಯ ನಿಗದಿಪಡಿಸಿದ್ದರು ಎನ್ನಲಾಗ್ತಿದೆ.

ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ಗುಂಡಿನ ದಾಳಿ:

ಕನ್ನಾಳ ಕ್ರಾಸ್ ಬಳಿ ಟಿಪ್ಪರ್​​ ಚಲಾಯಿಸುತ್ತಿದ್ದ ನಾಗಪ್ಪ ಎನ್ನುವಾತ ಮಹಾದೇವ ಸಾಹುಕಾರ ಭೈರಗೊಂಡರ ಕಾರಿಗೆ ಗುದ್ದಿ ಕಾರು ನಿಲ್ಲಿಸಿದ್ದಾನೆ. ಈ ವೇಳೆ 10-15 ಯುವಕರು ಏಕಾಏಕಿ ದಾಳಿ ನಡೆಸಿದ್ದಾರೆ. ಆದರೆ ಸಾಹುಕಾರನ ಕಾರು ಚಾಲಕ ಮತ್ತು ಅಂಗರಕ್ಷಕರು ಬಚಾವ್ ಮಾಡಲು ಅಡ್ಡ ಬಂದ ಕಾರಣ ಭೈರಗೊಂಡರ ಪ್ರಾಣ ಉಳಿದಿದೆ.

ಮಹಾದೇವ ಸಾಹುಕಾರ ಮೇಲಿನ‌ ಗುಂಡಿನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿರುವ ವಿಜಯಾ ತಾಳಿಕೋಟೆ, ಸಾಹುಕಾರ ಚಲನವಲನದ ಮೇಲೆ ನಿಗಾ ಇಟ್ಟು ನವೆಂಬರ್ 2ರಂದು ಅವರು ವಿಜಯಪುರ ಮೂಲಕ ಕೆರೂರಿಗೆ ಹೋಗುತ್ತಿರುವ ಮಾಹಿತಿ ನೀಡಿದ್ದ. ಇದೇ ಆಧಾರದ ಮೇಲೆ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ಗುಂಡಿನ ದಾಳಿ ನಡೆದಿದೆ ಎಂಬುದು ಪೊಲೀಸರಿಗೆ ತಿಳಿದಿದೆ.

ಹಿನ್ನೆಲೆ:

ಕಳೆದ ವರ್ಷ ಅಕ್ಟೋಬರ್ 30ರಂದು ಭೀಮಾತೀರದ ಹಂತಕ ಧರ್ಮರಾಜ್ ಚಡಚಣನನ್ನು ಪೊಲೀಸರು ನಕಲಿ ಎನ್​​ಕೌಂಟರ್​​ ಮಾಡಿರುವ ಆರೋಪ ಪ್ರಕರಣ ವಿಚಾರಣೆ ಹಂತದಲ್ಲಿದೆ. ಅದೇ ದಿನ ಆತನ ಸಹೋದರ ಗಂಗಾಧರ ಚಡಚಣ ನಾಪತ್ತೆಯಾಗಿದ್ದನು. ಈ ಕೃತ್ಯದ ಹಿಂದೆ ಮಹಾದೇವ ಸಾಹುಕಾರ ಭೈರಗೊಂಡನ ಕೈವಾಡವಿರುವುದು ಪೊಲೀಸ್ ತನಿಖೆಯಿಂದ ದೃಢಪಟ್ಟಿತ್ತು. ಧರ್ಮರಾಜ್​ನ ಹತ್ಯೆಗೆ ಪ್ರತೀಕಾರವಾಗಿ ಮಹಾದೇವ ಭೈರಗೊಂಡ ಹತ್ಯೆಗೆ ಯುವಕರ ತಂಡ ಕಟ್ಟಿಕೊಂಡು ಅದಕ್ಕೆ ಡಿಎಂಸಿ ಎಂದು ಹೆಸರಿಟ್ಟು ಈ ಕೃತ್ಯ ನಡೆಸಲು ಮಡಿವಾಳಯ್ಯ ಹಿರೇಮಠ ಎನ್ನುವ ವ್ಯಕ್ತಿ ಸಂಚು ರೂಪಿಸಿರುವ ಮಾಹಿತಿ ಪೊಲೀಸ್ ತನಿಖೆಯಿಂದ ಬಯಲಾಗಿದೆ ಎಂದು ಹೇಳಲಾಗ್ತಿದೆ. ಕೃತ್ಯ ನಡೆಸಿರುವ ಯುವಕರು ಸದ್ಯ ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

Last Updated : Nov 6, 2020, 10:41 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.