ETV Bharat / state

ಸಿನಿ ಸ್ಟೈಲ್‌ನಲ್ಲಿ ಭೈರಗೊಂಡ ಸಾಹುಕಾರನ ಹತ್ಯೆಗೆ ಯತ್ನ.. 'ಭೀಮಾತೀರದ ರಕ್ತ ಚರಿತ್ರೆ'

author img

By

Published : Nov 2, 2020, 7:48 PM IST

ಭೀಮಾತೀರದಲ್ಲಿ ಮತ್ತೆ ರಕ್ತ ಹರಿದಿದೆ. ವಿಜಯಪುರದಿಂದ ಕೆರೂರಗೆ ಹೊರಟಿದ್ದ ರೌಡಿಶೀಟರ್​​ ಮಹಾದೇವ ಸಾಹುಕಾರ ಭೈರಗೊಂಡನ ಮೇಲೆ ತಾಲೂಕಿನ ಅರಕೇರಿ ತಾಂಡಾ ಕನ್ನಾಳ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ದುಷ್ಕರ್ಮಿಗಳಿಂದ ಗುಂಡಿನ ದಾಳಿ ನಡೆದಿದೆ. ಘಟನೆ ದ್ವೇಷದ ರೂಪದ ಪ್ರತೀಕಾರ ಎಂಬ ಮಾತು ಜಿಲ್ಲೆಯಲ್ಲಿ ಕೇಳಿ ಬರುತ್ತಿವೆ..

shoot-out-on-mahadeva-sahukar-bhairagonda-in-vijayapura
ಭೈರಗೊಂಡ ಸಾಹುಕಾರನ ಮೇಲೆ ಗುಂಡಿನ ದಾಳಿ

ವಿಜಯಪುರ: ಭೀಮಾತೀರದಲ್ಲಿ ಗುಂಡಿನ ಸದ್ದು ನಿಲ್ಲುವಂತೆ ಕಾಣುತ್ತಿಲ್ಲ. ತಾಲೂಕಿನ ಅರಕೇರಿ ತಾಂಡಾ ಕನ್ನಾಳ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ರೌಡಿಶೀಟರ್ ಮಹಾದೇವ ಸಾಹುಕಾರ ಭೈರಗೊಂಡ ಕೊಲೆ ಸ್ಕೆಚ್ ರಕ್ತ ಚರಿತ್ರೆಯ ಭಾಗದ ಸೃಷ್ಟಿಗೆ ಕಾರಣವಾದಂತಿದೆ.

ವಿಜಯಪುರಕ್ಕೆ ಬಂದು ವಾಪಸ್ ಚಡಚಣ ತಾಲೂಕಿನ ಕೆರೂರಗೆ ಹೊರಟಿದ್ದ ಮಹಾದೇವ ಸಾಹುಕಾರನ ಮೇಲೆ ದಾಳಿ ಮಾಡಲು ಸಿನಿಮೀಯ ರೀತಿಯಲ್ಲಿ ಯೋಜನೆ ರೂಪಿಸಿದ್ದ ದುಷ್ಕರ್ಮಿಗಳು ಮೊದಲಿಗೆ, ಟಿಪ್ಪರ್‌ನಿಂದ ಕಾರಿಗೆ ಡಿಕ್ಕಿ ಹೊಡೆಸಿದ್ದಾರೆ. ನಂತರ ತೊಗರಿ ಹೊಲದಲ್ಲಿ ಅಡಗಿ ಕುಳಿತಿದ್ದವರು ಮತ್ತು ಇನ್ನೊಂದು ಟಿಪ್ಪರ್ ಹಾಗೂ ಬೈಕ್ ಮೇಲೆ ಬಂದ ದುಷ್ಕರ್ಮಿಗಳು ಮಹಾದೇವ ಹಾಗೂ ಆತನ ಸಹಚರರ ಮೇಲೆ ಗುಂಡಿನ ದಾಳಿ ಮಾಡಿದ್ದರು.

ಇದನ್ನು ಓದಿ-ಗುಂಡಿನ ದಾಳಿ: ಮಹಾದೇವ ಸಾಹುಕಾರ ಸಹಚರನ ಸ್ಥಿತಿ ಚಿಂತಾಜನಕ?

ಈ ವೇಳೆ ಸಾಹುಕಾರನ ಸಹಚರರೂ ಕೂಡ ಪ್ರತಿದಾಳಿ ಮಾಡಿದ್ದಾರೆ. ಪರಸ್ಪರ ನಡೆದ ಗುಂಡಿನ ದಾಳಿಯಲ್ಲಿ ಮಹಾದೇವ ಸಾಕುಕಾರನ ಹೊಟ್ಟೆಗೆ ಎರಡು ಗುಂಡುಗಳು ತಗುಲಿವೆ. ಆತನ ಸಚಹರ ಬಾಬುರಾಯ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನೋರ್ವ ಕಾಶಿರಾಯ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು, ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭೈರಗೊಂಡ ಸಾಹುಕಾರನ ಮೇಲೆ ಗುಂಡಿನ ದಾಳಿ

ಕಳೆದ ಮೂರು ವರ್ಷಗಳ ಹಿಂದೆ ಧರ್ಮರಾಜ ಚಡಚಣ ಹಾಗೂ ಗಂಗಾಧರ ಚಡಚಣನ ಕೊಲೆ ಆರೋಪದಲ್ಲಿ ಮಹಾದೇವ ಸಾಹುಕಾರ ಹಾಗೂ ಪೊಲೀಸ್ ಅಧಿಕಾರಿಗಳು ಸೇರಿ 15 ಜನರು ಜೈಲುವಾಸ ಅನುಭವಿಸಿದ್ದರು. ಹೀಗಾಗಿ, ಈ ಮೊದಲೇ ಭೀಮಾತೀರದ ಭೈರಗೊಂಡ ಹಾಗೂ ಚಡಚಣ ಕುಟುಂಬಕ್ಕೆ ದ್ವೇಷ ಬೆಳದಿತ್ತು.

ಇದರಿಂದ ಚಡಚಣ ಕುಟುಂಬದವರೇ ಮಹಾದೇವ ಸಾಹುಕಾರನನ್ನು ಕೊಲ್ಲಲು ಯತ್ನಿಸಿದ್ದಾರೆ ಎಂದು ಭೈರಗೊಂಡ ಕುಟುಂಬದವರು ಆರೋಪಿಸಿದ್ದಾರೆ. ಒಂದೆಡೆ ನನ್ನ ಮಕ್ಕಳನ್ನು ಮಹಾದೇವ ಭೈರಗೊಂಡನೇ ಕೊಲ್ಲಿಸಿದ್ದಾನೆ ಎಂದು ಚಡಚಣ ಸಹೋದರರ ತಾಯಿ ವಿಮಲಾಬಾಯಿ ಆರೋಪಿಸುತ್ತಿದ್ದಾರೆ.

ಇಂದು ನಡೆದ ಘಟನೆ ನೇರವಾಗಿ ಚಡಚಣ ಕುಟುಂದತ್ತ ಬೆರಳು ತೋರಿಸುವಂತಾಗಿದೆ. ಇದೆಲ್ಲದರ ಕುರಿತು ತನಿಖೆ ಕೈಗೊಂಡಿರುವ ಪೊಲೀಸರು ಘಟನೆಗೆ ಕಾರಣರಾದವರ ಹುಡುಕಾಟ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.