ವಿಜಯಪುರ: ಕಳೆದ ನಾಲ್ಕು ದಿನಗಳಿಂದ ಭೀಮಾನದಿ ಪ್ರವಾಹದಿಂದ ತತ್ತರಿಸಿ ಹೋಗಿದ್ದ ಚಡಚಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಏಕಾಏಕಿ ಹಾಳಾದ ರಸ್ತೆಗಳಿಗೆ ತೇಪೆ ಹಚ್ಚುವ ಕಾರ್ಯ ಮಾಡುತ್ತಿದೆ.
ಚಡಚಣದಿಂದ ಹೊಳೆ ಉಮರಾಣಿಗೆ ಬರುವ ರಸ್ತೆಯಲ್ಲಿ ಇರುವ ಗುಂಡಿಗಳನ್ನು ಮುಚ್ಚಲು ದಿಢೀರ್ ಎಂದು ಕಾಮಗಾರಿ ಕೈಗೊಳ್ಳಲಾಗಿದೆ. ಜಿಲ್ಲಾಡಳಿತದ ಈ ಕೆಲಸ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಮನೆ - ಮಠ ಕಳೆದುಕೊಂಡು ನಿರಾಶ್ರಿತರಾದ ನಮಗೆ ಸೂರು ಕೊಡಿಸುವ ಬದಲು ಉಸ್ತುವಾರಿ ಸಚಿವರು ಆಗಮಿಸುವ ರಸ್ತೆ ರಿಪೇರಿಯೇ ನಿಮಗೆ ಮಹತ್ವದ್ದಾಗಿದೆಯಾ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.