ETV Bharat / state

ಲಾಲ್​ ಬಾಗ್​ ಮಾದರಿಯಲ್ಲೇ ಸಸ್ಯ ಸಂಗಮ‌ ಟ್ರೀ ಪಾರ್ಕ್ ನಿರ್ಮಿಸಲು ಸಿದ್ಧತೆ - ಸಸ್ಯ ಸಂಗಮ‌ ಟ್ರೀ ಪಾರ್ಕ್ ನಿರ್ಮಿಸಲು ಸಿದ್ಧತೆ

ಭೂತನಾಳ ಕೆರೆ ಪಕ್ಕದ ಆವರಣದಲ್ಲಿ ಲಾಲ್​ ಬಾಗ್​ ಮಾದರಿಯಲ್ಲೇ ಸಸ್ಯ ಸಂಗಮ‌ ಟ್ರೀ ಪಾರ್ಕ್ ನಿರ್ಮಿಸಲು ಸಿದ್ಧತೆ ನಡೆಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್​ ಅಧಿಕಾರಿಗಳಿಗೆ ಸೂಚಿಸಿದರು.

Setting up tree park similar to Lal Bagh in vijayapur
ವಿಜಯಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ
author img

By

Published : Mar 10, 2020, 2:01 AM IST

ವಿಜಯಪುರ: ಭೂತನಾಳ ಕೆರೆ ಪಕ್ಕದ ಆವರಣದಲ್ಲಿ ಲಾಲ್​ ಬಾಗ್​ ಮಾದರಿಯಲ್ಲೇ ಸಸ್ಯ ಸಂಗಮ‌ ಟ್ರೀ ಪಾರ್ಕ್ ನಿರ್ಮಿಸಲು ಸಿದ್ಧತೆ ನಡೆಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್​ ಅಧಿಕಾರಿಗಳಿಗೆ ಸೂಚಿಸಿದರು.

ವಿಜಯಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡ ಸಸ್ಯ ಸಂಗಮ ಟೀ ಪಾರ್ಕ್ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ವಿವಿಧ ಇಲಾಖೆ ಅಧಿಕಾರಿಗಳ ಜೊತೆಯಲ್ಲಿ ಜಿಲ್ಲಾಧಿಕಾರಿ ಸಭೆ ನಡೆಸಿ, ಲಾಲ್​ ಬಾಗ್, ಕಬ್ಬನ್ ಪಾರ್ಕ್​ನಂತೆ ಮಾದರಿ ಪಾರ್ಕ್ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು‌, ನಗರ ನಿವಾಸಿಗಳಿಗೆ ಹಾಗೂ ಪ್ರವಾಸಿಗರಿಗೆ ಅನುಕೂಲವಾಗುವ ರೀತಿಯಲ್ಲಿ ಪಾರ್ಕ್ ನಿರ್ಮಿಸಿಸುವುದರ ಜೊತೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಸಸ್ಯ ಸಂಗಮ ಟ್ರೀ ಪಾರ್ಕ್ ನಿರ್ಮಾಣಕ್ಕೆ ಬೇಕಾದ ವೆಚ್ಚಕ್ಕೆ ಯೋಜನೆ ಸಿದ್ದಪಡಿಸಲಾಗಿದೆ.‌ ಪಾರ್ಕ್ ಸಸ್ಯಶಾಸ್ತ್ರ ಅಧ್ಯಯನಕ್ಕೆ ವಿದ್ಯಾರ್ಥಿಗಳಿಗೆ ಪೂರಕವಾಗುವಂತಹ ಸಸ್ಯಗಳನ್ನ ನೆಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗೆ ಹೇಳಿದರು.

ಅಲ್ಲಿನ ವಾತಾವರಣ ಅನುಗುಣವಾಗಿ ಸಸಿಗಳ ನೆಡಬೇಕು. ಒಟ್ಟು 2.77 ಕೋಟಿ ವೆಚ್ಚದಲ್ಲಿ ಟ್ರೀ ಪಾರ್ಕ್ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಮಕ್ಕಳ ಆಟಿಕೆಗೆ ಬೇಕಾದ ವಸ್ತುಗಳನ್ನು ಪಾರ್ಕ್​ನಲ್ಲಿ ಅಳವಡಿಕೆ ಮಾಡಬೇಕಾಗಿದೆ. ಪಾರ್ಕ್​ನಲ್ಲಿ ಪಕ್ಷ ಸಂಕುಲ ಹೆಚ್ಚಾಗುತ್ತದೆ. ಇನ್ನೂ ಪಾರ್ಕ್ ನಿರ್ಮಾಣಕ್ಕೆ ಶೀಘ್ರವಾಗಿ ಟೆಂಡರ್ ಕರೆಯಲು ಉದ್ದೇಶಿಲಾಗಿದೆ ಎಂದು ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರು. ಸಭೆಯಲ್ಲಿ ತೋಟಗಾರಿಕೆ, ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಹಲವರು ಸಭೆಯಲ್ಲಿ ಭಾಗಿಯಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.