ETV Bharat / state

ಹುತಾತ್ಮ ಯೋಧರಿಗೆ ಮುದ್ದೇಬಿಹಾಳದಲ್ಲಿ ಶ್ರದ್ದಾಂಜಲಿ ಅರ್ಪಣೆ - ಇಂಡೋ- ಚೀನಾ ಗಡಿ ವಿವಾದ

ಯುವ ಕಾಂಗ್ರೆಸ್​, ಎನ್​​ಎಸ್​ಯುಐ ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ಚೀನಾ ಜೊತೆಗಿನ ಸಂಘರ್ಷದಲ್ಲಿ ಹುತಾತ್ಮರಾದ ಯೋಧರಿಗೆ ಮುದ್ದೇಬಿಹಾಳದಲ್ಲಿ ಶ್ರದ್ದಾಂಜಲಿ ಅರ್ಪಿಸಲಾಯಿತು.

Salutation for martyrs Solders in Muddebihal
ಹುತಾತ್ಮ ಯೋಧರಿಗೆ ಮುದ್ದೇಬಿಹಾಳದಲ್ಲಿ ಶ್ರದ್ದಾಂಜಲಿ ಅರ್ಪಣೆ
author img

By

Published : Jun 19, 2020, 1:12 PM IST

ಮುದ್ದೇಬಿಹಾಳದ : ನಟರು, ರಾಜಕಾರಣಿಗಳು ನಿಧನ ಹೊಂದಿದರೆ ತಕ್ಷಣ ಟ್ವೀಟ್ ಮಾಡುವ ಪ್ರಧಾನಿ ಮೋದಿ, ದೇಶದ ಸೈನಿಕರು ಹುತಾತ್ಮರಾದ ಎರಡು ದಿನಗಳವರೆಗೆ ಪ್ರತಿಕ್ರಿಯೆ ಕೊಡದೇ ಮೌನವಾಗಿದ್ದೇಕೆ ಎಂದು ಎನ್.ಎಸ್.ಯು.ಐ ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ ಪ್ರಶ್ನಿಸಿದರು.

ಪಟ್ಟಣದ ಅಂಬೇಡ್ಕರ್ ಸರ್ಕಲ್​ನಲ್ಲಿ ಯುವ ಕಾಂಗ್ರೆಸ್ ಹಾಗೂ ಎನ್​ಎಸ್​ಯುಐ ಸಂಘಟನೆಯಿಂದ ಚೀನಾ ಜೊತೆಗಿನ ಸಂಘರ್ಷದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪುರಸಭೆ ಮಾಜಿ ಸದಸ್ಯ ಎಚ್.ಬಿ.ಸಾಲಿಮನಿ ಮಾತನಾಡಿ, ಕೇಂದ್ರ ಸರ್ಕಾರ ಚೀನಾ ವಿರುದ್ಧ ತಕ್ಕ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ರಫೀಕ್ ಶಿರೋಳ, ಯೂಸುಫ್ ನಾಯ್ಕೋಡಿ, ಪುರಸಭೆ ಸದಸ್ಯ ರಿಯಾಝ್​ ಢವಳಗಿ, ಅಶೋಕ ಅಜಮನಿ, ಅನಿಲ್ ನಾಯಕ, ಸಮೀರ ದ್ರಾಕ್ಷಿ, ದಾವಲ್ ಗೂಳಸಂಗಿ ಇದ್ದರು.

ಹುತಾತ್ಮ ಯೋಧರಿಗೆ ಮುದ್ದೇಬಿಹಾಳದಲ್ಲಿ ಶ್ರದ್ದಾಂಜಲಿ ಅರ್ಪಣೆ

ಇನ್ನು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಭಾರತೀಯ ಯುವ ಘರ್ಜನೆ ಹಾಗೂ ವೀರ ಸಾವರ್ಕರ್​ ಸೇವಾ ಸಂಘದ ಸಹಯೋಗದಲ್ಲಿ ಸೈನಿಕ ಮೈದಾನದಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಜಲಿ ಸಲ್ಲಿಸಲಾಯಿತು. ಈ ವೇಳೆ, ಮಾತನಾಡಿದ ಮಂಡಲ ಬಿಜೆಪಿ ಅಧ್ಯಕ್ಷ ಪರಶುರಾಮ ಪವಾರ, ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಸ್ವದೇಶಿ ವಸ್ತುಗಳನ್ನು ಬಳಕೆ ಮಾಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯ ಬಸವರಾಜ ನಂದಿಕೇಶ್ವರಮಠ, ಸಂಘಟನೆ ಅಧ್ಯಕ್ಷ ಪುನೀತ್​ ಹಿಪ್ಪರಗಿ,ರೇವಣೆಪ್ಪ ಹರಿಜನ, ರಾಜು ಬಳ್ಳೊಳ್ಳಿ, ಚೇತನ ಮೋಟಗಿ ಇನ್ನಿತರರು ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.