ETV Bharat / state

ಗುಮ್ಮಟನಗರಿಯಲ್ಲಿ 'ರನ್ ವಿಜಯಪುರ ರನ್' ವೃಕ್ಷಥಾನ್ - etv bharat karnataka

ಶ್ರೀ ಸಿದ್ಧೇಶ್ವರ ಸ್ವಾಮೀಜಿಯ ಗೌರವಾರ್ಥವಾಗಿ ಹಾಗೂ ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆಗೆ ವೃಕ್ಷಥಾನ್ ಹೆರಿಟೇಜ್ ರನ್ ವಿಜಯಪುರದಲ್ಲಿ ನಡೆಯಿತು.

run-vijayapura-runvriksathon-held-for-green-environment-in-vijayapura
ಗುಮ್ಮಟ್ಟನಗರಿಯಲ್ಲಿ ಗಮನ ಸೆಳೆದ 'ರನ್ ವಿಜಯಪುರ ರನ್' ವೃಕ್ಷಥಾನ್
author img

By ETV Bharat Karnataka Team

Published : Dec 24, 2023, 8:20 PM IST

Updated : Dec 24, 2023, 9:28 PM IST

ಗುಮ್ಮಟನಗರಿಯಲ್ಲಿ ನಡೆದ ವೃಕ್ಷಥಾನ್ ಹೆರಿಟೇಜ್ ರನ್

ವಿಜಯಪುರ: ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಮತ್ತು ಶ್ರೀ ಸಿದ್ಧೇಶ್ವರ ಸ್ವಾಮೀಜಿಯ ಗೌರವಾರ್ಥ ವೃಕ್ಷಥಾನ್ ಹೆರಿಟೇಜ್ ರನ್ 'ರನ್ ವಿಜಯಪುರ ರನ್' ಇಂದು ಯಶಸ್ವಿಯಾಗಿ ನಡೆಯಿತು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಿಂದ ಗೋಳಗುಮ್ಮಟ ಮಾರ್ಗವಾಗಿ ಒಟ್ಟು 21 ಕಿಲೋ ಮೀಟರ್, 10 ಕಿ.ಮೀ, 5 ಕಿ.ಮೀ, 3.50 ಕಿ.ಮೀ ಮತ್ತು 800 ಮೀಟರ್ ವಿಭಾಗಗಳಲ್ಲಿ ವೃಕ್ಷಥಾನ್ ಹೆರಿಟೇಜ್ ಓಟಗಳು ನಡೆದವು. ಹಲವು ಗಣ್ಯರು ಪಾಲ್ಗೊಂಡು ಪರಿಸರ ಜಾಗೃತಿ ಮೂಡಿಸಿದರು.

ವಿಜಯಪುರದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸೇರಿದಂತೆ ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳು ಕುಟುಂಬ ಸಮೇತರಾಗಿ ವೃಕ್ಷಥಾನ್​ನಲ್ಲಿ ಪಾಲ್ಗೊಂಡರು. ನಗರದ ಸಾರ್ವಜನಿಕರು ಚಪ್ಪಾಳೆ ತಟ್ಟಿ, ರನ್ ರನ್ ಎಂದು ಮ್ಯಾರಥಾನ್ ಸ್ಪರ್ಧಿಗಳನ್ನು ಪ್ರೋತ್ಸಾಹಿಸಿದರು.

ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, "ವಿಜಯಪುರ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಕೇವಲ ಶೇ. 0.17ರಷ್ಟು ಮಾತ್ರ ಇದ್ದ ಸಂದರ್ಭದಲ್ಲಿ ವೃಕ್ಷಥಾನ್ ಆಂದೋಲನ ಆರಂಭಿಸಲಾಯಿತು. ಇದುವರೆಗೆ ಸುಮಾರು 1.5 ಕೋಟಿ ಸಸಿಗಳನ್ನು ನೆಡಲಾಗಿದ್ದು, ಈಗ ಹಸುರಿನ ವ್ಯಾಪ್ತಿ ಶೇ. 2ನ್ನು ಮುಟ್ಟಿದೆ. ಆದರೆ, ಇದು ಶೇ.30ರಿಂದ 35ರ ಪ್ರಮಾಣಕ್ಕೆ ತಲುಪಬೇಕೆಂದರೆ ನಾವು ಸಾಗಬೇಕಾದ ದಾರಿ ಇನ್ನೂ ತುಂಬಾ ಇದೆ. ಇಲ್ಲಿ ನಾವು ನಡೆಸುತ್ತಿರುವ ವೃಕ್ಷಥಾನ್ ಎಲ್ಲರ ಬೆಂಬಲದಿಂದ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಯಶಸ್ಸು ಕಾಣುತ್ತಿದೆ. ಮುಂದಿನ ವರ್ಷದಿಂದ ಜಿಲ್ಲೆಯ ಹಳ್ಳಿಗಳನ್ನೂ ಇದರಲ್ಲಿ ಒಳಗೊಳ್ಳಿಸಿಕೊಳ್ಳಲು ಯೋಜನೆ ರೂಪಿಸೋಣ" ಎಂದರು.

"ಗಿಡ, ಮರಗಳನ್ನು ಬೆಳೆಸಿ ಪರಿಸರ ಸುಸ್ಥಿರತೆ ಕಾಪಾಡಿಕೊಳ್ಳಬೇಕೆಂಬುದು ಈ ವೃಕ್ಷಥಾನ್ ಮ್ಯಾರಥಾನ್ ನ ಉದ್ದೇಶವಾಗಿದೆ. ಇದನ್ನು ತಿಳಿದು, ಪ್ರತಿಯೊಬ್ಬರೂ ಒಂದಾದರೂ ಸಸಿ ನೆಟ್ಟು ಬೆಳೆಸಿದರೆ ಉದ್ದೇಶ ಸಫಲವಾಗುತ್ತದೆ. ನಾವಿರುವ ಜಾಗದ ಸುತ್ತಲ ಪರಿಸರವನ್ನು ಬೇರೆ ಯಾರೋ ಬಂದು ಸ್ವಚ್ಛಗೊಳಿಸುತ್ತಾರೆ ಎಂಬ ಮನೋಭಾವ ಅಪಾಯಕಾರಿ. ನಾವಿರುವ ಸ್ಥಳದಲ್ಲಿನ ಉತ್ತಮ ಪರಿಸರಕ್ಕೆ ನಾವೇ ಕೊಡುಗೆ ಕೊಡಬೇಕು. ಹೀಗಾದಾಗ, ನಮಗೆಲ್ಲಾ ಆಸರೆ ನೀಡಿರುವ ಈ ಭೂಗ್ರಹದ ಪರಿಸರವನ್ನು ಕಾಪಾಡಿಕೊಳ್ಳುವುದು ಸಾಧ್ಯವಾಗುತ್ತದೆ" ಎಂದು ಹೇಳಿದರು.

ಓಟ ಆರೋಗ್ಯಕ್ಕೆ ಒಳ್ಳೆಯದು: ವೃಕ್ಷಥಾನ್​ನಲ್ಲಿ ಭಾಗಹಿಸಿದ್ದ ವೃದ್ಧೆ ಸುಲತಾ ಕಾಮತ್​ ಮಾತನಾಡಿ, "72 ವರ್ಷದವಳಾದ ನಾನು ಉಡುಪಿಯಿಂದ ಬಂದಿದ್ದೇನೆ. ಈ ತಿಂಗಳಲ್ಲಿ ನಾನು ಭಾಗವಹಿಸಿದ ನಾಲ್ಕನೇ ಮ್ಯಾರಥಾನ್​ ಇಂದಾಗಿದ್ದು, ಎಲ್ಲದರಲ್ಲೂ ಪ್ರಥಮ ಸ್ಥಾನ ಪಡೆದಿದ್ದೇನೆ. ಓಟ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಹೀಗಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮ್ಯಾರಥಾನ್​ನಲ್ಲಿ ಭಾಗವಹಿಸಬೇಕು. ನನಗೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ, ಫಿಟ್​ ಆಗಿ ಇದ್ದೇನೆ" ಎಂದರು.

21 ಕಿ.ಮೀ ಪುರುಷರ ಓಟ ವಿಭಾಗದಲ್ಲಿ ವಿವೇಕ ನಾರಾಯಣ ಮೋರೆ, 21 ಕಿ.ಮೀ ಮಹಿಳಾ ಓಟದ ವಿಭಾಗದಲ್ಲಿ ಸಾಕ್ಷಿ ಜಡ್ಯಾಳ ಪ್ರಥಮ ಸ್ಥಾನ ಪಡೆದರು.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿ ಉತ್ಸವ; ಸಂಕೀರ್ತನಾ ಯಾತ್ರೆಯಲ್ಲಿ ಮಹಿಳೆಯರು ಭಾಗಿ

Last Updated : Dec 24, 2023, 9:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.