ETV Bharat / state

ಕೊರೊನಾ ಸಂಪರ್ಕಿತರ ಭಾವಚಿತ್ರ ಪಡೆಯುವುದೇ ದೊಡ್ಡ ತಲೆನೋವು : ಗ್ರಾಮ ಲೆಕ್ಕಾಧಿಕಾರಿಗಳ ಅಳಲು - Muddebihala

ಮುದ್ದೇಬಿಹಾಳ ತಾಲೂಕಿನ ವ್ಯಾಪ್ತಿಯಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳುವಾಗ ಎದುರಾಗುವ ಯಾವುದೇ ಸಮಸ್ಯೆ ಇದ್ದರೂ ಅದರ ಪರಿಹಾರಕ್ಕಾಗಿ ಸಹಾಯವಾಣಿ ತೆರೆಯಲಾಗಿದೆ..

Muddebihala
ಕಂದಾಯ ಇಲಾಖೆಯ ನೌಕರರ ಸಭೆ
author img

By

Published : Aug 29, 2020, 9:44 PM IST

ಮುದ್ದೇಬಿಹಾಳ : ಕೊರೊನಾ ವೈರಸ್ ಸೋಂಕಿತರ ಮನೆಯ ಸುತ್ತಮುತ್ತಲಿನ ಮನೆಯ ನಿವಾಸಿಗಳ ಭಾವಚಿತ್ರ ತೆಗೆದು ಕಳಿಸುವಂತೆ ಹೇಳಿರುವ ಕೆಲಸ ಅಧಿಕಾರಿಗಳಿಗೆ ಬಹುದೊಡ್ಡ ತಲೆನೋವು ತರಿಸಿದೆ. ಈ ಸಮಸ್ಯೆಯನ್ನು ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುವಂತೆ ಗ್ರಾಮ ಲೆಕ್ಕಾಧಿಕಾರಿಗಳು ತಹಶೀಲ್ದಾರ್‌ರ ಬಳಿ ಅಳಲು ತೋಡಿಕೊಂಡಿದ್ದಾರೆ.

ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಭವನದಲ್ಲಿ ಶನಿವಾರ ಬೆಳೆ ಸಮೀಕ್ಷೆ ಹಾಗೂ ಕೊರೊನಾ ಪರಿಸ್ಥಿತಿಯ ಅವಲೋಕನದ ಕುರಿತು ನಡೆದ ಕಂದಾಯ ಇಲಾಖೆಯ ನೌಕರರ ಸಭೆಯಲ್ಲಿ ಮಾತನಾಡಿದ ಗ್ರಾಮಲೆಕ್ಕಾಧಿಕಾರಿ ರಿಯಾಜ್ ನಾಯ್ಕೋಡಿ, ತಾಲೂಕಿನಲ್ಲಿ ಒಂದೊಂದು ದಿನ 15-20 ಕೋವಿಡ್-19 ಪ್ರಕರಣ ಕಂಡು ಬರುತ್ತಿವೆ.

ಅವರ ಜೊತೆಗೆ ಏನಿಲ್ಲವೆಂದರೂ 100-150 ಜನ ಪ್ರಾಥಮಿಕ ಸಂಪರ್ಕಿತರು ಬರುತ್ತಾರೆ. ಸೋಂಕಿತ ಸಂಪರ್ಕಿತರ ಮನೆಯ ಸದಸ್ಯರ ಜೊತೆಗೆ ನಿಂತು ಫೋಟೋಗಳನ್ನು ಕಳಿಸಬೇಕು ಎಂಬ ನಿಯಮದಿಂದ ಸಾರ್ವಜನಿಕರು ಇನ್ನುಳಿದ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.

ಕಂದಾಯ ಇಲಾಖೆಯ ನೌಕರರ ಸಭೆ

ಕೂಡಲೇ ಈ ಕಾರ್ಯದಿಂದ ಆಗುತ್ತಿರುವ ತೊಂದರೆಯ ಬಗ್ಗೆ ಮೇಲಾಧಿಕಾರಿಗಳು ಸರ್ಕಾರದ ಗಮನಕ್ಕೆ ತರಬೇಕು ಎಂದು ಹೇಳಿದರು. ಸಭೆಯಲ್ಲಿ A ಗ್ರೇಡ್-2 ತಹಸೀಲ್ದಾರ್ ಡಿ ಜಿ ಕಳ್ಳಿಮನಿ, ಶಿರಸ್ತೇದಾರರು, ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಾಧಿಕಾರಿಗಳು ಇದ್ದರು.

ಬೆಳೆ ಸಮೀಕ್ಷೆ ಸಹಾಯವಾಣಿ : ಮುದ್ದೇಬಿಹಾಳ ತಾಲೂಕಿನ ವ್ಯಾಪ್ತಿಯಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳುವಾಗ ಎದುರಾಗುವ ಯಾವುದೇ ಸಮಸ್ಯೆ ಇದ್ದರೂ ಅದರ ಪರಿಹಾರಕ್ಕಾಗಿ ಸಹಾಯವಾಣಿ ತೆರೆಯಲಾಗಿದೆ. ಪ್ರತಿ ಶನಿವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಬೆಳೆ ಸಮೀಕ್ಷೆ ಪೂರ್ಣಗೊಳ್ಳುವವರೆಗೂ ಈ ಸಹಾಯವಾಣಿ ಚಾಲನೆಯಲ್ಲಿರಲಿದೆ.

ರೈತರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ ಹೆಚ್‌ ಯರಝರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಹಾಯಕ ಕೃಷಿ ನಿರ್ದೇಶಕರು-8277930621 ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು-9972719844 ಹಾಗೂ ತಹಶೀಲ್ದಾರ್-9741695388 ಕ್ಕೆ ಸಂಪರ್ಕಿಸಬಹುದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.