ETV Bharat / state

ಕೋಳೂರ ತಾಂಡಾ ವಸತಿ ಯೋಜನೆ ಅವ್ಯವಹಾರ ಪ್ರಕರಣ.. 15 ದಿನದಲ್ಲಿ ತನಿಖಾ ವರದಿ ಸಲ್ಲಿಕೆ - ಕೋಳೂರ ಗ್ರಾಪಂ ವ್ಯಾಪ್ತಿಯ ವಸತಿ ಯೋಜನೆ

ಕೋಳೂರ ತಾಂಡಾದ ನಿವಾಸಿ ಜಗದೀಶ ಚವ್ಹಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಕೋಳೂರ ಗ್ರಾಪಂ ವಸತಿ ಯೋಜನೆ ಅವ್ಯವಹಾರದ ಬಗ್ಗೆ ದೂರು ನೀಡಿದ್ದರು. ತನಿಖೆ ಕೈಗೊಂಡು ಸಮಗ್ರ ವರದಿಯನ್ನು 15 ದಿನಗಳಲ್ಲಿ ಸಲ್ಲಿಸಲಾಗುವುದು ಎಂದು ತಾಪಂ ಇಓ ಹೇಳಿದರು.

report-on-investigation-the-kollur-thanda-housing-scheme
ಕೋಳೂರ ತಾಂಡಾ ವಸತಿ ಯೋಜನೆ ಅವ್ಯವಹಾರ ಪ್ರಕರಣ, 15 ದಿನಗಳಲ್ಲಿ ತನಿಖೆಯ ಸಮಗ್ರ ವರದಿ
author img

By

Published : Oct 16, 2020, 8:35 PM IST

ಮುದ್ದೇಬಿಹಾಳ: ತಾಲೂಕಿನ ಕೋಳೂರ ಗ್ರಾಪಂ ವ್ಯಾಪ್ತಿಯ ವಸತಿ ಯೋಜನೆಯಡಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ಸೂಕ್ತ ಪರಿಶೀಲನೆ ನಡೆಸಿ 15 ದಿನಗಳಲ್ಲಿ ಜಿಪಂ ಸಿಇಓಗೆ ವರದಿ ಸಲ್ಲಿಸುವುದಾಗಿ ತಾಪಂ ಇಓ ಶಶಿಕಾಂತ ಶಿವಪೂರೆ ತಿಳಿಸಿದ್ದಾರೆ.

ಕೋಳೂರ ತಾಂಡಾ ವಸತಿ ಯೋಜನೆ ಅವ್ಯವಹಾರ ಪ್ರಕರಣ, 15 ದಿನಗಳಲ್ಲಿ ತನಿಖೆಯ ಸಮಗ್ರ ವರದಿ

ಕೋಳೂರ ತಾಂಡಾದಲ್ಲಿ ಅನರ್ಹರಿಗೆ ಮನೆ ಹಾಕಿದ್ದು, ಅವರ ಖಾತೆಗೆ ದುಡ್ಡು ಹಾಕಿರುವುದೇ ಕೆಲವೊಬ್ಬರಿಗೆ ಮಾಹಿತಿ ಇಲ್ಲ. ಅಲ್ಲದೇ ಮನೆ ಕಟ್ಟದೆಯೂ ಹಣ ಲಪಟಾಯಿಸಿರುವ ಘಟನೆಗಳು ತನಿಖೆಯ ವೇಳೆ ಕಂಡು ಬಂದಿವೆ ಎಂದು ಅಧಿಕಾರಿಗಳ ಮೂಲಗಳು ತಿಳಿಸಿವೆ.

ಕೋಳೂರ ತಾಂಡಾದ ನಿವಾಸಿ ಜಗದೀಶ ಚವ್ಹಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಕೋಳೂರ ಗ್ರಾಪಂ ವಸತಿ ಯೋಜನೆ ಅವ್ಯವಹಾರದ ಬಗ್ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದರ ತನಿಖೆ ಕೈಗೊಳ್ಳಲು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಸಂಗಮೇಶ ಹೊಲ್ದೂರ, ಕವಡಿಮಟ್ಟಿ ಪಿಡಿಒ ಪಿ.ಎಸ್.ಕಸನಕ್ಕಿ, ನಾಗಬೇನಾಳ ಪಿಡಿಓ ನಿರ್ಮಲಾ ತೋಟದ, ನಾಗರಬೆಟ್ಟ ಪಿಡಿಓ ವೀರೇಶ ಹೂಗಾರ ಅವರನ್ನು ಒಳಗೊಂಡ ತಂಡ ತಾಂಡಾಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ. ಸಮಗ್ರ ವರದಿಯನ್ನು 15 ದಿನಗಳಲ್ಲಿ ಸಲ್ಲಿಸಲಾಗುವುದು ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.