ETV Bharat / state

ವಿಜಯಪುರದಲ್ಲಿ ಚುರುಕುಗೊಂಡ ಮರು ಬಿತ್ತನೆ ಕಾರ್ಯ.... ಚಿಂತೆಯಲ್ಲಿ ಸಿಲುಕಿದ ಅನ್ನದಾತ..!

ವಿಜಯಪುರ ಜಿಲ್ಲೆಯಲ್ಲಿ ಅತಿಯಾದ ಮಳೆಗೆ ಕೃಷಿಕರ ಬೆಳೆ ನಾಶವಾದ ಪರಿಣಾಮ ಮರು ಬಿತ್ತನೆ ಕಾರ್ಯದಲ್ಲಿ ರೈತರು ತೊಡಗಿದ್ದಾರೆ.

author img

By

Published : Oct 31, 2020, 3:46 PM IST

re-sowing-work-in-vijayapura
ವಿಜಯಪುರದಲ್ಲಿ ಚುರುಕುಗೊಂಡ ಮರು ಬಿತ್ತನೆ ಕಾರ್ಯ

ವಿಜಯಪುರ: ಜಿಲ್ಲೆಯಲ್ಲಿ ಸುರಿದ ಅತಿಯಾದ ಮಳೆಗೆ 2.7 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಗಳು ನಾಶವಾಗಿವೆ. ಹೀಗಾಗಿ, ಇಲ್ಲಿನ ರೈತರು ಸಾಲ ಸೂಲ ಮಾಡಿ ಮರು ಬಿತ್ತನೆ ಕೂಡ ಮಾಡ್ತಿದ್ದಾರೆ. ಆದ್ರೆ, ಬಿತ್ತನೆ ಮಾಡಿದ ಮೇಲೆ ಮಳೆ ಸುರಿದ್ರೆ ಮಾತ್ರ ಬೆಳೆ ಬರುತ್ತೇ, ಇಲ್ಲವಾದ್ರೆ ಜೀವನ ನಡೆಸಲು ಕಷ್ಟವಾಗುತ್ತೆ ಎಂಬ ಕೊರಗು ರೈತರನ್ನು ಕಾಡುತ್ತಿದೆ.

ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಮಳೆ ಕೊರತೆ ಉಂಟಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ರು. ಈ ವರ್ಷ ಮಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಉತ್ತಮವಾಗಿ ವರ್ಷಧಾರೆ ಸುರಿದಿದ್ದರಿಂದ ಖುಷಿ ನೀಡಿತ್ತು. ಅದೇ ಖುಷಿಯಲ್ಲಿ ಸಾಲ- ಸೂಲ ಮಾಡಿ ಬಿತ್ತನೆ ಕಾರ್ಯ ಮುಗಿಸಿದ್ರು. ಈ ವರ್ಷ ಮಳೆ ಕೊರತೆ ಕಾಡ್ತಿಲ್ಲ, ಬೆಳೆಗಳು ಸದೃಢವಾಗಿ ಬೆಳೆಯುತ್ತಿವೆ ಎಂದು ಹಸಿರು ನೋಡಿ ಸಂತೋಷ ಪಡ್ತಿದ್ದ ಕೃಷಿಕರಿಗೆ, ಕಳೆದ ತಿಂಗಳ ಅತಿಯಾದ ಮಳೆ ಹಾಗೂ ಡೋಣಿ ಮತ್ತು ಭೀಮಾ ನದಿ ಪ್ರವಾಹದ ರಕ್ಕಸಕ್ಕೆ ಇಂಡಿ, ಬಬಲೇಶ್ವರ, ಚಡಚಣ,ಸಿಂದಗಿ ತಾಲೂಕುಗಳ ಭಾಗದ ಬೆಳೆಗಳು ನೀರಿನಲ್ಲಿ ಕೊಚ್ಚಿಹೋಗಿದ್ದರಿಂದ ಆತಂಕಕ್ಕೆ ಸಿಲುಕುವಂತಾಯಿತು.

ಅಲ್ಲದೇ, ಕಳೆದ ತಿಂಗಳು ಸುರಿದ ಅತಿಯಾದ ಮಳೆಗೆ ತೊಗರಿ, ಕಡಲೆ, ಗೋಧಿ, ಜೋಳ ಸೇರಿದಂತೆ ಹಲವು ಬೆಳೆಗಳು ನಾಶಗೊಂಡಿವೆ. ಮರು ಬಿತ್ತನೆ ಮಾಡಲು ತಲಾ ಒಂದು ಎಕರೆ ಪ್ರದೇಶಕ್ಕೆ ಗೊಬ್ಬರ, ಬಿತ್ತನೆ ಬೀಜ ಸೇರಿದಂತೆ 3 ರಿಂದ 5 ಸಾವಿರ ರೂ. ಖರ್ಚು ಮಾಡಿದ್ದಾರೆ. ಇದೆಲ್ಲದರ ನಡುವೆ ಸಾಲ ಮಾಡಿ ಬಿತ್ತನೆ ಮಾಡಿದ್ರೆ, ನವೆಂಬರ್ ತಿಂಗಳಲ್ಲಿ ಮಳೆಯಾಗುತ್ತೋ, ಇಲ್ಲವೋ ಎಂಬ ಚಿಂತೆ ಈಗ ರೈತರದ್ದಾಗಿದೆ.

ಕೃಷಿ ಅಧಿಕಾರಿಗಳ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ 5.2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೈತರು ಬಿತ್ತನೆ ಮಾಡಿ ಫಸಲಿನ ನಿರೀಕ್ಷೆಯಲ್ಲಿದ್ದು, ಮಳೆ ಆರ್ಭಟಕ್ಕೆ 2.7 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಸಂಪೂರ್ಣವಾಗಿ ಹಾಳಾಗಿದೆ. ಜಿಲ್ಲಾದ್ಯಂತ ರೈತರು ಹತ್ತಿ, ಶೇಂಗಾ, ಕಡಲೆ, ಗೋಧಿ, ಜೋಳ ಸೇರಿದಂತೆ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮರು ಬಿತ್ತನೆಯನ್ನು ಮಾಡ್ತಿದ್ದಾರೆ ಎಂದು ಹೇಳ್ತಿದ್ದಾರೆ. ಆದ್ರೆ ಮರು ಬಿತ್ತನೆ ಮಾಡಿದ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಕೈ ಸೇರೊದಿಲ್ಲ. ಸರ್ಕಾರ ರೈತರ ನೆರವಿಗೆ ಬರಬೇಕು ಎನ್ನುವುದು ರೈತರ ಕೂಗಾಗಿದೆ.

ಅತಿಯಾದ ಮಳೆಗೆ ಜಿಲ್ಲೆಯ ಕೃಷಿಕರ ಬೆಳೆ ನಾಶವಾದ ಪರಿಣಾಮ ಮರು ಬಿತ್ತನೆ ಕಾರ್ಯದಲ್ಲಿ ರೈತರು ತೊಡಗಿದ್ದಾರೆ. ಆದ್ರೆ, ಬಿತ್ತನೆ‌ ಮಾಡಿದ ಬೆಳೆಗೆ ನೀರಿನ ಕೊರತೆ ಎದುರಾಗಿ ಕೃಷಿಕರು ನಷ್ಟ ಅನುಭವಿಸುತ್ತಾರೆ‌. ಹೀಗಾಗಿ, ಸರ್ಕಾರ ನೆರವಿಗೆ ಬರಬೇಕು ಎನ್ನುವುದು ರೈತರ ಒತ್ತಾಯವಾಗಿದೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.