ETV Bharat / state

ಭೀಮಾತೀರದ ರಕ್ತ ಸಿಕ್ತ ಚರಿತ್ರೆಯ ನೆಲದಲ್ಲಿದೆ ರವಿ ಬೆಳಗೆರೆ ಹೆಜ್ಜೆ ಗುರುತು

ಪತ್ರಕರ್ತ ರವಿ ಬೆಳಗೆರೆಯ ಜೀವನದಲ್ಲಿ ತಿರುವು ನೀಡಿದ ಪ್ರಕರಣಗಳಲ್ಲಿ ಭೀಮಾ ತೀರದ ವರದಿ ಸಹ ಪ್ರಮುಖ ಎನ್ನಬಹುದು. ರವಿ ಬೆಳಗೆರೆ ಅವರ ವರದಿ ಬಳಿಕ ಪುಸ್ತಕ ರೂಪ ತಳೆದು ನಂತರ ಸಿನಿಮಾ ರಂಗಕ್ಕೂ ಕಾಲಿರಿಸಿತ್ತು..

ravi-belageres-footprint-is-on-the-ground-of-the-bhimatheera
ಭೀಮಾತೀರದ ರಕ್ತ ಸಿಕ್ತ ಚರಿತ್ರೆಯ ನೆಲದಲ್ಲಿದೆ ರವಿ ಬೆಳಗೆರೆ ಹೆಜ್ಜೆ ಗುರುತು
author img

By

Published : Nov 13, 2020, 5:31 PM IST

ವಿಜಯಪುರ: ಭೀಮಾತೀರದ ಇತಿಹಾಸ ಕೆದಕಿದವರೇ ಪತ್ರಕರ್ತ ರವಿ ಬೆಳಗೆರೆ ಅವರು, ಇವರ ಪ್ರೇರಣೆ ಮುಂದೆ ಸಿನಿಮಾ ರೂಪ ಕೂಡ ಪಡೆದುಕೊಂಡಿತು.‌ ಆದರೆ, ಇದನ್ನೂ ಸಹ ಹಲವರು ವಿರೋಧಸಿದರು. ಹಂತಕರ ವೈಭವೀಕರಿಸಲಾಯಿತು ಎಂಬ ಆರೋಪ ಸಹ ಅವರ ಮೇಲಿತ್ತು. ಆದರೆ, ಇದನೆಲ್ಲಾ ಮೆಟ್ಟಿನಿಂತು ಭೀಮಾತೀರದ ಪ್ರತಿ ರಕ್ತ ಸಿಕ್ತ ಹೆಜ್ಜೆಗಳನ್ನು ಬೆಳಗೆರೆ ಕಂಡಿದ್ದರು.

ಭೈರಗೊಂಡ ಹಾಗೂ ಚಡಚಣ ಕುಟುಂಬದ ಮಧ್ಯೆ ಭೂಮಿ ವ್ಯಾಜ್ಯ ವಿಚಾರವಾಗಿ ಎದ್ದಿದ್ದ ಸಣ್ಣ ಗಲಾಟೆ ಇಂದು ಭೀಮೆಯ ಒಡಲನ್ನು‌ ರಕ್ತಸಿಕ್ತವನ್ನಾಗಿ ಗುರುತಿಸುವಂತೆ ಮಾಡಿದೆ. ಇಲ್ಲಿ ನಡೆಯುತ್ತಿದ್ದ ಅಪರಾಧ ಕೃತ್ಯಗಳ ಬಗ್ಗೆ ಚಿಕ್ಕಪುಟ್ಟ ವರದಿಯಾಗುತ್ತಿದ್ದರೂ ಪೂರ್ಣ ಪ್ರಮಾಣದಲ್ಲಿ ಬೆಳಕು ಚೆಲ್ಲಿದವರು ಪತ್ರಕರ್ತ ರವಿ ಬೆಳಗೆರೆ. ಇವರ ಹಾಯ್ ಬೆಂಗಳೂರು ಪತ್ರಿಕೆ ಮೂಲಕ ಸರಣಿಯಾಗಿ ಭೀಮಾತೀರದ ಇತಿಹಾಸವನ್ನು ಕೆಣಕಿದರು.

ರವಿ ಬೆಳಗೆರೆಯ ಜೊತೆ ಕಳೆದ ದಿನಗಳ ಕುರಿತು ಮಾಹಿತಿ ನೀಡಿದ ಅನುಯಾಯಿ

ಮುಂದೆ ಇದು ಪುಸ್ತಕ ರೂಪದಲ್ಲಿ ಭೀಮಾ ತೀರದ ಹಂತಕರು ರೂಪ ಪಡೆದಿಕೊಂಡಿತು. ಈ ಸರಣಿ ಬರೆಯಲು ರವಿ ಬೆಳಗೆರೆ ಭೀಮಾ ತೀರದಲ್ಲಿ ಖುದ್ದು ಸುತ್ತಾಡಿದ್ದರು.‌

ಭೀಮಾತೀರದ ಹಂತಕ ಚಂದಪ್ಪ ಹರಿಜನ ಅವರನ್ನು ಭೇಟಿ‌ ಮಾಡಿ ಮಾಹಿತಿ ಕಲೆ ಹಾಕಿರುವ ಕುರಿತು ಅವರ ಅನುಯಾಯಿ ಶರಣು ಸಬರದ ಮಾಹಿತಿ ನೀಡಿದ್ದಾರೆ.

ಭೀಮಾತೀರದ ಹತ್ಯಾಕಾಂಡವನ್ನು ರವಿ ಬೆಳಗೆರೆ ತಮ್ಮ ವಾರಪತ್ರಿಕೆ ಹಾಯ್ ಬೆಂಗಳೂರು ಮೂಲಕ ಪ್ರಕಟಿಸಿದರೆ. ಅದರ ಜತೆ ಭೀಮಾ ತೀರದ ಹಂತಕರು ಶೀರ್ಷಿಕೆಯಡಿ ಪುಸ್ತಕ ಪ್ರಕಟಿಸಿದರು.

ಇದು ಸಾಕಷ್ಟು ಜನಪ್ರಿಯತೆಯ ಜತೆ ಈ ಭಾಗದಲ್ಲಿ ಸಂಚಲನ ಮೂಡಿಸಿತು. ರವಿ ಬೆಳಗೆರೆ ಅವರಿಗೆ ಖ್ಯಾತಿ‌ ಜತೆ ವಿವಾದವನ್ನು ಸಹ ಸೃಷ್ಡಿಸಿತ್ತು ಎಂದರೇ ತಪ್ಪಾಗಲಾರದು. ಮುಂದೆ ಇದೇ ಭೀಮಾ ತೀರದ ಹಂತಕರ ಹೆಸರಿನಲ್ಲಿ ಚಲನಚಿತ್ರ ಬಂದಾಗ ಮತ್ತೆ ಚರ್ಚೆಗೆ ಗ್ರಾಸವಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.