ETV Bharat / state

ಮುದ್ದೇಬಿಹಾಳ: ಅಧಿಕಾರಿಗಳ ಭಾವಚಿತ್ರಕ್ಕೆ ಪುರಸಭೆ ಸದಸ್ಯರಿಂದ ರಕ್ತಾಭಿಷೇಕ

ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಪುರಸಭೆ ಸದಸ್ಯರು ಅಧಿಕಾರಿಗಳ ಭಾವಚಿತ್ರಕ್ಕೆ ರಕ್ತಾಭಿಷೇಕ ಮಾಡಿದ್ದಾರೆ.

Etv Bharatಅಧಿಕಾರಿಗಳ ಭಾವಚಿತ್ರಕ್ಕೆ ಪುರಸಭೆ ಸದಸ್ಯರಿಂದ ರಕ್ತಾಭಿಷೇಕ

author img

By

Published : Sep 2, 2022, 1:49 PM IST

ಮುದ್ದೇಬಿಹಾಳ: ಪಟ್ಟಣದ ಪುರಸಭೆಯ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ ಅವರನ್ನು ಅಮಾನತುಗೊಳಿಸಬೇಕು ಎಂಬುದು ಸೇರಿದಂತೆ 12 ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕಳೆದ 45 ದಿನಗಳಿಂದ ಹೋರಾಟ ನಡೆಸುತ್ತಿರುವ ಸದಸ್ಯರಾದ ಮಹೆಬೂಬ ಗೊಳಸಂಗಿ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಪ್ಪ ಹರಿಜನ(ಶಿವಪೂರ) ಅಧಿಕಾರಿಗಳ ಭಾವಚಿತ್ರಕ್ಕೆ ರಕ್ತದಲ್ಲಿ ಅಭಿಷೇಕ ಮಾಡಿದ್ದಾರೆ.

ಅಧಿಕಾರಿಗಳ ಭಾವಚಿತ್ರಕ್ಕೆ ಪುರಸಭೆ ಸದಸ್ಯರಿಂದ ರಕ್ತಾಭಿಷೇಕ

ಪಟ್ಟಣದ ಪುರಸಭೆ ಎದುರಿಗೆ ಹಾಕಿರುವ ಬ್ಯಾನರ್​​ನಲ್ಲಿ ​​ಜಿಲ್ಲಾಧಿಕಾರಿಗಳು, ಡಿಯುಡಿಸಿ ಯೋಜನಾ ನಿರ್ದೇಶಕರು ಹಾಗೂ ಕರ್ನಾಟಕ ಸರ್ಕಾರದ ಲೋಗೋಗಳಿಗೆ ಸಿರಿಂಜ್‌ನಲ್ಲಿ ರಕ್ತ ತೆಗೆದು ಅಭಿಷೇಕ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಪುರಸಭೆ ಸದಸ್ಯ ಮಹೆಬೂಬ ಗೊಳಸಂಗಿ ,ತನಿಖೆಯನ್ನು ಆಮೆಗತಿಯನ್ನು ಮಾಡಿದ್ದು, ವರದಿ ಸಲ್ಲಿಸಲು ಆಮೆಗತಿಗಿಂತಲೂ ವಿಳಂಬ ಮಾಡುತ್ತಿದ್ದಾರೆ. ಬೆಂಗಳೂರಿನ ಡಿಎಂಎಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾದ ತನಿಖಾ ವರದಿಯನ್ನು ಕಳುಹಿಸಿಲ್ಲ. ಡಿಯುಡಿಸಿ ವ್ಯವಸ್ಥಾಪಕ ಗವಳಿ ಎಂಬುವರು ಮುಖ್ಯಾಧಿಕಾರಿಗಳಿಂದ ಹಣ ಪಡೆದುಕೊಂಡಿದ್ದಾರೋ ಏನೋ ಗೊತ್ತಿಲ್ಲ.ಆದರೆ, ಬೆಂಗಳೂರಿಗೆ ವರದಿ ಕಳುಹಿಸುತ್ತಿಲ್ಲ ಎಂದರೆ ಇಲ್ಲಿ ಹೇಳುವವರು ಕೇಳುವವರು ಯಾರು ಇಲ್ಲವೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ : ವಿಡಿಯೋ: ಹಠಾತ್​​ ಬ್ರೇಕ್​ ಹಾಕಿದ ಚಾಲಕ​​​, ಶಾಲಾ ಬಸ್​​ನಿಂದ ಕೆಳಬಿದ್ದ ಎಲ್‌ಕೆಜಿ ವಿದ್ಯಾರ್ಥಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.