ETV Bharat / state

ಕಾಂಗ್ರೆಸ್ ಮುಖಂಡರ ಲಾಂಗ್ ಜಂಪ್​ಗೆ ರಾಜುಗೌಡ ವ್ಯಂಗ್ಯ - ವಿಜಯಪುರದಲ್ಲಿ ಕಾಂಗ್ರೆಸ್​ ಮುಖಂಡರ ಲಾಂಗ್ ಜಂಪ್​ಗೆ ರಾಜಗೌಡ ವ್ಯಂಗ್ಯ

1983ರಲ್ಲಿ ಕಪೀಲ್​ದೇವ್​ ನೇತೃತ್ವದಲ್ಲಿ ಭಾರತ ಮೊದಲ ಬಾರಿ ವಿಶ್ವಕಪ್ ಗೆದ್ದಿತ್ತು. ಮುಂದೆ ಕಪಿಲ್​ ಸಹ ನಿವೃತ್ತಿ ಹೊಂದಿದಾಗ ಕ್ರೀಡಾ ಪ್ರೇಮಿಗಳು ಬೇಸರಗೊಂಡಿದ್ದರು. ಆದರೆ, ಅವರು ಮತ್ತೊಮ್ಮೆ ತಂಡದ ಕೋಚ್​ ಆಗಿ ಕಾರ್ಯನಿರ್ವಹಿಸಿದ್ದಾರೆ. ಅದೇ ರೀತಿ ಬಿಎಸ್​ವೈ ಸಹ ಇನ್ನು ಮುಂದೆ ಪಕ್ಷ ಸಂಘಟನೆ ಹಾಗೂ ಕಿರಿಯರಿಗೆ ಸಲಹೆ ಸೂಚನೆ ನೀಡಲಿದ್ದಾರೆ ಎಂದು ಶಾಸಕ ರಾಜುಗೌಡ ಹೇಳಿದರು.

ರಾಜುಗೌಡ
ರಾಜುಗೌಡ
author img

By

Published : Jul 26, 2022, 10:35 PM IST

Updated : Jul 26, 2022, 10:56 PM IST

ವಿಜಯಪುರ: ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ಚುನಾವಣೆ ರಾಜಕೀಯದಿಂದ ನಿವೃತ್ತಿ ಘೋಷಿಸಿರಬಹುದು. ಆದರೆ, ಅವರು ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಲು ಅವರ ಅವಶ್ಯಕತೆ ಇದೆ. ಅವರು ಹಾಗೂ ಅನಂತಕುಮಾರ ಬೈಕ್ ನಲ್ಲಿ ರಾಜ್ಯ ಸುತ್ತಿ ಪಕ್ಷ ಸಂಘಟನೆ ಮಾಡಿದ್ದಾರೆ ಎಂದು ಶಾಸಕ ರಾಜುಗೌಡ ಹೇಳಿದರು.

ಶಾಸಕ ರಾಜುಗೌಡ ಮಾತನಾಡಿರುವುದು

ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಬಿಜೆಪಿ 120 ಸ್ಥಾನ ಬರುವವರೆಗೂ ದುಡಿದಿದ್ದಾರೆ. ಅವರು ಕಟ್ಟಿದ ಪಕ್ಷದಲ್ಲಿ ಈಗ ನಾವು ಅಧಿಕಾರ ನಡೆಸುತ್ತಿದ್ದೇವೆ. ಸದ್ಯ ಅವರಿಗೆ 75 ವರ್ಷ ವಯಸ್ಸಾದ ಕಾರಣ ನಮ್ಮಲ್ಲಿ ಪ್ರಧಾನಿ ಮೋದಿ ಮಾಡಿದ ನಿಯಮಾವಳಿಯಂತೆ ಬಿಎಸ್​ವೈ ನಿವೃತ್ತರಾಗಿದ್ದಾರೆ.

ಆದರೂ ಅವರು 75 ವರ್ಷದ ಮೇಲೆಯೂ ಸಿಎಂ ಆಗಿ ಮುಂದುವರೆಯಲು ಕೇಂದ್ರ ಹೈಕಮಾಂಡ್​ ಸಹಕರಿಸಿದೆ.‌ ಈಗ ಅವರ ಪುತ್ರ ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧಿಸಲಿ ಎಂಬ ಬಯಕೆ ಬಿಎಸ್​​ವೈಗೆ ಇದೆ. ವಿಜಯೇಂದ್ರ ಯೂತ್​ ಐಕಾನ್ ಆಗಿದ್ದಾರೆ. ಅವರು ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೂ ಗೆಲುವು ಗ್ಯಾರಂಟಿ ಎಂದರು.

75 ವರ್ಷ ಪೂರೈಸಿದವರ ಪಟ್ಟಿ ಮಾಡಲಾಗುತ್ತಿದೆ; ಸದ್ಯ ನಮ್ಮ ಪಕ್ಷದಲ್ಲಿ 75ವರ್ಷ ಮುಗಿದವರ ಪಟ್ಟಿ ಮಾಡಲಾಗುತ್ತಿದೆ. ಅವರನ್ನು ಗುರುತಿಸಿ ಸಾಮೂಹಿಕವಾಗಿ ಅವರ 75 ವರ್ಷದ ಹುಟ್ಟುಹಬ್ಬ ಆಚರಣೆ ಮಾಡಲಾಗುವುದು ಎನ್ನುವ ಮೂಲಕ ಹಿರಿಯ ರಾಜಕಾರಣಿಗಳ ಮುಂದಿನ ಭವಿಷ್ಯದ ಬಗ್ಗೆ ಸೂಕ್ಷ್ಮವಾಗಿ ಪ್ರತಿಕ್ರಿಯೆ ನೀಡಿದರು. ಬಿಎಸ್​​ವೈ ತಮ್ಮ ಪುತ್ರನಿಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟಿರುವುದರಲ್ಲಿ ತಪ್ಪೇನೂ ಇಲ್ಲ. ಮುಂದೆ ಸಹ ಅವರ ಮಾರ್ಗದರ್ಶನದಲ್ಲಿ ರಾಜ್ಯ ಬಿಜೆಪಿ ಮುನ್ನಡೆಯಲಿದೆ. ಅವರು ಪಕ್ಷದ ಶಕ್ತಿಯಾಗಿದ್ದಾರೆ ಎಂದು ಬಿಎಸ್​ವೈ ಗುಣಗಾನ ಮಾಡಿದರು.

ಕಪಿಲ್​ ದೇವ್​​​​ಗೆ ಹೋಲಿಸಿ ಹೊಗಳಿಕೆ: ಬಿಎಸ್​ವೈ ಅವರನ್ನು ಕಪೀಲ್​ದೇವ್​ಗೆ ಹೋಲಿಸಿ ಮಾತನಾಡಿದ ಅವರು, 1983ರಲ್ಲಿ ಕಪಿಲ್​ದೇವ್​ ನೇತೃತ್ವದಲ್ಲಿ ಭಾರತ ಮೊದಲ ಬಾರಿ ವಿಶ್ವಕಪ್ ಗೆದ್ದಿತ್ತು. ಮುಂದೆ ಕಪಿಲ್​ ಸಹ ನಿವೃತ್ತಿ ಹೊಂದಿದಾಗ ಕ್ರೀಡಾ ಪ್ರೇಮಿಗಳು ಬೇಸರಗೊಂಡಿದ್ದರು.

ಆದರೆ, ಅವರು ಮತ್ತೊಮ್ಮೆ ತಂಡದ ಕೋಚ್​ ಆಗಿ ಕಾರ್ಯನಿರ್ವಹಿಸಿದ್ದಾರೆ. ಅದೇ ರೀತಿ ಬಿಎಸ್​ವೈ ಸಹ ಇನ್ನು ಮುಂದೆ ಪಕ್ಷ ಸಂಘಟನೆ ಹಾಗೂ ಕಿರಿಯರಿಗೆ ಸಲಹೆ ಸೂಚನೆ ನೀಡಲಿದ್ದಾರೆ ಎಂದರು.

ಇದೇ ವೇಳೆ ವಿಜಯೇಂದ್ರ ಸಕ್ರೀಯ ರಾಜಕಾರಣದಿಂದ ಪಕ್ಷಕ್ಕೆ ಯಾವ ಲಾಭವಾಗಲಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ವಿಜಯೇಂದ್ರ ಯುವಕರ ನೆಚ್ಚಿನ ನಾಯಕರಾಗಿದ್ದಾರೆ. ಅವರು ರಾಜಕಾರಣ ಬರುವುದರಲ್ಲಿ ತಪ್ಪೇನು ಇಲ್ಲ.

ಕುಟುಂಬ ರಾಜಕಾರಣ ಯಾವ ಪಕ್ಷದಲ್ಲಿ ಇಲ್ಲ ಹೇಳಿ ಎಂದು ಪ್ರಶ್ನಿಸಿದ ಅವರು, ತಮ್ಮ ನೆಚ್ಚಿನ ನಾಯಕ ಕುಟುಂಬದವರೇ ಪಕ್ಷ ಮುನ್ನಡೆಸಲಿ ಎನ್ನುವುದು ಕಾರ್ಯಕರ್ತರ ಅಭಿಲಾಷೆಯಾಗಿರುತ್ತದೆ. ಹೀಗಾಗಿ, ಶಿಕಾರಿಪುರ ಕ್ಷೇತ್ರದ ಜನತೆಯ ಒತ್ತಾಯದ ಮೇಲೆ ಬಿಎಸ್​ವೈ ತಮ್ಮ ಪುತ್ರನ ಹೆಸರು ಪ್ರಸ್ತಾಪಿಸಿದ್ದಾರೆ ಎಂದರು.

ಅಚ್ಚರಿ ಪಡಬೇಕಿಲ್ಲ: ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವರನ್ನು ಇಡಿ ವಿಚಾರಣೆ ಮಾಡುವುದನ್ನು ಖಂಡಿಸಿ ಕಾಂಗ್ರೆಸ್ ಮುಖಂಡರು ನಡೆಸುತ್ತಿರುವ ಪ್ರತಿಭಟನೆಯನ್ನು ಲೇವಡಿ ಮಾಡಿದ ಶಾಸಕ ರಾಜುಗೌಡ, ಡಿಕೆಶಿ, ಸಿದ್ದರಾಮಯ್ಯ ಅವರು ಪ್ರತಿಭಟನೆ ವೇಳೆ ಬ್ಯಾರಿಕೇಡ್ ಜಂಪ್​ ಮಾಡುತ್ತಿರುವುದಕ್ಕೆ ವ್ಯಂಗವಾಗಿ ಮಾತನಾಡಿದರು.

ಈ ರೀತಿ ಲಾಂಗ್ ಜಂಪ್, ಹೈ ಜಂಪ್ ಮಾಡುವುದರಿಂದ ಏನು ಸಾಧಿಸುತ್ತಾರೆ, ವಯಸ್ಸು ಆಗಿದೆ. ಏನಾದರೂ ಹೆಚ್ಚು ಕಮ್ಮಿ ಆದರೆ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ಇವರ ಈ ಜಂಪಿಂಗ್ ಹೈಕಮಾಂಡ್ ಮೆಚ್ಚಿಸಲು ಹೊರತು ಬೇರೆ ಏನೂ ಇಲ್ಲ. ಸೋನಿಯಾಗಾಂಧಿ ಅವರನ್ನು ಕಾಂಗ್ರೆಸ್ ಮುಖಂಡರೇ ಜೈಲಿಗೆ ಕಳುಹಿಸಿದರೆ ಅಚ್ಚರಿ ಪಡಬೇಕಿಲ್ಲ ಎಂದು ಹೇಳಿದರು.

ಓದಿ: ಜಮೀರ್ ಹೇಳಿಕೆ ದೊಡ್ಡದು ಮಾಡುವ ಅವಶ್ಯಕತೆ ಇಲ್ಲ: ಹೆಚ್​ಡಿಕೆ

Last Updated : Jul 26, 2022, 10:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.