ವಿಜಯಪುರ : ಕೇಂದ್ರ ಸರ್ಕಾರ ರೈಲ್ವೆ ಇಲಾಖೆ ಖಾಸಗೀಕರಣ ಕೈಬಿಡಬೇಕೆಂದು ಒತ್ತಾಯಿಸಿ ಸಿಯುಸಿಐ ಸಂಘಟನೆ ಕಾರ್ಯಕರ್ತರು ಪ್ರತಿಭಟಿಸಿದರು.
ನಗರದ ರೈಲ್ವೆ ನಿಲ್ದಾಣದ ಮುಂಭಾಗ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಬಿಜೆಪಿ ಸರ್ಕಾರ ಸರ್ಕಾರಿ ಒಡೆತನದ ಇಲಾಖೆಗಳ ಖಾಸಗೀಕರಣ ಮಾಡುವ ಮೂಲಕ ಕಾರ್ಪೊರೇಟ್ ಕಂಪನಿಗಳ ಕಪಿಮುಷ್ಟಿಗೆ ನೀಡಲು ಹೊರಟಿದೆ.
ಬಂಡವಾಳಶಾಹಿಗಳ ಪರ ಜಿಜೆಪಿ ಸರ್ಕಾರ ಆಡಳಿತ ನಡೆಸಲು ಹೊರಟಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು. ಸಾರ್ವಜನಿಕ ಸಂಸ್ಥೆಗಳನ್ನ ರಕ್ಷಕಿಸಬೇಕಾದ ಸರ್ಕಾರ ಖಾಸಗೀಕರಣದ ಹೆಜ್ಜೆ ಇಟ್ಟಿರುವುದು ಸರಿಯಿಲ್ಲ ಎಂದು ದೂರಿದರು.
ಕೇಂದ್ರ ಸರ್ಕಾರ ವಿವೇಕ್‌ದೇವ್ ರಾಯ್ ಸಮಿತಿ ಶಿಫಾರಸುಗಳನ್ನ ಕೈಬಿಡಬೇಕು. ಖಾಸಗಿ ರೈಲು ಓಡಿಸುವ ನಿರ್ಧಾರ ಕೈಬಿಡಬೇಕು. ಉದ್ಯೋಗ ಕಡಿತ ಮಾಡದೇ ಹೆಚ್ಚಿನ ಉದ್ಯೋಗ ಭರ್ತಿಗೆ ಸರ್ಕಾರ ಒತ್ತು ನೀಡುವುದು ಸೇರಿ ಹಲವು ಬೇಡಿಕೆಗಳಿಗೆ ಒತ್ತಾಯಿಸಿ ರೈಲ್ವೆ ಅಧಿಕಾರಗಳ ಮೂಲಕ ಪ್ರತಿಭಟನಾಕಾರರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.