ವಿಜಯಪುರ: ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಮುಗಿಸಿ ಬೈಕ್ ಮೇಲೆ ತೆರಳುತ್ತಿದ್ದ ವಿದ್ಯಾರ್ಥಿಗಳ ಬೈಕ್ಗೆ ಕಾರು ಮುಖಾಮುಖಿ ಡಿಕ್ಕಿಯಾಗಿ ಒಬ್ಬ ವಿದ್ಯಾರ್ಥಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕೋಲ್ಹಾರ ತಾಲೂಕಿನ ಮಲಘಾಣ ಕ್ರಾಸ್ ಬಳಿ ನಡೆದಿದೆ.
ಮಲಘಾಣ ಕ್ರಾಸ್ ಬಳಿ ಎನ್ಹೆಚ್ 218ರಲ್ಲಿ ಘಟನೆ ನಡೆದಿದ್ದು, ವಿದ್ಯಾರ್ಥಿ ಮಂಜುನಾಥ ರೂಡಗಿ (18) ಎಂಬಾತ ಮೃತಪಟ್ಟಿದ್ದಾನೆ. ಸಂಗು ಜಮಖಂಡಿ, ನೀಲಪ್ಪ ಜಮಖಂಡಿ, ರಮೇಶ ಮೋಹಿತೆ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.
ಪರೀಕ್ಷೆ ಬರೆದು ಸ್ವಗ್ರಾಮ ರೋಣಿಹಾಳಕ್ಕೆ ವಾಪಸ್ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಘಟನೆ ಬಳಿಕ ಕಾರ್ ಚಾಲಕ ಪರಾರಿಯಾಗಿದ್ದು, ಕೋಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.