ETV Bharat / state

ಕೊರೊನಾ ವಾರಿಯರ್ಸ್​ಗೆ ಹೂಮಳೆಗರೆದು ಸ್ವಾಗತ ಕೋರಿದ ಜನ!

ವಿಜಯಪುರ ಜಿಲ್ಲೆ ಚಡಚಣದಲ್ಲಿ ಕೊರೊನಾ ವಿರುದ್ಧ ಸೆಣಸಾಡುತ್ತಿರುವ ಪೊಲೀಸ್​, ವೈದ್ಯಕೀಯ ಇಲಾಖೆ ಸೇರಿದಂತೆ ಎಲ್ಲರಿಗೂ ವಿಶೇಷ ಗೌರವ ಸಲ್ಲಿಸಲಾಯಿತು. ಪೊಲೀಸ್​ ಸಿಬ್ಬಂದಿಗೆ ಹೂಮಳೆಗರೆದು ಸ್ವಾಗತ ಕೋರಲಾಯಿತು.

author img

By

Published : May 6, 2020, 12:08 AM IST

Public wish to Corona Warriors in vijaypura
ಕೊರೊನಾ ವಾರಿಯರ್ಸ್​ಗೆ ಪುಷ್ಪ ಅರ್ಪಿಸಿ ಸ್ವಾಗತ ಕೋರಿದ ಜನರು

ವಿಜಯಪುರ: ಕೊರೊನಾ ಆತಂಕದ ನಡುವೆಯೂ ದಿನದ 24 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುತ್ತಿರುವ ಚಡಚಣ ಪೊಲೀಸರಿಗೆ ಎಂಇಎಸ್ ಶಿಕ್ಷಣ ಸಂಸ್ಥೆಯಿಂದ ವಿಶೇಷ ಅಭಿನಂದನೆ ಸಲ್ಲಿಸಲಾಯಿತು.

ಕೊರೊನಾ ವಾರಿಯರ್ಸ್​ಗೆ ಹೂಮಳೆಗರೆದು ಸ್ವಾಗತ ಕೋರಿದ ಜನರು

ಜಿಲ್ಲೆಯ ಜನರು ಕೊರೊನಾ‌ ಭೀತಿಯಿಂದ ಸಂಕಷ್ಟದಲ್ಲಿದ್ದಾರೆ. ದೇಶದಲ್ಲಿ ಕಳೆದ 44 ದಿನಗಳಿಂದ ಲಾಕ್​ಡೌನ್ ಜಾರಿಯಲ್ಲಿದೆ. ಅಂದಿನಿಂದ ಪೊಲೀಸ್​ ಇಲಾಖೆ, ವೈದ್ಯಕೀಯ ಇಲಾಖೆ ಹಾಗೂ ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು, ಮಾಧ್ಯಮ ಕ್ಷೇತ್ರದವರು ಜೀವದ ಹಂಗು ತೊರೆದು‌ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅಂತಹ ಕೊರೊನಾ ವಾರಿಯರ್ಸ್‌ಗೆ ಚಡಚಣ ಪಟ್ಟಣ ಜನರು ವಿಶೇಷವಾಗಿ ಸ್ವಾಗತಿಸಿದರು. ಚಡಚಣ ಪೊಲೀಸ್ ಠಾಣೆ ಪಿಎಸ್‌ಐ ಮಹಾದೇವ ಯಲಗಾರ ಹಾಗೂ ಪೊಲೀಸ್ ಸಿಬ್ಬಂದಿಗೆ ಹೂಮಳೆಗರೆದು ಧನ್ಯವಾದ ಸಲ್ಲಿಸಿದರು‌.

ಇನ್ನು ಪೊಲೀಸ್ ಸಿಬ್ಬಂದಿಯನ್ನು ಸ್ವಾಗತಿಸುವ ಭರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಕಂಡು ಬಂತು. ಕೂಡಲೇ ಪೊಲೀಸರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.