ETV Bharat / state

ಮುದ್ದೇಬಿಹಾಳ: ಉಚ್ಛಾಟನೆಗೊಂಡ ವಿಜಯಪುರದ ಜಿ.ಪಂ.ಸದಸ್ಯರ ವಿರುದ್ಧ ಪ್ರತಿಭಟನೆ - MUddebiha news

ಬಿಜೆಪಿ ಕಾರ್ಯಕರ್ತರು ಜಿ.ಪಂ.ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಇಂದು ಮುದ್ದೇಬಿಹಾಳ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಅವರ ವಿರುದ್ಧ ಧಿಕ್ಕಾರ ಕೂಗಿ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ವಿಜಯಪುರದ ಜಿ.ಪಂ ಸದಸ್ಯರ ವಿರುದ್ಧ ಪ್ರತಿಭಟನೆ
ವಿಜಯಪುರದ ಜಿ.ಪಂ ಸದಸ್ಯರ ವಿರುದ್ಧ ಪ್ರತಿಭಟನೆ
author img

By

Published : Jul 3, 2020, 4:29 PM IST

ಮುದ್ದೇಬಿಹಾಳ : ವಿಜಯಪುರ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇರುವ ಅವಕಾಶವಿದ್ದರೂ ಪಕ್ಷ ವಿರೋಧಿ ಚಟುವಟಿಕೆ ಮಾಡಿ ಉಚ್ಛಾಟನೆಗೊಂಡಿರುವ ನಾಲ್ವರು ಬಿಜೆಪಿ ಜಿ.ಪಂ ಸದಸ್ಯರ ವಿರುದ್ಧ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಉಚ್ಛಾಟನೆಗೊಂಡ ಸದಸ್ಯರ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ವಿಜಯಪುರದ ಜಿ.ಪಂ ಸದಸ್ಯರ ವಿರುದ್ಧ ಪ್ರತಿಭಟನೆ

ಈ ವೇಳೆ ಮಾತನಾಡಿದ ಪಕ್ಷದ ಮಂಡಲ ಅಧ್ಯಕ್ಷ ಪರಶುರಾಮ ಪವಾರ, ಹಣಕ್ಕಾಗಿ ತಮ್ಮತನವನ್ನೇ ಸದಸ್ಯರು ಮಾರಿಕೊಂಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಇವರಿಗೆ ಜನರು ಮುಂಬರುವ ದಿನಗಳಲ್ಲಿ ಯಾವುದೇ ಪಕ್ಷದಲ್ಲಿರಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಹಿರಿಯ ಮುಖಂಡ ಪ್ರಭು ಕಡಿ ಮಾತನಾಡಿ, ಪಕ್ಷ ನಿಷ್ಠೆ ಇಲ್ಲದವರಿಗೆ, ಹಣದ ನಿಷ್ಠೆ ಇದ್ದವರಿಗೆ ಟಿಕೆಟ್ ಕೊಟ್ಟಿದ್ದು ತಪ್ಪು. ಟಿಕೆಟ್ ಕೊಡುವಾಗ ಪಕ್ಷದಲ್ಲಿ ಲೋಪವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖಂಡರಾದ ಹಣಮಂತ ನಲವಡೆ, ಮಂಜುನಾಥ ರತ್ನಾಕರ, ಗೌರಮ್ಮ ಹುನಗುಂದ, ಶಿವು ದಡ್ಡಿ, ಲಕ್ಷ್ಮಣ ಢವಳಗಿ, ಅನಿಲ ಹಡಪದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.