ವಿಜಯಪುರ: ಗಡಿಭಾಗ ಮಹಾರಾಷ್ಟ್ರದ ಕೊಲ್ಹಾಪುರ ಬಳಿ ಕೃಷ್ಣಾ ನದಿ ಪ್ರವಾಹದಲ್ಲಿ ಸಿಲುಕಿದ್ದ ಕರ್ನಾಟಕದ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ.
ಇಂಡಿಯಿಂದ ಮಹಾರಾಷ್ಟ್ರದ ರತ್ನಗಿರಿಗೆ ಹೊರಟಿದ್ದ ಬಸ್ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕೊಲ್ಹಾಪುರದಿಂದ 2 ಕಿ. ಮೀ. ದೂರದಲ್ಲಿ ದೊಡ್ಡ ಹಳ್ಳದಲ್ಲಿ ಸಿಲುಕಿಕೊಂಡಿತ್ತು. ಏಕಾಏಕಿ ಕೃಷ್ಣಾ ನದಿ ಪ್ರವಾಹದಿಂದ ಅರ್ಧ ಬಸ್ ಮುಳುಗಿತ್ತು. ಬಸ್ನಲ್ಲಿದ್ದ 19 ಜನರನ್ನು ಎನ್ಡಿಆರ್ಎಫ್ ತಂಡ ರಕ್ಷಣೆ ಮಾಡಿದೆ.
ಇಂಡಿಯಿಂದ ಮಹಾರಾಷ್ಟ್ರದ ರತ್ನಗಿರಿಗೆ KA-28/F-2230 ನಂಬರ್ನ ಬಸ್ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಈ ಬಸ್ ಚಾಲಕ ಶ್ರೀಶೈಲ ಬೋಳೆಗಾಂವ, ನಿರ್ವಾಹಕ ಸೇರಿ ಬಸ್ನಲ್ಲಿದ್ದ 19 ಮಂದಿಯನ್ನು ರಕ್ಷಿಸಲಾಗಿದೆ. ಬಸ್ ಹಳ್ಳದಲ್ಲಿ ಸಿಲುಕಿಕೊಂಡಿದೆ ಎನ್ನುವ ಮಾಹಿತಿ ಸಿಕ್ಕ ಕೂಡಲೇ ಎನ್ಡಿಆರ್ಎಫ್ ತಂಡ ಘಟನಾ ಸ್ಥಳಕ್ಕೆ ದೌಡಾಯಿಸಿ ಎಲ್ಲರನ್ನೂ ರಕ್ಷಣೆ ಮಾಡಿದೆ.
ಇದನ್ನೂ ಓದಿ: ಸಿಧು ಪದಗ್ರಹಣಕ್ಕೆ ತೆರಳುತ್ತಿದ್ದ ಬಸ್ ಅಪಘಾತ: ಐವರ ದುರ್ಮರಣ.. ಹಲವರ ಸ್ಥಿತಿ ಗಂಭೀರ!
ಈ ವಿಷಯ ತಿಳಿದ ವಿಜಯಪುರ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಪ್ರಯಾಣಿಕರು ಸುರಕ್ಷಿತ ಸ್ಥಳಕ್ಕೆ ತೆರಳಲು ನೆರವಾಗಿದ್ದಾರೆ. ಈಗಲೂ ಬಸ್ ಹಳ್ಳದ ನೀರಿನಲ್ಲಿ ನಿಂತಿದೆ ಎಂದು ಕೆಎಸ್ಆರ್ಟಿಸಿ ಡಿಸಿ ಕುರುಬರ ತಿಳಿಸಿದ್ದಾರೆ.