ವಿಜಯಪುರ: ಕೇಂದ್ರ ಸರ್ಕಾರದಿಂದ ಭಾರತ್ ಮಾಲಾ ರಾಷ್ಟ್ರೀಯ ಹೆದ್ದಾರಿ ರೂಪಿಸುವ ಮಾಜಿ ಪ್ರಧಾನಿ ವಾಜಪೇಯಿ ಅವರ ಕನಸು ನನಸಾಗಿಸಲು ರಾಷ್ಟ್ರೀಯ ಹೆದ್ದಾರಿಗಳಿಗಾಗಿ 3.30 ಲಕ್ಷ ಕೋಟಿ ರೂ.ಗಳನ್ನು ಒದಗಿಸಿದ್ದು, ಈ ವರ್ಷ 13 ಸಾವಿರ ಕೋಟಿ ರೂ.ಗಳ ರಸ್ತೆ ಅಭಿವೃದ್ಧಿಗೆ ಕ್ರಮಕೈಗೊಂಡಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ನಿನ್ನೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಉತ್ತರ ಕರ್ನಾಟಕದ 13 ರಾಷ್ಟ್ರೀಯ ಹೆದ್ದಾರಿಗಳು ಮತ್ತು ವಿಜಯಪುರದಿಂದ ಸಂಕೇಶ್ವರವರೆಗಿನ 80 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ, ಒಟ್ಟು 21,000 ಕೋಟಿ.ರೂ ಅನುದಾನ ಒದಗಿಸಿದೆ ಎಂದು ಹೇಳಿದರು. ಜಿಲ್ಲೆಯ ಹಿತದೃಷ್ಟಿಯಿಂದ ವಿಜಯಪುರ ಪ್ರವಾಸಿ ಮಂದಿರದಿಂದ ಅಥಣಿವರೆಗಿನ ರಸ್ತೆ ಹೆದ್ದಾರಿ 548 ಬಿ, ಮಹಾರಾಷ್ಟ್ರದಿಂದ ಸಾವಳಗಿ ಕ್ರಾಸ್‍ವರೆಗೆ 146 ಕಿ.ಮೀ, ತಿಕೋಟಾದಿಂದ ಮಹಾರಾಷ್ಟ್ರ ಗಡಿವರೆಗೆ 146 ಇ ಹಾಗೂ ವಿಜಯಪುರದಿಂದ ಸಿದ್ಧಾಪುರವರೆಗೆ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಲು 561 ಎ ರಸ್ತೆ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ. ಹುಬ್ಬಳ್ಳಿಯಿಂದ ಸೋಲಾಪೂರವರೆಗಿನ ರಾಷ್ಟ್ರೀಯ ಹೆದ್ದಾರಿ ಮುಕ್ತಾಯ ಹಂತದಲ್ಲಿದೆ. ಹಾಗೂ ಲಿಂಗಸೂರ-ಸಿರಾಡೋಣ ರಾಷ್ಟ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರವು ಜಲಜೀವನ್ ಮಿಷನ್ ಯೋಜನೆಗಾಗಿ 2.87 ಲಕ್ಷ ಕೋಟಿ ರೂ. ಕೃಷಿಗೆ 1 ಲಕ್ಷ ಕೋಟಿ ರೂ, ರಕ್ಷಣಾ ಕ್ಷೇತ್ರಕ್ಕೆ 4.80 ಲಕ್ಷ ಕೋಟಿ ರೂ, ಒದಗಿಸಿದ್ದು, ಉಜ್ವಲಾ ಯೋಜನೆಯಲ್ಲಿ 1 ಕೋಟಿ ಜನರಿಗೆ ಉಚಿತವಾಗಿ ಈ ಬಾರಿ ಹೊಸ ಗ್ಯಾಸ್ ಸಿಲಿಂಡರ್ಗಳನ್ನು ಒದಗಿಸಲಾಗಿದೆ. ಆತ್ಮನಿರ್ಭರ ಭಾರತಕ್ಕೆ 20 ಲಕ್ಷ ಕೋಟಿ ರೂ. ಕೇಂದ್ರ ಸರ್ಕಾರ ಒದಗಿಸಿದೆ ಎಂದು ಹೇಳಿದರು.
ಜಿಲ್ಲೆಗೆ 2019-20 ನೇ ಸಾಲಿನಲ್ಲಿ ರೂ. 6335.05 ಲಕ್ಷಗಳ ಅಂದಾಜು ಮಂಜೂರಾಗಿದ್ದು, ಅದರಲ್ಲಿ 34.23 ಕಿ.ಮೀ ಉದ್ದ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿರುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವರೂ ಆದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು. 2020-21 ನೇ ಸಾಲಿನಲ್ಲಿ ರೂ.2268.00 ಲಕ್ಷಗಳು ಅಂದಾಜು ಮಂಜೂರಾಗಿದ್ದು, 19.65 ಕಿ.ಮೀ ಉದ್ದ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. 2019-20 ನೇ ಸಾಲಿನಲ್ಲಿ ರೂ. 45702.81 ಲಕ್ಷಗಳ ಅಂದಾಜು ಮಂಜೂರಾಗಿದ್ದು, ಅದರಲ್ಲಿ 189.97 ಕಿ.ಮೀ ಉದ್ದ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿರುತ್ತದೆ. 2020-21 ಸಾಲಿನಲ್ಲಿ ರೂ.4699.41 ಲಕ್ಷಗಳು ಅಂದಾಜು ಮಂಜೂರಾಗಿದ್ದು 92.95 ಕಿ.ಮೀ ಉದ್ದ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ತಿಳಿಸಿದರು.
2019-20 ನೇ ಸಾಲಿನಲ್ಲಿ ರೂ. 399.00 ಲಕ್ಷಗಳ ಅಂದಾಜು ಮಂಜೂರಾಗಿದ್ದು, ಅದರಲ್ಲಿ 444.49 ಕಿ.ಮೀ ಉದ್ದ ರಸ್ತೆಯನ್ನು ನಿರ್ವಹಣೆ ಮಾಡಲಾಗಿದೆ. 2020-21 ನೇ ಸಾಲಿನಲ್ಲಿ ರೂ. 429.85 ಲಕ್ಷ ರೂ.ಗಳ ಅಂದಾಜು ಮಂಜೂರಾಗಿದ್ದು, 522.43 ಕಿ.ಮೀ ರಸ್ತೆಯನ್ನು ನಿರ್ವಹಣೆ ಮಾಡಲಾಗಿದೆ. 2019-20 ನೇ ಸಾಲಿನಲ್ಲಿ ರೂ.862.00 ಲಕ್ಷಗಳ ಅಂದಾಜು ಮಂಜೂರಾಗಿದ್ದು, ಅದರಲ್ಲಿ 1726.79 ಕಿ.ಮೀ ನಿರ್ವಹಣೆ ಮಾಡಲಾಗಿದೆ ಹಾಗೂ 2020-21 ಸಾಲಿನಲ್ಲಿ ರೂ. 1103.32 ಲಕ್ಷಗಳು ಅಂದಾಜು ಮಂಜೂರಾಗಿದ್ದು, 1811.97 ಕಿ.ಮೀ ಉದ್ದದ ರಸ್ತೆಯನ್ನು ನಿರ್ವಹಣೆ ಮಾಡಲಾಗಿದೆ ಎಂದು ಹೇಳಿದರು.
2019-20ನೇ ಸಾಲಿನಲ್ಲಿ 115.00 ಲಕ್ಷ ರೂ.ಗಳ ಅಂದಾಜು ಮಂಜೂರಾಗಿದ್ದು ಅದರಲ್ಲಿ 2 ನಂ. ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. 2020-21 ನೇ ಸಾಲಿನಲ್ಲಿ 61.25 ಲಕ್ಷ ರೂ.ಗಳು ಮಂಜೂರಾಗಿದ್ದು, ನಂ. 1 ಸೇತುವೆ ನಿರ್ಮಾಣ ಮಾಡಲಾಗಿದೆ. 2019-20 ನೇ ಸಾಲಿನಲ್ಲಿ ರೂ. 680.00 ಲಕ್ಷಗಳ ಮಂಜೂರಾಗಿದ್ದು, ಅದರಲ್ಲಿ 2 ನಂ, ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ ಹಾಗೂ 2020-21 ನೇ ಸಾಲಿನಲ್ಲಿ ರೂ. 291.30 ಲಕ್ಷಗಳು ಮಂಜೂರಾಗಿದ್ದು, 3 ನಂ, ಸೇತುವೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. 2019-20 ನೇ ಸಾಲಿನಲ್ಲಿ ರೂ.2728.00 ಲಕ್ಷಗಳ ಅಂದಾಜು ಮಂಜೂರಾಗಿದ್ದು, ಅದರಲ್ಲಿ 7 ನಂ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ ಹಾಗೂ 2020-21 ನೇ ಸಾಲಿನಲ್ಲಿ ರೂ. 1875.00 ಲಕ್ಷಗಳ ಅಂದಾಜು ಮಂಜೂರಾಗಿದ್ದು, ಅದರಲ್ಲಿ 27 ನಂ, ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಹುಬ್ಬಳ್ಳಿಯಿಂದ ನೆರೆಯ ಜಿಲ್ಲೆಗಳಿಗೆ ತಡೆ ರಹಿತ ವೋಲ್ವೊ ಬಸ್ ಸಂಚಾರ ಶೀಘ್ರ ಆರಂಭ